ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕಂಗೊಳಿಸಿದ ಕರ್ನಾಟಕ ಕರಕುಶಲ ಕಲೆಗಳ ಸ್ತಬ್ಧಚಿತ್ರ

Social Share

ನವದೆಹಲಿ, ಜ.26- ಕೌಶಲ್ಯದಿಂದ ತಯಾರಿಸಿದ ಮಡಿಕೆಗಳು, ಸೂಕ್ಷ್ಮವಾಗಿ ಕೆತ್ತಲಾದ ಗಂಧದ ಮಿನಿಯೇಚರ್‍ಗಳು, ಕೈಮಗ್ಗದ ಸೀರೆಗಳು ಮುಂತಾದ ಕರ್ನಾಟಕದ ಶ್ರೀಮಂತ ಕರಕುಶಲ ಕಲೆಗಳು ಇಲ್ಲಿ ಇಂದು ನಡೆದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರದಲ್ಲಿ ಗಮನ ಸೆಳೇದ ಅಂಶಗಳಾಗಿದ್ದವು.
ಮೈಸೂರು ರೋಸ್‍ವುಡ್‍ನಲ್ಲಿ ಕೆತ್ತಿದ ಮತ್ತು ದಂತದ ಒಳಕೆತ್ತನೆಗಳಿಂದ ಕೂಡಿದ ಬೃಹತ್ ಏಷ್ಯಾಟಿಕ್ ಆನೆ, ಕಣ್ಸೆಳೆಯುವ ಬಿರ್ರಿವೇರ್, ಕಂಚಿನ ಪ್ರತಿಮೆಗಳು ಮತ್ತು ಚನ್ನಪಟ್ಟಣದ ಮರದ ಆಟಿಕೆಗಳು ಈ ಸ್ತಬ್ಧಚಿತ್ರದ ಪ್ರಮುಖ ಅಂಶಗಳಾಗಿದ್ದವು.


ಕರ್ನಾಟಕ: ಭಾರತದಲ್ಲಿ ಕರಕುಶಲ ಕಲೆಗಳ ತವರೂರು ಇದು ಈ ಸ್ತಬ್ಧಚಿತ್ರದ ಧ್ಯೇಯವಾಗಿತ್ತು. ಸ್ತಬ್ಧಚಿತ್ರದಲ್ಲಿ ಕರ್ನಾಟಕದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಭಾರತದಲ್ಲಿ ಸಾಂಪ್ರದಾಯಿಕ ಕರಕುಶಲ ಕಲೆಗಳ ತಾಯಿ ಎಂದೇ ಜನಪ್ರಿಯರಾಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಚಿತ್ರಣವೂ ಇತ್ತು.
ಕಮಲಾ ಅವರು ಒಂದು ಗಂಧದ ಪೆಟ್ಟಿಗೆ, ನವಿಲಿನಾಕೃತಿಯ ಹಣೆಗಳು, ಸಂಡೂರಿನ ಬಾಳೆನಾರಿನ ಚೀಲಗಳನ್ನೊಳಗೊಂಡ ಬಾಗಿನ ನೀಡುತ್ತಿರುವಂತೆ ಚಿತ್ರಿಸಲಾಗಿತ್ತು.

Articles You Might Like

Share This Article