ನೂತನ ರಾಷ್ಟ್ರಾಧ್ಯಕ್ಷರಿಗೆ ತವರಿನ ಸೀರೆ ಉಡುಗೊರೆ

Social Share

ಭುವನೇಶ್ವರ, ಜು.23- ರಾಷ್ಟ್ರಾದ್ಯಕ್ಷರಾಗಿ ನಾಳೆ ಅಧಿಕಾರ ಸ್ವೀಕರಿಸುವ ದ್ರೌಪದಿ ಮುರ್ಮು ಅವರಿಗಾಗಿ ಅತ್ತಿಗೆ ಸಾಂಪ್ರದಾಯಿಕ ಸಂತಾಲಿ ಸೀರೆಯನ್ನು ಉಡುಗೊರೆಯಾಗಿ ತರುತ್ತಿದ್ದು, ಪ್ರಮಾಣ ವಚನ ಸ್ವೀಕಾರದ ವೇಳೆ ಅದನ್ನು ಧರಿಸುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ದೆಹಲಿಯ ಸಂಸತ್ ಕೇಂದ್ರ ಸಭಾಂಗಣದಲ್ಲಿ ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ದ್ರೌಪತಿ ಮುರ್ಮ ಅವರಸಹೋದರ ತಾರಿನಿಸೇನ್ ತುಡು ಮತ್ತು ಅವರ ಪತ್ನಿ ಸುಕ್ರಿ ತುಡು ದೆಹಲಿಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಕ್ರಿ, ನಾನು ದೀದಿ (ಅಕ್ಕ) ಗಾಗಿ ಸಂತಾಲಿ ಸಾಂಪ್ರದಾಯಿಕ ಸೀರೆಯನ್ನು ಒಯ್ಯುತ್ತಿದ್ದೇನೆ. ಪ್ರಮಾಣ ವಚನ ಸ್ವೀಕಾರದ ಸಮಯದಲ್ಲಿ ಇದನ್ನು ಧರಿಸುವಂತೆ ಪ್ರಾರ್ಥಿಸುತ್ತೇನೆ. ಆದರೆ ಈ ಸಂದರ್ಭದಲ್ಲಿ ಅವರು ನಿಜವಾಗಿ ಏನು ಧರಿಸುತ್ತಾರೆ ಎಂದು ನನಗೆ ಖಚಿತವಿಲ್ಲ. ರಾಷ್ಟ್ರಪತಿ ಭವನ ಸಿಬ್ಬಂದಿಗಳು ಹೊಸ ಅಧ್ಯಕ್ಷರ ಉಡುಗೆಯನ್ನು ನಿರ್ಧರಿಸುತ್ತದೆ ಎಂದು ಸುಕ್ರಿ ಹೇಳಿದರು.

ಸಂತಾಲಿ ಸೀರೆಗಳು ಒಂದು ತುದಿಯಲ್ಲಿ ಕೆಲವು ಪಟ್ಟೆಗಳನ್ನು ಹೊಂದಿರುತ್ತವೆ. ವಿಶೇಷ ಸಂದರ್ಭಗಳಲ್ಲಿ ಸಂತಾಲ್ ಮಹಿಳೆಯರು ಇವನ್ನು ಧರಿಸುತ್ತಾರೆ. ಸೀರೆಯು ಲಂಬವಾಗಿ ಸಮ್ಮಿತೀಯವಾಗಿದ್ದು, ಎರಡೂ ತುದಿಗಳನ್ನು ಒಂದೇ ಮಾದರಿಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.

ತನ್ನ ಪತಿ ಮತ್ತು ಕುಟುಂಬ ಸದಸ್ಯರೊಂದಿಗೆ ಮಯೂರ್ಭಂಜ್ ಜಿಲ್ಲೆಯ ರಾಯರಂಗ್ಪುರ್ ಬಳಿಯ ಉಪರಬೇಡ ಗ್ರಾಮದಲ್ಲಿ ವಾಸಿಸುತ್ತಿರುವ ಸುಕ್ರಿ ಅವರು ಸಾಂಪ್ರದಾಯಿಕ ಸಿಹಿ ತಿನಿಸುಗಳನ್ನು ಜೊತೆಯಲ್ಲಿ ಒಯ್ಯುತ್ತಿರುವುದಾಗಿ ಹೇಳಿದರು.

ಮುರ್ಮು ಅವರ ಪುತ್ರಿ ಇತಿಶ್ರೀ, ಬ್ಯಾಂಕ್ ಅಧಿಕಾರಿ ಮತ್ತು ಅವರ ಪತಿ ಗಣೇಶ್ ಹೆಂಬ್ರಾಮ್ ಅವರು ನವದೆಹಲಿಗೆ ಆಗಮಿಸಿ ಚುನಾಯಿತ ಅಧ್ಯಕ್ಷರೊಂದಿಗೆ ಉಳಿದುಕೊಂಡಿದ್ದಾರೆ. ಮುರ್ಮು ಅವರ ಸಹೋದರ, ಸೊಸೆ, ಮಗಳು ಮತ್ತು ಅಳಿಯ ನಾಳೆ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳೀಸಿದ್ದಾರೆ.

ಬಿಜೆಡಿ ಅಧ್ಯಕ್ಷ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನಾಲ್ಕು ದಿನಗಳ ಪ್ರವಾಸಕ್ಕಾಗಿ ಶನಿವಾರ ದೆಹಲಿಗೆ ತೆರಳಿದ್ದು, ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಯೂರ್ಭಂಜ್ ಜಿಲ್ಲೆಯ ಆರು ಬಿಜೆಪಿ ಶಾಸಕರು, ಈಶ್ವರೀಯ ಪ್ರಜಾಪತಿ ಬ್ರಹ್ಮಕುಮಾರಿಯ ರಾಯರಂಗಪುರ ಶಾಖೆಯ ಮೂವರು ಸದಸ್ಯರಾದವ ಬ್ರಹ್ಮಕುಮಾರಿ ಸುಪ್ರಿಯಾ, ಬ್ರಹ್ಮ ಕುಮಾರಿ ಬಸಂತಿ, ಬ್ರಹ್ಮ ಕುಮಾರ್ ಗೋವಿಂದ್ ಅವರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಹ್ವಾನಿಸಲಾಗಿದೆ.
ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ್ ಮತ್ತು ಬಿಸ್ವೆಶ್ವರ್ ತುಡು, ಪಕ್ಷದ ಸಂಸದರಾದ ಸುರೇಶ್ ಪೂಜಾರಿ, ಬಸಂತ್ ಪಾಂಡಾ, ಸಂಗೀತಾ ಕುಮಾರ ಸಿಂಘ್ದೇವ್ ಮತ್ತು ಅವರ ಪತಿ ಕೆವಿ ಸಿಂಘ್ದೇವ್ ಅವರು ಮುರ್ಮು ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ರಾಯರಂಗಪುರ ಸಮೀಪದ ಉಪರಬೇಡ ಗ್ರಾಮದ ಬುಡಕಟ್ಟು ಕುಟುಂಬದಿಂದ ಬಂದಿರುವ 64 ವರ್ಷದ ಮುರ್ಮು ಅವರು ಕೌನ್ಸಿಲರ್‍ನಿಂದ ಎಂಎಲ್‍ಎ, ಸಚಿವರು ಮತ್ತು ಜಾರ್ಖಂಡ್ ರಾಜ್ಯಪಾಲರಾಗಿ, ಈಗ ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗುವವರೆಗೆ ಬಹಳ ದೂರ ಸಾಗಿದ್ದಾರೆ.

Articles You Might Like

Share This Article