ಗಣರಾಜ್ಯೋತ್ಸವ ಸಂಧರ್ಭದಲ್ಲಿ ಹೊಸ ದಾಖಲೆ ಸೃಷ್ಟಿಸಿದ ರಾಜ್ಯಪಾರು

Social Share

ಬೆಂಗಳೂರು,ಜ.26- 74ನೇ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು ಬುಲೆಟ್ ಪ್ರೂಪ್ ಬಳಸದೆ ಸಾಮಾನ್ಯರಂತೆ ಭಾಷಣ ಮಾಡಿ ಹೊಸ ದಾಖಲೆ ಸೃಷ್ಟಿಸಿದರು.

ನಗರದ ಮಾಣಿಕ್ ಷಾ ಪರೇಡ್‍ನಲ್ಲಿ ನಡೆದ ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಜ್ಯಪಾಲರು ಭಾಷಣ ಮಾಡುವ ವೇಳೆ ಭದ್ರತಾ ಅಧಿಕಾರಿಗಳು ಅವರಿಗೆ ಬುಲೆಟ್ ಪ್ರೂಪ್ ಒದಗಿಸುತ್ತಾರೆ.

ಇದೇ ಮೊದಲ ಬಾರಿಗೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಹಾರಾಡಿದ ತಿರಂಗಾ

ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಹಾಗೂ ಜನವರಿ 26ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯಪಾಲರಿಗೆ ಶಿಷ್ಟಾಚಾರದಂತೆ ಬುಲೆಟ್ ಪ್ರೂಪ್ ಒದಗಿಸುವುದು ವಾಡಿಕೆ.

ಈ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿದ ರಾಜ್ಯಪಾಲರು, ಯಾವುದೇ ಬುಲೆಟ್‍ಪ್ರೂಪ್ ಇಲ್ಲದೆ ಭಾಷಣ ಮುಗಿಸಿ ನಿರ್ಗಮಿಸಿದರು.

Republic Day, Governor, Gehlot, hoists, National flag, Manekshaw Parade ground,

Articles You Might Like

Share This Article