ಗಣರಾಜ್ಯೋತ್ಸವಕ್ಕೆ ಅಭೂತಪೂರ್ವ ಪೊಲೀಸ್ ಪಹರೆ

Social Share

ಬೆಂಗಳೂರು,ಜ.24- ಈ ಬಾರಿಯ ಗಣರಾಜ್ಯೋತ್ಸವಕ್ಕೆ ಹಿಂದೆಂದೂ ಕಾಣದಂತಹ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು. ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯಕಟ್ಟಿನ ಪ್ರದೇಶಗಳ ಮೇಲೆ ಪೊಲೀಸರು ಹದ್ದಿನಕಣ್ಣಿಟ್ಟಿದ್ದು, ಯಾವುದೇ ಅಹಿತಕರ ಘಟನೆಗೆ ಅವಕಾಶ ಕಲ್ಪಿಸಿಕೊಡುವುದಿಲ್ಲ ಎಂದರು.

12 ಡಿಸಿಪಿಗಳು, 22 ಎಸಿಪಿಗಳು, 65 ಪೊಲೀಸ್ ಇನ್ಸ್‍ಪೆಕ್ಟರ್‍ಗಳು, 101 ಪಿಎಸ್‍ಐಗಳು, 46 ಮಹಿಳಾ ಪಿಎಸ್‍ಐಗಳು, 194 ಎಎಸ್‍ಐಗಳು, 1005 ಕಾನ್ಸ್‍ಟೆಬಲ್‍ಗಳು, 77 ಮಹಿಳಾ ಸಿಬ್ಬಂದಿಗಳು, 172 ಮಫ್ತಿ ಪೆಪೊಲೀಸರು ಸೇರಿದಂತೆ 1750ಕ್ಕೂ ಹೆಚ್ಚು ಸವಿಲ್ ಪೊಲೀಸರನ್ನು ಬಂದೋಬಸ್ತ್‍ಗಾಗಿ ನಿಯೋಜನೆ ಮಾಡಲಾಗಿದೆ. ಇದರ ಜತೆಗೆ 56 ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಅವರು ವಿವರಣೆ ನೀಡಿದರು.

ಇದಲ್ಲದೆ ಮೈದಾನದ ಬಂದೋಬಸ್ತ್ ಕರ್ತವ್ಯಕ್ಕೆ 10 ಕೆಎಸ್‍ಆರ್‍ಪಿ ಮತ್ತು ಸಿಎಆರ್ ತುಕಡಿ, ಮೂರು ಅಗ್ನಿಶಾಮಕ ದಳದ ವಾಹನಗಳು, 2 ಅಂಬ್ಯುಲೆನ್ಸ್‍ಗಳು, ಒಂದು ಕ್ಷಿಪ್ರ ಕಾರ್ಯಾಚರಣೆ ಪಡೆ, ಒಂಡು ಡಿಸ್ವಾಟ್, 1 ಆರ್‍ಐವಿ ವಾಹನಗಳನ್ನು ನಿಯೋಜನೆ ಮಾಡಲಾಗಿದ್ದು, 1 ಗರುಡಾ ಫೋರ್ಸ್ ತಂಡವನ್ನು ಕಾಯ್ದಿರಿಸಲಾಗಿದೆ.

ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಇನ್ನೂ ನಿರ್ಧಾರವಾಗಿಲ್ಲ : ಜಿಲ್ಲಾಧಿಕಾರಿ

ಗಣ ರಾಜ್ಯೋತ್ಸವ ಆಚರಣೆ ಮಾಡಲಾಗುವ ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಕಳೆದ 15 ದಿನಗಳಿಂದ ಪೊಲೀಸ್ ಕಣ್ಗಾವಲು ಹಾಕಲಾಗಿದೆ. 26 ರಂದು ಘನತೆವೆತ್ತ ರಾಜ್ಯಪಾಲರು ಧ್ವಜಾರೋಹಣ ನೆರವೇರಿಸುತ್ತಿರುವುದರಿಂದ ಬಿಬಿಎಂಪಿ ಹಾಗೂ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಮೈದಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ನಿಗಾವಹಿಸಲು ಆಯಕಟ್ಟಿನ ಪ್ರದೇಶಗಳಲ್ಲಿ 100 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮತ್ತು ನಾಲ್ಕು ಬ್ಯಾಗೇಜ್ ಸ್ಕ್ಯಾನರ್‍ಗಳನ್ನು ಅಳವಡಿಸಲಾಗಿದ್ದು, ತಪಾಸಣೆಗೆ 20 ಡಿಎಫ್‍ಎಂಡಿ ಹಾಗೂ 24 ಹೆಚ್‍ಹೆಚ್‍ಎಂಡಿ ಉಪಕರಣಗಳನ್ನು ಉಪಯೋಗಿಸಲಾಗುತ್ತಿದೆ ಎಂದು ಪ್ರತಾಪ್ ರೆಡ್ಡಿ ವಿವರಿಸಿದರು.

ಎಲ್ಲರಿಗೂ ತಪಾಸಣೆ: ಗಣರಾಜ್ಯೋತ್ಸವಕ್ಕೆ ಆಗಮಿಸುವ ಗಣ್ಯ ವ್ಯಕ್ತಿಗಳು, ಅಧಿಕಾರಿಗಳು ಭದ್ರತಾ ದೃಷ್ಟಿಯಿಂದ ಗೇಟ್ ನಂ.2ರಲ್ಲಿ ಹಾಗೂ ವಿವಿಐಪಿ ಪಾಸ್ ಹೊಂದಿರುವವರಿಗೆ ಗೇಟ್ ನಂ.3ರಲ್ಲಿ ಹಾಗೂ ವಿಐಪಿ ಪಾಸ್ ಹೊಂದಿರುವವರು ಗೇಟ್‍ನಂ.4ರಲ್ಲಿ ಒಳಪ್ರವೇಶಿಸಲು ಅವಕಾಶ ನೀಡಲಾಗಿದ್ದು, ಭದ್ರತೆ ದೃಷ್ಟಿಯಿಂದ ಪ್ರತಿಯೊಬ್ಬರೂ ಗೇಟ್‍ಗಳ ಬಳಿ ತಪಾಸಣೆಗೆ ಒಳಗಾಗುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅವರು ಹೇಳಿದರು.

ಬಜೆಟ್ ಅನುದಾನ ಬಳಸುವಲ್ಲಿ ಮುಗ್ಗರಿಸಿದ ಬೊಮ್ಮಾಯಿ ಸರ್ಕಾರ

ಸಮಯಪಾಲನೆ ಅಗತ್ಯ: ಸಮಾರಂಭಕ್ಕೆ ಆಗಮಿಸುವವರು ಬೆಳಿಗೆಗೆ 8.30ರೊಳಗೆ ತಮ್ಮ ಆಸನಗಳಲ್ಲಿ ಆಸಿನರಾಗಿರಬೇಕು. ಯಾವುದೇ ಕಾರಣಕ್ಕೂ ಮೈದಾನ ಪ್ರವೇಶಿಸಲು ಅನುಮತಿ ನೀಡುವುದಿಲ್ಲ.
ಸಮಾರಂಭಕ್ಕೆ ಆಗಮಿಸುವ ಸಾರ್ವಜನಿಕರು ಮಣಿಪಾಲ್ ಸೆಂಟರ್ ಕಡೆಯಿಂದ ಕಬ್ಬನ್ ರಸ್ತೆಯ ಮೂಲಕ ಗೇಟ್ ನಂ.4ಕ್ಕೆ ಆಗಮಿಸಲು ಸೂಚಿಸಲಾಗಿದೆ.

ನಿಷಿದ್ಧ: ಕಾರ್ಯಕ್ರಮಕ್ಕೆ ಆಗಮಿಸುವವರು ಪರ್ಸ್, ಮೊಬೈಲ್ ಹಾಗೂ ವಿಶೇಷಚೇತನರ ನೆರವಿನ ಉಪಕರಣಗಳನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ವಸ್ತುಗಳನ್ನು ನಿಧಿಷೇಸಲಾಗಿದೆ.

ಸಿಗರೇಟ್, ಬೆಂಕಿಪೊಟ್ಟಣ, ಕರಪತ್ರಗಳು, ಬಣ್ಣದ ದ್ರವಣಗಳು, ವಿಡಿಯೋ ಮತ್ತು ಸ್ಟಿಲ್ ಕ್ಯಾಮೆರಾಗಳು, ನೀರಿನ ಬಾಟಲ್‍ಗಳು, ಪಟಾಕಿ ಮತ್ತು ಸ್ಪೋಟಕಗಳು, ಹರಿತವಾದ ವಸ್ತುಗಳು , ರಾಷ್ಟ್ರೀಯ ಬಾವುಟ ಹೊರತುಪಡಿಸಿ ಬೇರೆ ರೀತಿಯ ಬಾವುಟ ಹಾಗೂ ವಸ್ತ್ರಗಳು, ತಿಂಡಿ ತಿನಿಸುಗಳು, ಮದ್ಯದ ಬಾಟಲ್‍ಗಳು, ಮಾದಕ ವಸ್ತುಗಳು ಹಾಗೂ ಶಸ್ತ್ರಾಸ್ತ್ರಗಳನ್ನು ನಿರ್ಬಂಧಿಸಲಾಗಿದೆ ಎಂದು ಆಯುಕ್ತರು ವಿವರಿಸಿದರು.

Republic Day, Manekshaw Parade, ground, Police Commissioner, Pratap Reddy,

Articles You Might Like

Share This Article