ರಾಷ್ಟ್ರ ನಿರ್ಮಾಣದ ಕಡೆಯೂ ರಾಜ್ಯದ ಜನತೆ ಗಮನ ಕೊಡಬೇಕಾದ ಅಗತ್ಯವಿದೆ : ಸಿಎಂ

Social Share

ಬೆಂಗಳೂರು,ಜ.26-ರಾಜ್ಯದ ಜನತೆ ರಾಷ್ಟ್ರ ನಿರ್ಮಾಣದ ಕಡೆಯೂ ಗಮನ ಕೊಡಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ದೇಶ ಪ್ರಜಾಪ್ರಭುತ್ವ ತಳಹದಿ ಮೇಲೆ ಗಣರಾಜ್ಯವಾಗಿದೆ. ರಾಷ್ಟ್ರ ನಿರ್ಮಾಣದ ಕಡೆಯೂ ಜನತೆ ಗಮನಹರಿಸಬೇಕೆಂದು ಮನವಿ ಮಾಡಿದರು.
ದೇಶ ಮೊದಲು ಎಂಬುದು ಪ್ರತಿಯೊಬ್ಬರಲ್ಲೂ ಬರಬೇಕು. ರಾಷ್ಟ್ರ ನಿರ್ಮಾಣದ ಕಡೆ ವಿಶೇಷವಾಗಿ ಯುವಕರು ಗಮನಹರಿಸಬೇಕು. ಈ ದೇಶವು ನಮಗೆ ಬಹಳಷ್ಟು ಹಕ್ಕುಗಳನ್ನು ಕೊಟ್ಟಿದೆ. ಅದನ್ನು ನಿರ್ವಹಣೆ ಮಾಡುವುದು ನಮ್ಮ ಜವಾಬ್ದಾರಿ ಎಂದರು.
ಹಕ್ಕುಗಳ ಜೊತೆಗೆ ಜನತೆ ಕರ್ತವ್ಯದ ಬಗ್ಗೆಯೂ ನಿಗಾವಹಿಸಬೇಕು. ಆರ್ಥಿಕವಾಗಿ, ಸಾಮಾಜಿಕ ಕರಕುಶಲ ಕೊಡುಗೆ ಕೊಡುವ ರಾಜ್ಯ ಕರ್ನಾಟಕವಾಗಿದೆ. ಇದರ ಪರಂಪರೆಯನ್ನು ಉಳಿಸಿಕೊಂಡು ರಾಜ್ಯವನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗಬೇಕೆಂದು ಸಲಹೆ ಮಾಡಿದರು.
ಇಂದು ಬಹುನಿರೀಕ್ಷಿತ ಗ್ರಾಮ ಒನ್ ಯೋಜನೆ ಉದ್ಘಾಟನೆಗೊಳ್ಳಲಿದೆ. 12 ಜಿಲ್ಲೆಯ 3 ಸಾವಿರ ಗ್ರಾಮಪಂಚಾಯ್ತಿಗಳಲ್ಲಿ ಉದ್ಘಾಟನೆಯಾಗಲಿದೆ. ಸರ್ಕಾರದ ಯೋಜನೆಗಳನ್ನು ಈ ಯೋಜನೆ ಮೂಲಕ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.

Articles You Might Like

Share This Article