ಶರತ್‍ಚಂದ್ರ ,ಲಾಬುರಾಮ್‍ ಸೇರಿ20 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ

Social Share

ಬೆಂಗಳೂರು, ಜ.25- ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ರಾಜ್ಯದ 20 ಮಂದಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಾಷ್ಟ್ರಪತಿಯವರ ಪದಕ ಲಭಿಸಿದೆ. ರಾಷ್ಟ್ರಪತಿ ಅವರ ವಿಶಿಷ್ಟ ಸೇವಾ ಪದಕಕ್ಕೆ ಸಿಐಡಿ, ಎಡಿಜಿಪಿ, ಕೆ.ವಿ. ಶರತ್ ಚಂದ್ರ ಅವರು ಭಾಜನರಾಗಿದ್ದಾರೆ.

ಪೊಲೀಸ್ ಶ್ಲಾಘನೀಯ ಸೇವಾ ಪದಕ:
ರಾಜ್ಯ ಗುಪ್ತವಾರ್ತೆಯ ಹೆಚ್ಚುವರಿ ನಿರ್ದೇಶಕ ಲಾಭುರಾಮ್, ಪೊಲೀಸ್ ಪ್ರಧಾನ ಕಚೇರಿಯ ಡಿವೈಎಸ್‍ಪಿ ಎಸ್. ನಾಗರಾಜು, ಕೆಎಲ್‍ಎ ಡಿವೈಎಸ್‍ಪಿಗಳಾದ ವೀರೇಂದ್ರ ಕುಮಾರ್, ಪ್ರಮೋದ್ ಕುಮಾರ್, ಕಲ್ಬುರ್ಗಿ ಕರ್ನಾಟಕ ಲೋಕಾಯುಕ್ತ ಡಿವೈಎಸ್‍ಪಿ ಸಿದ್ದಲಿಂಗಪ್ಪ ಗೌಡ ಆರ್. ಪಾಟೀಲ್,

ಎನ್‍ಕ್ರೋಚ್‍ಮಂಟ್‍ನ ಎಸ್‍ಟಿಎಫ್ ಡಿವೈಎಸ್‍ಪಿ ಸಿ.ವಿ. ದೀಪಕ್, ನಗರ ವಿಶೇಷ ವಿಭಾಗದ ಡಿವೈಎಸ್‍ಪಿ ವಿಜಯ್ ಹೆಚ್., ಮಾದನಾಯಕನಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಮಂಜುನಾಥ್, ಅಶೋಕ ನಗರ ಸಂಚಾರಿ ಠಾಣೆ ಇನ್ಸ್‍ಪೆಕ್ಟರ್ ರಾವ ಗಣೇಶ್ ಜನಾರ್ಧನ್, ದಾವಣಗೆರೆ ವೃತ್ತ ನಿರೀಕ್ಷಕ ಆರ್.ಪಿ. ಅನೀಲ್,

ಸಮಾಜ ಕಲ್ಯಾಣ ಇಲಾಖೆ ಹೆಸರಲ್ಲಿ ವಂಚನೆ ವಂಚಿಸುತ್ತಿದ್ದ ಮೂವರ ಬಂಧನ

ಸಂಚಾರ ಮತ್ತು ಯೋಜನೆ ಇನ್ಸ್‍ಪೆಕ್ಟರ್ ಮನೋಜ್ ಎನ್. ಹೋವಳೆ, ಕೆ.ಎಸ್.ಆರ್. ಪಿ. 3ನೇ ಪಡೆಯ ಸ್ಪೆ.ಆರ್‍ಪಿಐ ವರದರಾಜು ಕೆ.ಎಸ್.ಆರ್. ಪಿ. 4ನೇ ಪಡೆಯ ನಾರಾಯಣರಾವ್, ವೆಂಕಟರಮಣ ಗೌಡ, 9ನೇ ಪಡೆಯ ಪಾಟೀಲ್, ಸಿಐಡಿಯ ಹೆಡ್‍ಕಾನ್ಸ್‍ಟೇಬಲ್, ಪ್ರಸನ್ನಕುಮಾರ್, ತುಮಕೂರು ಜಿಲ್ಲೆ ಸಂಚಾರಿ ಪೊಲೀಸ್ ಠಾಣೆಯ ಸಿಹೆಚ್‍ಸಿ ಪ್ರಭಾಕರ್, ಎಸ್‍ಸಿಆರ್‍ಬಿ ಮಹಿಳಾ ಹೆಡ್‍ಕಾನ್ಸ್‍ಟೇಬಲ್ ಸುಧಾ ಮತ್ತು ಸಿಟಿ ಕಂಟ್ರೋಲ್ ರೂಂನ ಸಿಹೆಚ್‍ಸಿ ರವಿಕುಮಾರ್ ಅವರುಗಳಿಗೆ ಪೊಲೀಸ್ ಶ್ಲಾಘನೀಯ ಸೇವಾ ಪದಕ ಲಭಿಸಿವೆ.

Republic Day 2023, President, medal, police,

Articles You Might Like

Share This Article