ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಸಾಕಾರಗೊಳಿಸೋಣ : ಪ್ರಧಾನಿ ಮೋದಿ

Social Share

ನವದೆಹಲಿ,ಜ.26- ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವು ಇಂದು 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಒಂದು ದೇಶವಾಗಿ ಎಲ್ಲಾ ನಾಗರಿಕರಿಗೆ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ನಾವು ಒಗ್ಗಟ್ಟಿನಿಂದ ಮುನ್ನಡೆಯೋಣ ಎಂದು ಪ್ರದಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜನವರಿ 26 ರ ದಿನವು ವಿಶೇಷ ಹಾಗು ಬಹಳ ಮುಖ್ಯ ದಿನವಾಗಿದೆ ಏಕೆಂದರೆ ಈ ದಿನದಂದು ನಾವು ದೇಶದ ಸಂವಿಧಾನವನ್ನು ಪಡೆದುಕೊಂಡಿದ್ದೇವೆ. ಗಣರಾಜ್ಯೋತ್ಸವಕ್ಕೂ ದೇಶದ ಜನತೆಗೆ ಶುಭಾಶಯ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.ಯಲ್ಲರೂ ಜೊತೆಗೂಡಿ ಸಶಕ್ತ ದೇಶದ ಕಟ್ಟೋಣ ಎಂದು ಕರೆ ನೀಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್ ಮಾಲಕ ದೇಶವಾಸಿಗಳಿಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ. ಇಂದು, ದೇಶವನ್ನು ವಿಮೋಚನೆಗೊಳಿಸಲು, ಬಲಪಡಿಸಲು ಮತ್ತು ರಕ್ಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಎಲ್ಲ ಸ್ವಾತಂತ್ರ್ಯ ಹೋರಾಟಗಾರರು, ಸಂವಿಧಾನ ತಯಾರಕರು ಮತ್ತು ವೀರ ಸೈನಿಕರಿಗೆ ನಾನು ನಮಸ್ಕರಿಸುತ್ತೇನೆ ಎಂದಿದ್ದಾರೆ.

ಇದೇ ಮೊದಲ ಬಾರಿಗೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಹಾರಾಡಿದ ತಿರಂಗಾ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಟ್ವೀಟ್‍ನಲ್ಲಿ, ಗಣರಾಜ್ಯೋತ್ಸವದಂದು ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳು. ಇಂದು, ಈ ದಿನವು ಎಲ್ಲಾ ಭಾರತೀಯರಿಗೆ ದೇಶದ ಸಾಂವಿಧಾನಿಕ ಸಂಪ್ರದಾಯಗಳನ್ನು ಬಲಪಡಿಸಲು ಮತ್ತು ನವ ಭಾರತವನ್ನು ನಿರ್ಮಿಸುವ ಸಂಕಲ್ಪಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಲು ಒಂದು ಅವಕಾಶವಾಗಿದೆ. ಭಾರತದ ಎಲ್ಲಾ ಸಂವಿಧಾನ ರಚನೆಕಾರರಿಗೆ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ನಮನಗಳು ಎಂದಿದ್ದಾರೆ.

Republic Day, parade, march, Kartavya Path, PM Modi,

Articles You Might Like

Share This Article