ಮೀಸಲಾತಿ ಎಲ್ಲಿಯವರೆಗೆ..? : ಸುಪ್ರೀಂ ಪ್ರಶ್ನೆಗೆ ಉತ್ತರಿಸುವವರಾರು..?

ಇದೇ ಮಾರ್ಚ್ 19ರಂದು ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರಾದ ಅಶೋಕ್ ಭೂಷಣ್ ನೇತೃತ್ವದ ಪಂಚಪೀಠ ಇನ್ನು ಜಾತಿಯ ಮೀಸಲಾತಿ ಎಲ್ಲಿಯವರೆಗೆ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದೆ. ಖ್ಯಾತ ವಕೀಲರಾದ ಮುಖುಲ್ ರೋಹ್ಟಗಿ ಮರಾಠಿಗರಿಗೆ ಮಹಾರಾಷ್ಟ್ರದಲ್ಲಿ ಮೀಸಲಾತಿ ನೀಡಲು ಅವಕಾಶ ನೀಡಬೇಕು ಎಂಬ ವಾದವನ್ನು ಸರ್ಕಾರದ ಪರವಾಗಿ ಮಂಡಿಸುತ್ತಿದ್ದರು.

ಆಗ ರೊಚ್ಚಿಗೆದ್ದ ಪಂಚಪೀಠದ ನ್ಯಾಯಧೀಶರು ಮರಾಠಿಗರು ಆರ್ಥಿಕವಾಗಿ ರಾಜಕೀಯವಾಗಿ ಬಹಳ ಮುಂದುವರಿದಿದ್ದಾರೆ. ಅದರಲ್ಲು ಪ್ರತಿ ಚುನಾವಣೆಯಲ್ಲಿ ಶೇಕಡಾ ನಲವತ್ತರಷ್ಟು ಶಾಸಕರು ಸಂಸದರಾಗಿ ಮಹಾರಾಷ್ಟ್ರದಲ್ಲಿ ಮರಾಠಿಗರೇ ಪ್ರತಿನಿಧಿಸುತ್ತಿದ್ದಾ. ಅಂತಹ ಬಲಿಷ್ಠ ಸಮಾಜಕ್ಕೆ ಮೀಸಲಾತಿ ಅಗತ್ಯವಿದೆಯ ? ಅದು ಬಿಡಿ. ನಮ್ಮ ದೇಶದಲ್ಲಿ ಮೀಸಲಾತಿ ಜಾರಿಯಾಗಿ 70 ವರ್ಷಗಳೇ ಕಳೆದಿವೆ ಹಾಗಾದರೆ ಮೀಸಲಾತಿ ಇನ್ನೆಷ್ಟು ವರ್ಷ ಬೇಕು ಹೇಳಿಬಿಡಿ..!

ದುರಂತವೆಂದರೆ ಸುಪ್ರೀಂ ಕೋರ್ಟ್ ನ ಈ ಪ್ರಶ್ನೆಗೆ ಉತ್ತರ ನೀಡುವವರು ಯಾರು? ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಜಾತಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಸಂಕಲ್ಪದಿಂದ ಭಾರತ ದೇಶದಲ್ಲಿ ಸಮಾನತೆ ತರಲು ಆರ್ಟಿಕಲ್ 15 ಮತ್ತು 16ರ ಪ್ರಕಾರ ಕೇವಲ 10 ವರ್ಷಗಳಿಗೆ ಮಾತ್ರ ಮೀಸಲಾತಿ ಕಲ್ಪಿಸಿದ್ದರು ಆದರೆ ನಮ್ಮ ರಾಜಕೀಯ ಪಕ್ಷಗಳು ಸರ್ಕಾರಗಳು ಮೀಸಲಾತಿಯನ್ನು ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡಿಕೊಂಡು ಮೀಸಲಾತಿಯನ್ನು

ಜೀವಂತವಾಗಿ ಉಳಿಸಿಬಿಟ್ಟವು ಮತ್ತೊಂದು ದುರ್ದೈವವೆಂದರೆ ಸಮಾಜದ ಮುಖ್ಯ ವಾಹಿನಿಯಲ್ಲಿಯಲ್ಲಿರುವ ಪ್ರಬಲ ಜಾತಿಗಳು ಸಹ ಮೀಸಲಾತಿಗಾಗಿ ಪಾದಯಾತ್ರೆ ಅಮರಣಾಂತ ಉಪವಾಸ ಮಾಡುವುದರ ಮೂಲಕ ಉಗ್ರ ಹೋರಾಟ ಮಾಡುತ್ತಿವೆ. 3ಬಿಯಿಂದ 2ಎ, 2ಎಯಿಂದ ಎಸ್‍ಟಿ ಹೀಗೆ ಒಂದೊಂದು ಜಾತಿಯ ಬೇಡಿಕೆಗಳು ಒಂದೊಂದು ರೀತಿಯz್ದÁಗಿವೆ.  ಈಗಾಗಲೇ ಹಿಂದುಳಿದ ವರ್ಗದಲ್ಲಿ 102 ಜಾತಿಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ 207ಕ್ಕಿಂತ ಹೆಚ್ಚು ಜಾತಿಗಳು ಒಳಪಟ್ಟಿವೆ.

ಹಾಗಾದರೆ ಈ ಜಾತಿಯ ಜನರೆಲ್ಲರು ಆರ್ಥಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದಾರ ? ಖಂಡಿತವಾಗಿ ಇಲ್ಲ ! ಅತ್ಯಂತ ಪ್ರಾಮಾಣಿಕವಾಗಿ ಹೇಳುವುದಾದರೆ ಶೇಕಡಾ ಐವತ್ತಕ್ಕಿಂತ ಹೆಚ್ಚು ಜನ ಇನ್ನೂ ಸಹ ಮುರುಕಲು ಮನೆಗಳಲ್ಲಿ ವಾಸ ಮಾಡುತ್ತ ಹರಕಲು ಚಾಪೆಯಲ್ಲೇ ಮಲಗುತ್ತಿದ್ದಾರೆ. ಕೆಲವೇ ಕೆಲವರು ಮಾತ್ರ ಸ್ವಂತ ಹೆಲಿಕಾಪ್ಟರ್‍ನಲ್ಲಿ ಆಕಾಶದಲ್ಲಿ ಹಕ್ಕಿಯಂತೆ ಹಾರಾಡುತ್ತಿದ್ದಾರೆ ಆದರೆ ದುರಂತ ನೋಡಿ ಅವರು ಸಹ ಬಡವರಿಗೆ ಸಿಗುವ ಎಲ್ಲಾ ಮೀಸಲಾತಿಯನ್ನು ಬಳಸಿಕೊಂಡು ರಾಜಕೀಯವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಪ್ರಬಲರಾಗಿ ಅವರ ಜಾತಿಯನ್ನು ತಮ್ಮ ಕಪಿಮುಷ್ಟಿಯಲ್ಲಿ ನಿಯಂತ್ರಣ ಮಾಡುತ್ತಾ ಅವಶ್ಯಕತೆ ಬಂದಾಗ ಅವರ ಸ್ವಂತ ಲಾಭಕ್ಕಾಗಿ ಜಾತಿಯನ್ನು ಮುಂದಿಟ್ಟುಕೊಂಡು ಸರ್ಕಾರಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಇದೇ ನಮ್ಮ ದೇಶದಲ್ಲಿ ನಡೆಯುತ್ತಿರುವ ಮೀಸಲಾತಿಯ ಮರ್ಮ.

ಇತ್ತೀಚೆಗೆ ವಾಟ್ಸ್‍ಆ್ಯಪ್ ನಲ್ಲಿ ಒಂದು ಸಂದೇಶ ಬಹಳ ಸದ್ದು ಮಾಡಿತ್ತು  For reservation category shortcut to success is there caste certificate. But  for general category  shortcut to failure is there birth certificate. ಇದು ಖಂಡಿತವಾಗಿ ನೂರಕ್ಕೆ ನೂರರಷ್ಟು ಸತ್ಯ. ಯಾಕೆಂದರೆ ಹಗಲು ರಾತ್ರಿ ಕಷ್ಟ ಪಟ್ಟು ಓದಿ ಫಲಿತಾಂಶದಲ್ಲಿ ಉತ್ತಮ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳು ಈ ಮೀಸಲಾತಿಯ ಪದ್ದತಿಯಿಂದ ಸಾಕಷ್ಟು ವಂಚಿತರಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ.

ಮತ್ತೊಂದು ತಮಾಷೆಯೆಂದರೆ ಶಿಕ್ಷಣದಲ್ಲಿ ಮೀಸಲಾತಿ ಕೊನೆಗೆ ಬಡ್ತಿಯಲ್ಲೂ ಮೀಸಲಾತಿ ಅಂದರೆ ಪ್ರತಿಭೆಗೆ ಪ್ರತಿಭಾವಂತರಿಗೆ ಬೆಲೆ ಇಲ್ಲ. ಕೇವಲ ಜಾತಿಗಷ್ಟೇ ಬೆಲೆ ಎಂಬ ನೋವು ಅದೆಷ್ಟೋ ಪ್ರಾಮಾಣಿಕ ಅಧಿಕಾರಿಗಳು ತಮ್ಮ ದುಃಖ ಹೊರಹಾಕುತ್ತ ಕರ್ತವ್ಯದ ಬಗ್ಗೆ ಅಸಡ್ಡೆ ತೋರಲು ಶುರುಮಾಡಿದ್ದಾರೆ. ಪ್ರತಿಭೆಗೆ ಬೆಲೆ ಕೊಡದೇ ಕೇವಲ ಜಾತಿ ಆಧಾರದಲ್ಲಿ ಬಡ್ತಿ ಕೊಟ್ಟರೆ ಗುಣಮಟ್ಟದ ಬಗ್ಗೆ ಪ್ರಶ್ನೆ ಎತ್ತಲು ಸಾಧ್ಯವೇ ? ಖಂಡಿತವಾಗಿ ಇಲ್ಲ.

ಆದ್ದರಿಂದಲೇ ಮಾಜಿ ಸಚಿವರಾದ ಹೆಚ್.ವಿಶ್ವನಾಥ್, ಸಂಸದರಾದ ಶ್ರೀನಿವಾಸ್ ಪ್ರಸಾದ್ ಇನ್ನೂ ಮುಂತಾದ ರಾಜಕೀಯ ನಾಯಕರು ಮೀಸಲಾತಿಯ ಬಗ್ಗೆ ಧ್ವನಿ ಎತ್ತಿದ್ದಾರೆ.
ಮೀಸಲಾತಿ ದುರುಪಯೋಗವಾಗುತ್ತಿದೆ ಜಾತಿ ಮೀಸಲಾತಿಯ ಬದಲಾಗಿ ಆದಾಯಕ್ಕೆ ತಕ್ಕಂತೆ ಮೀಸಲಾತಿಯನ್ನು ಜಾರಿಗೊಳಿಸಬೇಕು, ಮೀಸಲಾತಿಯಲ್ಲಿ ಕ್ರೀಮಿಲೇಯರ್ ಪದ್ದತಿಯನ್ನು ಅಳವಡಿಸಿಕೊಂಡು ಮೀಸಲಾತಿ ಜಾರಿಗೆ ತಂದಾಗ ಮಾತ್ರ ಈ ದೇಶ ಉದ್ದಾರವಾಗುತ್ತದೆ. ಖಂಡಿತವಾಗಿ ಇವರ ಮಾತುಗಳಲ್ಲಿ ಸತ್ಯಾಂಶವಿದೆ ಯಾಕೆಂದರೆ ಹಿಂದುಳಿದ ಅದೆಷ್ಟೋ ವರ್ಗಗಳು ಇನ್ನು ಸಹ ಕಾಡುವಾಸಿಗಳಾಗಿ ಜೀವನ ಸಾಗಿಸುತ್ತಿದ್ದಾರೆ.

ಅವರಿಗೆ ಇನ್ನು ಸಹ ಮೀಸಲಾತಿ ತಲುಪಿಲ್ಲ ಮತ್ತೊಂದು ಕಡೆ ಸಾಮಾನ್ಯ ವರ್ಗಕ್ಕೆ ಒಳಪಟ್ಟಿರುವ ಜಾತಿಗಳಲ್ಲಿ ಅದೆಷ್ಟೋ ಜನ ಒಂದು ಹೊತ್ತಿನ ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಮೀಸಲಾತಿ ಬೇಕಿರುವುದು ದುರ್ಬಲರಿಗೆ ಮಾತ್ರ ಆದ್ದರಿಂದಲೇ ನರೇಂದ್ರ ಮೋದಿಯವರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇಖಡಾ ಹತ್ತರಷ್ಟು ಮೀಸಲಾತಿ ಜಾರಿಗೊಳಿಸಿತು.ಇನ್ನಾದರು ನಾವೆಲ್ಲ ಎಚ್ಚೆತ್ತುಕೊಳ್ಳಬೇಕಾಗಿದೆ ಜಾತ್ಯಾತೀತ ರಾಷ್ಟ್ರ ಎಂದು ಕರೆಸಿಕೊಳ್ಳುವ ಭಾರತದಲ್ಲಿ ಸಮಾನತೆ ಬೇಕಾಗಿದೆ ಮೀಸಲಾತಿ ಇಂದು ಸಂಪೂರ್ಣವಾಗಿ ವೋಟ್ ಬ್ಯಾಂಕ್ ರಾಜಕಾರಣವಾಗಿದೆ.

ಆದ್ದರಿಂದ ಜಾತಿ ಆಧಾರದ ಮೇಲಿನ ಮೀಸಲಾತಿಗಿಂತ,ವಾರ್ಷಿಕ ಕುಟುಂಬದ ಆದಾಯದ ಮೇಲಿನ ಮೀಸಲಾತಿ ಜಾರಿಗೆ ತರುವ ಅಗತ್ಯವಿದೆ ಆಗ ಮಾತ್ರ ಈ ದೇಶ ಅಭಿವೃದ್ಧಿ ಹೊಂದುತ್ತದೆ ಈಗಾಗಲೇ ಸರ್ವೋಚ್ಚ ನ್ಯಾಯಾಲಯವು ಸಹ ಮೀಸಲಾತಿ ಶೇ. 50 ಕ್ಕಿಂತ ಹೆಚ್ಚು ದಾಟುವ ಆಗಿಲ್ಲ ಎಂಬ ಆಜ್ಞ ಹೊರಡಿಸಿದೆ.

ಆದರೂ ಸಹ ರಾಜಕೀಯ ಪಕ್ಷಗಳು ಮತವನ್ನು ಗಳಿಸುವ ಏಕೈಕ ಕಾರಣದಿಂದಾಗಿ ಮೀಸಲಾತಿಯ ವಿಚಾರದಲ್ಲಿ ಮಂತ್ರಿ ಶಾಸಕ ಮಹೋದಯರೇ ತಮ್ಮ ತಮ್ಮ ಜಾತಿಯನ್ನು ಓಲೈಸುವ ಸಲುವಾಗಿ ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಜನರಿಗೆ ಇಲ್ಲಸಲ್ಲದ ವಿಚಾರಗಳನ್ನು ತುಂಬಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಆದರೆ, ಒಂದು ಮಾತಂತು ಸತ್ಯ ಇಂತವರ ಆಟ ಬಹಳ ದಿನಗಳ ಕಾಲ ನಡೆಯುವುದಿಲ್ಲ ಯಾಕೆಂದರೆ ಮೀಸಲಾತಿಯ ಬದಲಾವಣೆಯ ಬಗ್ಗೆ ಜನರು ಧ್ವನಿ ಎತ್ತುವ ಕಾಲ ದೂರವಿಲ್ಲ..!

ಮಹಾಂತೇಶ್ ಬ್ರಹ್ಮ
E-mail:-MahantheshBrahma@gmail.com