ಎಲ್ಲರೂ ಒಂದಾಗಿ ಪ್ರಗತಿಗೆ ಮುಂದಾಗಿ : CM ಬೊಮ್ಮಾಯಿ

Social Share

ಬೆಂಗಳೂರು, ಜ.26- ಗಣರಾಜ್ಯೋತ್ಸವ ದಿನದಂದು ನಮ್ಮನ್ನು ಸಂವಿಧಾನಕ್ಕೆ ಸಮರ್ಪಣೆ ಮಾಡಿಕೊಂಡು ಸಂವಿಧಾನಬದ್ಧವಾಗಿ ನಡೆದು ಭಾರತದ ಪ್ರಗತಿಗೆ ಸಂಕಲ್ಪ ಮಾಡಿಕೊಳ್ಳುವ ದಿನ. ನಾವೆಲ್ಲರೂ ಆ ಸಂಕಲ್ಪ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ನ್ಯಾಷನಲ್ ಮಿಲಿಟರಿ ವಾರ್ ಮೆಮೋರಿಯಲ್ ಬಳಿ ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಗಣರಾಜ್ಯೋತ್ಸವದ ಶುಭಾಶಯಗಳನ್ನು ನಾಡಿನ ಜನತೆಗೆ ತಿಳಿಸಿದ ಸಿಎಂ, ವಿಶ್ವಕ್ಕೇ ಭಾರತದ ವಿಸ್ತೃತವಾಗಿರುವ ಶಕ್ತಿ.

ಭಾರತದ ಭವ್ಯ ಪರಂಪರೆ ಸದಾ ಕಾಲ ಪ್ರತ್ಯೇಕವಾಗಿ, ವಿಭಿನ್ನವಾಗಿ ಜಗತ್ತಿನಲ್ಲಿದೆ. ಆಧುನಿಕ, ಪ್ರಗತಿಪರವಾದ ಭಾರತ. ಮಾನವೀಯತೆಯ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ಎಂಬ ಧ್ಯೇಯ ನುಡಿಯಿಂದ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.

ಇದೇ ಮೊದಲ ಬಾರಿಗೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಹಾರಾಡಿದ ತಿರಂಗಾ

ರಾಜ್ಯದ ಎಸ್.ಎಂ.ಕೃಷ್ಣ ಅವರಿಗೆ ಪದ್ಮವಿಭೂಷಣ, ಸುಧಾಮೂರ್ತಿ, ಎಸ್.ಎಲï.ಭೈರಪ್ಪ ಸೇರಿದಂತೆ ಒಟ್ಟು ಎಂಟು ಜನರಿಗೆ ಪದ್ಮ ಪ್ರಶಸ್ತಿಗಳು ಘೋಷಣೆಯಾಗಿವೆ. ಕಳೆದ ಹಲವಾರು ವರ್ಷಗಳಿಂದ ಪ್ರಧಾನಮಂತ್ರಿಗಳು, ಅವರವರ ವೃತ್ತಿಯಲ್ಲಿ ಶ್ರೇಷ್ಠತೆ ಕಂಡುಕೊಂಡವರು, ದೇಶಕ್ಕೆ ಕೊಡುಗೆ ನೀಡಿದವರು, ಯಾವ ಅಪೇಕ್ಷೆಯೂ ಇಲ್ಲದೆ ಎಲೆಮರೆಕಾಯಿಯಾಗಿ ಕೆಲಸ ಮಾಡಿದವರನ್ನು ಗುರುತಿಸಿ ಪದ್ಮ ಪ್ರಶಸ್ತಿ ನೀಡುವ ವಿನೂತನ ಪದ್ಧತಿ ಅಳವಡಿಸಿದ್ದಾರೆ.

ಗಣರಾಜ್ಯೋತ್ಸವಕ್ಕೆ ಗೈರಾದ ತೆಲಂಗಾಣ ಸಿಎಂ

ಇದು ಅವರ ಕಾರ್ಯವೈಖರಿ. ಗುಣಾತ್ಮಕ ಕಾರ್ಯಕ್ಕೆ ಬೆಲೆ ನೀಡಿದ್ದಾರೆ. ಕರ್ನಾಟಕಕ್ಕೆ ಎಂಟು ಪ್ರಶಸ್ತಿ ದೊರೆತಿರುವುದು ನಮ್ಮ ಹೆಮ್ಮೆ. ಕರ್ನಾಟಕದ ವಿಫುಲ ಮಾನವ ಪ್ರತಿಭೆಯನ್ನು ತೋರಿದಂತಾಗಿದೆ. ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆ ಸಲ್ಲಿಸಬಯಸುತ್ತೇನೆ. ಅವರಿಂದ ಇನ್ನಷ್ಟು ಜನರಿಗೆ ಪ್ರೇರಣೆ ದೊರೆಯುವ ಆಶಾಭಾವನೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Republic Day, greetings, CM Bommai,

Articles You Might Like

Share This Article