ಚೀನಾದ ಉತ್ತರದಾಯಿತ್ವಕ್ಕೆ ಅಮೇರಿಕಾದ ಒತ್ತಡ

Social Share

ವಾಷಿಂಗ್‍ಟನ್,ಫೆ.2 – ಅಮೇರಿಕಾದ ರಿಪಬ್ಲಿಕನ್ ಪಕ್ಷದ ಪ್ರಭಾವಿ ಸಂಸದರು ಚೀನಾವನ್ನು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅಸಮಂಜಸ ವ್ಯಾಪಾರ ವಹಿವಾಟಿಗೆ ಉತ್ತರದಾಯಿಯನ್ನಾಗಿಸುವಂತೆ ರಾಜ್ಯ ಕಾರ್ಯದರ್ಶಿ ಅಂಟೋನಿ ಬ್ಲಿಂಕೆನ್ ಅವರನ್ನು ಒತ್ತಾಯಿಸಿದ್ದಾರೆ.

ಬ್ಲಿಂಕೆನ್ ಮತ್ತು ಟ್ರಜರಿ ಕಾರ್ಯದರ್ಶಿ ಜನೆಟ್ ಎಲೆನ್ ಅವರುಗಳಿಗೆ ಪತ್ರ ಬರೆದಿರುವ ಅಮೇರಿಕಾದ ಸಂಸದರು ಫೆಬ್ರವರಿಯಲ್ಲಿ ನಿರೀಕ್ಷಿತ ಬೀಜಿಂಗ್ ಪ್ರವಾಸದ ವೇಳೆ ಗಂಭೀರ ವಿಷಯಗಳನ್ನು ಪ್ರಸ್ತಾಪಿಸುವಂತೆ ಸಲಹೆ ನೀಡಿದ್ದಾರೆ.

ಚೀನಾ ಕಮ್ಯುನಿಸ್ಟ್ ಪಾರ್ಟಿ (ಸಿಸಿಪಿ) ಇಂಡೋಫೆಸಿಫಿಕ್ ವಲಯ ಮತ್ತು ಅದರಾಚೆಗೆ ಆಕ್ರಮಣಕ್ಕೆ ಹೆಜ್ಜೆ ಇಟ್ಟಿದೆ ಎಂದು ರಿಪಬ್ಲಿಕನ್ ಸೆನೆಟರ್ ಫ್ಲೋರಿಡಾದ ಮಾರ್ಕೋ ರುಬಿಯೋ ಮತ್ತು ಇತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫೆ.10ರಿಂದ EVM ಯಂತ್ರಗಳ ತಪಾಸಣೆ ಶುರು

ಚೀನಾದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ, ಅನೈತಿಕವಾದ ವ್ಯಾಪಾರ ಪ್ರವೃತ್ತಿ ಸ್ವೀಕಾರಾರ್ಹವಲ್ಲ ಎಂಬುವುದನ್ನು ಸ್ಪಷ್ಟಪಡಿಸಬೇಕು. ಜೊತೆಗೆ ಅಮೇರಿಕಾದ ಸಹವರ್ತಿಗಳಾದ ಭಾರತ ಮತ್ತು ತೈವಾನ್ ಮೇಲಿನ ಚೀನಾದ ಆಕ್ರಮಣಕಾರಿ ಪ್ರವೃತ್ತಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸುವಂತೆ ಸಲಹೆ ನೀಡಿದ್ದಾರೆ.

ವಿವಿಧ ಗ್ರಾಮ ಪಂಚಾಯ್ತಿಗಳ 262 ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆ

ಈ ನಡುವೆ ಮತ್ತೊಂದಿಷ್ಟು ಸೆನೆಟರ್ ಗಳು ಪತ್ರಕ್ಕೆ ಸಹಿ ಹಾಕಿದ್ದಾರೆ. ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ಆಡಳಿತದಲ್ಲಿ ಅನುಸರಿಸಲಾಗುತ್ತಿರುವ ರಾಷ್ಟ್ರೀಯ ಭದ್ರತಾ ತಂತ್ರಗಾರಿಕೆಗೆ ಚೀನಾ ಮಾತ್ರ ಸ್ರ್ಪಯಾಗಿದೆ. ಹೀಗಾಗಿ ಎರಡು ದೇಶಗಳು ಅಂತಾರಾಷ್ಟ್ರೀಯ ಸಂಬಂದ, ರಾಜತಾಂತ್ರಿಕ, ಆರ್ಥಿಕ, ಮಿಲಿಟರಿ ಮತ್ತು ತಂತ್ರಜ್ಞಾನ ವಿನಿಮಯಕ್ಕೆ ಸಂಬಂದ ಪಟ್ಟಂತೆ ಪರಸ್ಪರ ವ್ಯವಹಾರಗಳನ್ನು ಮರುವಿನ್ಯಾಸಗೊಳಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.

Republican, Senators, Blinken, hold, China, accountable, rights abuses,

Articles You Might Like

Share This Article