ಇಸ್ರೇಲ್‌-ಇರಾನ್‌ಗೆ ಪ್ರಯಾಣಿಸುವ ಭಾರತೀಯರೇ ಹುಷಾರಾಗಿರಿ

ನವದೆಹಲಿ,ಮೇ.4- ಇಸ್ರೇಲ್‌ ಮತ್ತು ಇರಾನ್‌ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಉಭಯ ದೇಶಗಳಿಗೆ ಪ್ರಯಾಣಿಸುವ ಭಾರತೀಯರಿಗೆ ಜಾಗರೂಕರಾಗಿರಿ ಮತ್ತು ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿರಿ ಎಂದು ಸಲಹೆ ನೀಡಿದೆ. ಇರಾನ್‌ ಮತ್ತು ಇಸ್ರೇಲ್‌ಗೆ ಪ್ರಯಾಣ ಸಲಹೆ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಂಇಎ ವಕ್ತಾರ ರಣಧೀರ್‌ ಜೈಸ್ವಾಲ್‌‍ ಅವರು, ನಾವು ಈ ಪ್ರದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಇರಾನ್‌ ಮತ್ತು ಇಸ್ರೇಲ್‌ ಹಲವಾರು ದಿನಗಳಿಂದ ತಮ ವಾಯುಪ್ರದೇಶವನ್ನು ತೆರೆದಿರುವುದನ್ನು ನಾವು ಗಮನಿಸಿದ್ದೇವೆ. ಈ ದೇಶಗಳಿಗೆ ಪ್ರಯಾಣಿಸುವಾಗ ಜಾಗರೂಕರಾಗಿರಲು ಮತ್ತು ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸಲಹೆ ನೀಡಿದ್ದಾರೆ. ಇದಕ್ಕೂ ಮೊದಲು ಏಪ್ರಿಲ್‌ 14 ರಂದು, ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇಸ್ರೇಲ್‌ನಲ್ಲಿರುವ ಭಾರತೀಯ ನಾಗರಿಕರಿಗೆ ಶಾಂತವಾಗಿರಲು ಮತ್ತು ಸ್ಥಳೀಯ ಅಧಿಕಾರಿಗಳು ನೀಡಿದ ಸುರಕ್ಷತಾ ಪ್ರೋಟೋಕಾಲ್‌ಗಳಿಗೆ ಬದ್ಧವಾಗಿರಲು ಸಲಹೆಯನ್ನು ನೀಡಿತು. ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಇಸ್ರೇಲ್‌ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ರಾಯಭಾರ ಕಚೇರಿ ಮತ್ತಷ್ಟು ಹೈಲೈಟ್‌ … Continue reading ಇಸ್ರೇಲ್‌-ಇರಾನ್‌ಗೆ ಪ್ರಯಾಣಿಸುವ ಭಾರತೀಯರೇ ಹುಷಾರಾಗಿರಿ