ಅಮೇರಿಕ ಸಂಸತ್‌ನಲ್ಲಿ ಟ್ರಂಪ್’ಗೆ ಹೆಚ್ಚಿದ ಬಲ

Social Share

ವಾಷಿಂಗ್ಟನ್, ನ.16 – ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಸದನ )ಆಯ್ಕೆಯಲ್ಲಿ ರಿಪಬ್ಲಿಕನ್ ಪಕ್ಷ ಬಹುಮತದ ತುದಿಯಲ್ಲಿದ್ದು ಕೆವಿನ್ ಮೆಕಾರ್ಥಿ ಅವರನ್ನು ಮುಂದಿನ ಸ್ಪೀಕರ್ ಸ್ಥಾನಕ್ಕೆ ಸಂಸದರು ಆಯ್ಕೆ ಮಾಡಿದ್ದಾರೆ.

435 ಸದಸ್ಯಬಲದ ಸಂಸತ್ತಿನಲ್ಲಿ ಮ್ಯಾಜಿಕ್ ಸಂಖ್ಯೆ 218 ತಲುಪಲು ಇನ್ನು 1 ಸ್ಥಾನ ಮಾತ್ರ ಬಾಕಿ ಇದ್ದು ,ಬಹುತೇಕ ಬಹುಮತ ರಿಪಬ್ಲಿಕನ್ ಪಕ್ಷಕ್ಕೆ ಒಲೆಯುವುದು ಪಕ್ಕ ಆಗಿದೆ ಇದರಿಂದ ಅಮೆರಿಕ ಮಾಜಿ ಅಧ್ಯಕ್ಷ ಡೊನಲ್ಡ್ ಟ್ರಂಪ್ ಬಲ ಹೆಚ್ಚಾಗಿದ್ದು ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಭಲ ಸ್ಪರ್ಧೆ ನಿಚ್ಚಿತವಾಗಿದೆ.

ಪ್ರಸ್ತುತ ಸದನದ ಅಲ್ಪಸಂಖ್ಯಾತ ಸದಸ್ಯರಾಗಿರುವ ಮೆಕಾರ್ಥಿ ಅವರು ಔಪಚಾರಿಕವಾಗಿ ಸ್ಪೀಕರ್ ಆಗಿ ಆಯ್ಕೆಯಾಗುವ ಮೊದಲು ಮುಂದಿನ ವರ್ಷ ಸದನದಲ್ಲಿ ಬಹುಮತ ಸಾಭೀತು ಪಡಿಸಬೇಕಾಗುತ್ತದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನಂತರ ರಾಜಕೀಯ ಉತ್ತರಾಧಿಕಾರದ ಸಾಲಿನಲ್ಲಿ ಹೌಸ್ ಸ್ಪೀಕರ್ ಇರುತ್ತಾರೆ.

126 ಮಕ್ಕಳಲ್ಲಿ ದಡಾರ ಸೋಂಕು : ಮಗು ಸಾವು

ಮಂಗಳವಾರ ರಾತ್ರಿಯ ಹೊತ್ತಿಗೆ, ರಿಪಬ್ಲಿಕನ್ ಪಕ್ಷದ 217 ಅಭ್ಯರ್ಥಿಗಳು ಗೆದ್ದಿದ್ದಾರೆ ಎಲ್ಲರೂ ಸಭೆ ಸೇರಿ ಮತದಾನದ ಮೂಲಕ ಮೆಕಾರ್ಥಿ ಅವರನ್ನು ಮುಂದಿನ ಕಾಂಗ್ರೆಸ್‍ನಲ್ಲಿ ಸ್ಪೀಕರ್ ಆಗಿ ನಾಮನಿರ್ದೇಶನ ಮಾಡಿದರು.

ಇದಾದ ಕೆಲವೇ ಸಮಯದಲ್ಲಿ , ನಾವು ಅಮೆರಿಕವನ್ನು ಬದಲಾಯಿಸುವ ಸಾಮಥ್ರ್ಯವನ್ನು ಹೊಂದಲಿದ್ದೇವೆ ಎಂದು ಮೆಕಾರ್ಥಿ ಹೇಳಿದರು. ಹೊಸ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ನಂತರ ಅದ್ದಾಕೃತವಾಗಿ ಮೆಕಾರ್ಥಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‍ನ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಬಹುಮತ ಪಡೆದ ನಂತರ ಸ್ಪೀಕರ್ ಸ್ಥಾನ ಆಲಂಕರಿಸಲಿದ್ದಾರೆ.

ಭಾರತದ ಸರಣಿಗೆ ಕಿವೀಸ್ ತಂಡ ಪ್ರಕಟ

ಕಾಂಗ್ರೆಸ್ ಇತಿಹಾಸದಲ್ಲಿ ಅತ್ಯಂತ ಕಿರಿದಾದ ಬಹುಮತವನ್ನು ಹೊಂದಿರುತ್ತಾರೆ ಏತನ್ಮಧ್ಯೆ, ರಿಪಬ್ಲಿಕನ್ ಸೆನೆಟರ್ ರಿಕ್ ಸ್ಕಾಟ್ ಅವರು ಜನವರಿಯಲ್ಲಿ ಸೆನೆಟ್ ಅಲ್ಪಸಂಖ್ಯಾತ ನಾಯಕನ ಸ್ಥಾನಕ್ಕೆ ಸ್ರ್ಪಧಿದ್ದಾಸಲಿರುವುದಾಗಿ ಘೋಷಿಸಿದರು.

ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ 50 ಸ್ಥಾನಗಳ ವಿರುದ್ಧ ರಿಪಬ್ಲಿಕನ್ನರು 49 ಸ್ಥಾನಗಳನ್ನು ಹೊಂದಿದ್ದಾರೆ. ಡಿಸೆಂಬರ್‍ನಲ್ಲಿ ಜಾರ್ಜಿಯಾ ಪಲಿತಾಂಶ ಬರಲಿದೆ ಎರಡು ರಾಜಕೀಯ ಪಕ್ಷಗಳ ನಡುವೆ ಸಮಾನವಾಗಿ ವಿಭಜನೆಯಾಗಿದೆ ಎಂದು ನಿರೀಕ್ಷಿಸಲಾಗಿದೆ.

800 ಕೋಟಿ ಮೈಲಿಗಲ್ಲು ದಾಟಿದ ವಿಶ್ವದ ಜನಸಂಖ್ಯೆ

Articles You Might Like

Share This Article