ಅಂಬರೀಷ್ ಸ್ಮಾರಕಕ್ಕೆ ನಾಳೆ ಗುದ್ದಲಿ ಪೂಜೆ

Social Share

ಬೆಂಗಳೂರು.ಫೆ.26- ರೆಬಲ್‍ಸ್ಟಾರ್ ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ನಾಳೆ ಗುದ್ದಲಿ ಪೂಜೆ ನೆರವೇರಲಿದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೆ ಮೈಸೂರಿನಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ನಾಳೆ ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರೆವೇರಿಸಲಾಗುವುದು ಎಂದು ಹೇಳಿದರು.
ಅದೇ ರೀತಿ ಚಿತ್ರನಗರಿ ನಿರ್ಮಾಣಕ್ಕೆ ಸ್ಥಳ ನಿಗಧಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಸರ್ಕಾರ ಸೂಚಿಸುವ ಪ್ರದೇಶದಲ್ಲೇ ಚಿತ್ರ ನಗರಿ ನಿರ್ಮಾಣ ಮಾಡಲಾಗುವುದು ಎಂದರು. ಮೈಸೂರು ಇಲ್ಲವೆ ಹೆಸರಘಟ್ಟದಲ್ಲಿ ಚಿತ್ರ ನಗರಿ ನಿರ್ಮಾಣ ಮಾಡಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ.
ಸರ್ಕಾರ ಈ ಎರಡು ಸ್ಥಳಗಳಲ್ಲಿ ಯಾವುದೇ ಸ್ಥಳ ಸೂಚಿಸಿದರು ಅದೇ ಸ್ಥಳದಲ್ಲಿ ಚಿತ್ರ ನಗರಿ ನಿರ್ಮಾಣವಾಗಲಿದೆ ಎಂದು ಹೇಳಿದರು. ಕಳೆದ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ದುಡಿದಿರುವ ಬಹಳಷ್ಟು ಕಲಾವಿದರಿಗೆ ನಿವೇಶನವೇಇಲ್ಲ. ಕಲಾವಿದರಿಗೆ ನಿವಶೇನ ಹಂಚಿಕೆಗೆ ಸಹಕಾರಿಯಾಗುವಂತೆ 500 ಎಕರೆ ಜಮೀನು ನೀಡುವಂತೆ ಸರ್ಕಾರವನ್ನು ಕೇಳಿಕೊಂಡಿದ್ದೇವೆ ಎಂದು ಜೈರಾಜ್ ತಿಳಿಸಿದರು.
ಪ್ರತಿವರ್ಷ 175 ಚಿತ್ರಗಳಿಗೆ ಸಬ್ಸಿಡಿ ಕೊಡಬೇಕು, ಆದರೆ, ಸರ್ಕಾರ ಕೇವಲ 125 ಚಿತ್ರಗಳಿಗೆ ವಿನಾಯಿತಿ ನೀಡುತ್ತಿದೆ. ಮೊದಲಿನಂತೆ 175 ಚಿತ್ರಗಳಿಗೆ ಸಬ್ಸಿಡಿ ನೀಡುವಂತೆಯೂ ಸರ್ಕಾರವನ್ನು ಕೇಳಿಕೊಳ್ಳಲಾಗಿದೆ ಎಂದರು. ಕೊರೊನಾದಿಂದಾಗಿ ಕಳೆದ ಮೂರು ವರ್ಷಗಳಿಂದ ತಡೆ ಹಿಡಿಯಲಾಗಿದ್ದ ಚಿತ್ರೊದ್ಯಮ ಪ್ರಶಸ್ತಿ ನೀಡುವಂತೆ ನಾವು ಕೇಳಿಕೊಂಡಿದ್ದು ಸರ್ಕಾರದಿಂದ ಸಕರಾತ್ಮಾಕ ಪ್ರತಿಕ್ರಿಯೆ ಬಂದಿದೆ ಎಂದು ಅವರು ವಿವರಿಸಿದರು.

Articles You Might Like

Share This Article