ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸೀಮಿತ ಸಂಖ್ಯೆಯಲ್ಲಿ ಜನರಿಗೆ ಅವಕಾಶ

Social Share

ನವದೆಹಲಿ,ಜ.19- ಕೋವಿಡ್-19 ಪರಿಸ್ಥಿತಿಯಿಂದಾಗಿ ಈ ವರ್ಷ ಗಣರಾಜ್ಯೋತ್ಸವದ ಪರೇಡ್‍ಗೆ ಹಾಜರಾಗುವವರ ಸಂಖ್ಯೆಯನ್ನು ಸುಮಾರು 5,000-8,000ಕ್ಕೆ ಸೀಮಿತಗೊಳಿಸುವ ಸಾಧ್ಯತೆಯಿದೆ. ಕಟ್ಟಡ ಕಾರ್ಮಿಕರು, ಮುಂಚೂಣಿಯ ಆರೋಗ್ಯ ಕಾರ್ಯಕರ್ತರು ಮತ್ತು ಇತರರಿಗೆ ಆಸನಗಳನ್ನು ಮೀಸಲಿಡಲಾಗಿದೆ ಎಂದು ರಕ್ಷಣಾ ಸಚಿವಾಲಯದ ಹಿರಿಯ ಅಕಾರಿಗಳು ಹೇಳಿದ್ದಾರೆ.
ಎರಡು ಬಾರಿ ಲಸಿಕೆ ಹಾಕಿದ ವಯಸ್ಕರು ಮತ್ತು ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ತೆಗೆದುಕೊಂಡ 15 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಪ್ರವೇಶಿಸಲು ಅನುಮತಿಸಲಾಗುವುದು, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಸಮಾರಂಭಕ್ಕೆ ಹಾಜರಾಗಲು ಅನುಮತಿ ಇಲ್ಲ ಎಂದು ತಿಳಿಸಿದ್ದಾರೆ.
ಪರೇಡ್ ಬೆಳಿಗ್ಗೆ 10 ಗಂಟೆಗೆ ಬದಲಾಗಿ 10.30 ಕ್ಕೆ ಪ್ರಾರಂಭವಾಗಲಿದ್ದು, ಕೋವಿಡ್-19 ಅಲೆಯಿಂದಾಗಿ ಈ ಬಾರಿ ಗಣರಾಜ್ಯೋತ್ಸವ ಪರೇಡ್‍ಗೆ ಹಾಜರಾಗಲು ಅನುಮತಿಸುವ ಜನರ ಸಂಖ್ಯೆಯನ್ನು ಶೇಕಡಾ 70-80 ರಿಂದ ಸರಿಸುಮಾರು 5,000-8,000 ಕ್ಕೆ ಮೊಟಕುಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಸಾಂಕ್ರಾಮಿಕ ರೋಗದಿಂದಾಗಿ 2020ರಲ್ಲಿ ಸುಮಾರು 1.25 ಲಕ್ಷ ಜನರಿಗೆ ಅವಕಾಸ ನೀಡಲಾಗಿತ್ತು. ಇದಕ್ಕೆ ಹೋಲಿಸಿದರೆ 2021ರ ಗಣರಾಜ್ಯೋತ್ಸವದ ಮೆರವಣಿಗೆಗೆ ಸುಮಾರು 25,000 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು.

Articles You Might Like

Share This Article