ರೆಪೋ ದರ ಹೆಚ್ಚಳದಿಂದ ಕೈಗಾರಿಕೆಗಳಿಗೆ ಹಾನಿ: ಎಫ್‍ಕೆಸಿಸಿಐ

Social Share

ಬೆಂಗಳೂರು,ಡಿ.12- ರೆಪೋ ದರ ಹೆಚ್ಚಳದಿಂದಾಗಿ ಕೈಗಾರಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದ್ದು ಭವಿಷ್ಯದಲ್ಲಿ ಮತ್ತೊಂದು ಸಮಸ್ಯೆಯನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಫ್‍ಕೆಸಿಸಿಐ ಆತಂಕ ವ್ಯಕ್ತಪಡಿಸಿದೆ.

ಆರ್‍ಬಿಐನ ಹಣಕಾಸು ನಿರ್ವಹಣಾ ಸಮಿತಿ ಇತ್ತೀಚೆಗೆ ನಡೆದ ಸಭೆಯಲ್ಲಿ ರೆಪೋ ದರವನ್ನು 35 ಮೂಲಾಂಶಗಳ ಆಧಾರದ ಮೇಲೆ ಹೆಚ್ಚಳ ಮಾಡಿದೆ. ಕಳೆದ ಮೇನಲ್ಲಿ 40 ಅಂಶಗಳ ಆಧಾರದ ಮೇಲೆ ರೆಪೋ ದರ ಹೆಚ್ಚಿಸಲಾಗಿತ್ತು.

ಕಳೆದ ಐದು ಅವಧಿಯಲ್ಲೂ 50 ಅಂಶಗಳ ಆಧಾರದ ಮೇಲೆ ಜೂನ್ ಮತ್ತು ಅಕ್ಟೋಬರ್‍ನಲ್ಲಿ ರೆಪೋ ಹೆಚ್ಚಳವನ್ನು ಏರಿಕೆಯಾಗುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ರೆಪೋ ದರ ಹೆಚ್ಚಿಸಿರುವುದಾಗಿ ಹೇಳಲಾಗುತ್ತಿದೆ. ಆದರೆ ವಾಸ್ತವದಲ್ಲಿ ಇದು ಕೈಗಾರಿಕೆಗಳಿಗೆ ಘಾಸಿ ಉಂಟು ಮಾಡುತ್ತಿದೆ ಎಂದು ಎಫ್‍ಕೆಸಿಸಿಐ ಬಿ.ವಿ.ಗೋಪಾಲ ರೆಡ್ಡಿ ಹೇಳಿದ್ದಾರೆ.

ಮತ್ತೆ ಮುನ್ನಲೆಗೆ ಬಂದ ಸಂಪುಟ ವಿಸ್ತರಣೆ ಚರ್ಚೆ : 6 ಮಂದಿಗೆ ಕೋಕ್ ?

ಸೇವೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅಂತರದ ವಹಿವಾಟು ನಡೆಸುವವರಿಗೆ ಭಾರೀ ಪೆಟ್ಟು ಬೀಳುತ್ತಿರುವುದನ್ನು ಎಫ್‍ಕೆಸಿಸಿಐ ಗಮನಿಸಿದೆ. ಹೀಗಾಗಿ ಸರ್ಕಾರ ಮತ್ತೊಂದು ಮಗ್ಗಲಿನಲ್ಲಿ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಇದೇ ಪರಿಸ್ಥಿತಿ ಮುಂದುವರೆದರೆ 2023ರ ವೇಳೆಗೆ ರೆಪೋ ದರ 225 ಮೂಲಾಂಶಗಳ ಆಧಾರದ ಮೇಲೆ ಹೆಚ್ಚಾಗುವ ಆತಂಕವಿದೆ ಎಂದು ತಿಳಿಸಿದ್ದಾರೆ. ಹಣದುಬ್ಬರ ಗಂಭೀರವಾಗಿದೆ ಎಂಬುದರ ಬಗ್ಗೆ ಎರಡು ಮಾತಿಲ್ಲ. ಆದರೆ ಅದನ್ನು ನಿಯಂತ್ರಿಸುವ ಕ್ರಮಗಳು ಇತರ ವ್ಯಾಪಾರ -ವಹಿವಾಟುಗಳ ಮೇಲೆ ಅಡ್ಡ ಪರಿಣಾಮ ಉಂಟು ಮಾಡಬಾರದು ಎಂದು ಹೇಳಿದ್ದಾರೆ.

ಗಡಿ ವಿವಾದ: ಏಕಪಕ್ಷೀಯ ನಿರ್ಧಾರ ಬೇಡ ಕೇಂದ್ರಕ್ಕೆ ಸಂಸದರ ನಿಯೋಗ ಆಗ್ರಹ

ಕೋವಿಡ್ ಸಾಂಕ್ರಾಮಿ ರೋಗ ಮತ್ತು ಜಾಗತಿಕ ಸವಾಲುಗಳ ನಡುವೆ ಪೂರೈಕೆ ಮತ್ತು ಹಂಚಿಕೆ ವಲಯ ಸಂಕಷ್ಟದಲ್ಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಸರಕಿನ ಕೊರತೆ, ರಾಷ್ಟ್ರೀಯ ಜಿಡಿಪಿಯ ಸೊರಗುವಿಕೆಯಿಂದಾಗಿ ಕೈಗಾರಿಕೆಗಳು ಸಮಸ್ಯೆ ಎದುರಿಸುತ್ತಿವೆ. ಶಾಸನ ರಚನೆ ಮಾಡುವವರು ಕೈಗಾರಿಕೆಗಳಿಂದ ಹೊರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Repo rate hikes, hitting, industry, bottom line, FKCCI,

Articles You Might Like

Share This Article