ಔರಂಗಾಬಾದ್,ಫೆ.14- ಅಜ್ಜಿ ಹೊಸ ಚಪ್ಪಲಿ ಕೊಡಿಸಲಿಲ್ಲ ಎಂದು 10 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ 10 ವರ್ಷದ ಬಾಲಕ ತನ್ನ ಅಜ್ಜಿ ಹೊಸ ಪಾದರಕ್ಷೆಗಳನ್ನು ಖರೀದಿಸಲು ನಿರಾಕರಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಕ್ಕದ ಹಳ್ಳಿಯ ದಂಪತಿ ಮಗು ತನ್ನ ಅಜ್ಜಿಯೊಂದಿಗೆ ವಾಸಿಸುತಿತ್ತು. ಹೊರಗಡೆ ಹೋಗಿದ್ದಾಗ ಮಗು ಹೊಸ ಜೋಡಿ ಚಪ್ಪಲಿಗಳನ್ನು ಕೇಳಿದನು ಆದರೆ ಅವನ ಬೇಡಿಕೆಗೆ ಅವನ ಅಜ್ಜಿ ಒಪ್ಪಲಿಲ್ಲ.
ಇದರಿಂದ ಮನನೊಂದ ಮಗು ಮನೆಗೆ ಬಂದ ನಂತರ ಅಮ್ಮನ ಮನೆಗೆ ಹೋಗುವುದಾಗಿ ಪಟ್ಟು ಹಿಡಿಯಿತು. ನಂತರ ಅಮ್ಮನ ಮನೆಗೆ ಹೋಗುವಾಗ ದಾರಿ ಮಧ್ಯೆ ಸೀರೆಯಿಂದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
#Refused, #NewChappals, #10YearOld, #Dies, #Suicide, #Maharashtra, #Cops,