ಜೋಶಿಮಠ ತೆರವು ಕಾರ್ಯಚರಣೆ ಆರಂಭ

Social Share

ನವದೆಹಲಿ,ಜ.10- ಉತ್ತರಾಖಂಡ್‍ನ ಜೋಶಿಮಠದಲ್ಲಿ ಬಿರುಕು ಬಿಟ್ಟಿರುವ ಮತ್ತು ತೀವ್ರವಾಗಿ ಹಾನಿಗೀಡಾಗಿರುವ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯ ಇಂದಿನಿಂದ ಆರಂಭವಾಗಿದೆ. ಜೋಶಿಮಠವನ್ನು ಅಪಾಯ, ಬಫರ್ ಮತ್ತು ಸಂಪೂರ್ಣವಾಗಿ ಸುರಕ್ಷಿತ ಎಂಬ ಮೂರು ವಲಯಗಳನ್ನಾಗಿ ವಿಂಗಡಿಸಿ ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗೂ 678 ಕಟ್ಟಡಗಳು ಬಿರುಕು ಬಿಟ್ಟಿವೆ. ಅವುಗಳಲ್ಲಿ ಹೆಚ್ಚು ಹಾನಿಗೊಳಗಾಗಿರುವ ಕಟ್ಟಡಗಳು ಹಾಗೂ ವಾಲಿರುವ ಮೌಂಟ್ ವ್ಯೂ ಮತ್ತು ಮಲಾರಿ ಇನ್ ಹೋಟೆಲ್‍ಗಳನ್ನು ಸಂಪೂರ್ಣ ತೆರವುಗೊಳಿಸಲಾಗುತ್ತಿದೆ.

ಸುಮಾರು 4,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗೆ ವ್ಯವಸ್ಥೆ ಮಾಡಲಾದ ಪರಿಹಾರ ಶಿಬಿರಗಳಲ್ಲಿನ ಮೂಲ ಸೌಕರ್ಯಗಳನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ ಮತ್ತು ಸಂತ್ರಸ್ತ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುತ್ತಿದೆ ಎಂದು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಿಮಾಂಶು ಖುರಾನಾ ತಿಳಿಸಿದ್ದಾರೆ.

39 ವರ್ಷ ಬಾಹ್ಯಾಕಾಶ ಸಂಶೋಧನೆ ನಡೆಸಿ ಭೂಮಿಗೆ ಹಿಂತಿರುಗಿದ ಉಪಗ್ರಹ

ಜೋಶಿಮಠವನ್ನು ವಿಪತ್ತು ಪೀಡಿತ ವಲಯವೆಂದು ಘೋಷಿಸಲಾಗಿದೆ ಮತ್ತು ಜೋಶಿಮಠ ಮತ್ತು ಸಮೀಪದ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಿಷೇಸಲಾಗಿದೆ. ಜೋಶಿಮಠದ ಶೇ. 30 ರಷ್ಟು ಹಾನಿಯಾಗಿದೆ ಎಂದು ತೋರುತ್ತದೆ. ತಜ್ಞರ ಸಮಿತಿಯಿಂದ ವರದಿಯನ್ನು ಸಂಗ್ರಹಿಸಲಾಗುತ್ತಿದೆ ಮತ್ತು ಅದನ್ನು ಪ್ರಧಾನ ಮಂತ್ರಿ ಕಚೇರಿಗೆ ಸಲ್ಲಿಸಲಾಗುವುದು ಎಂದು ಅಕಾರಿಯೊಬ್ಬರು ತಿಳಿಸಿದ್ದಾರೆ.

ಸಂತ್ರಸ್ಥರ ರಕ್ಷಣೆ ಹಾಗೂ ಜೋಶಿಮಠವನ್ನು ಉಳಿಸುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮುಖ್ಯಮಂತ್ರಿ ಪುಷ್ಕರ್‍ಸಿಂಗ್ ಧಾಮಿ ಮನವಿ ಮಾಡಿಕೊಂಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಈಗಾಗಲೇ ಘೋಷಿಸಿದ್ದಾರೆ.

ಇಂತಹ ಆತಂಕಕಾರಿ ಪರಿಸ್ಥಿತಿಗೆ ಜಲವಿದ್ಯುತ್ ಯೋಜನೆಗಳು ಸೇರಿದಂತೆ ಯೋಜಿತವಲ್ಲದ ಮೂಲಸೌಕರ್ಯ ಅಭಿವೃದ್ಧಿಯೇ ಕಾರಣ ಎಂದು ತಜ್ಞರು ಆರೋಪಿಸಿದ್ದಾರೆ. ಜೋಶಿಮಠವನ್ನು ಕೇದಾರದ ಬದರಿನಾಥನ ಚಳಿಗಾಲದ ಆಸನ ಎಂದು ಕರೆಯಲಾಗುತ್ತದೆ, ಅವರ ವಿಗ್ರಹವನ್ನು ಮುಖ್ಯ ಬದರಿನಾಥ ದೇವಸ್ಥಾನದಿಂದ ಪಟ್ಟಣದ ವಾಸುದೇವ ದೇವಸ್ಥಾನಕ್ಕೆ ಪ್ರತಿ ಚಳಿಗಾಲದಲ್ಲಿ ತರಲಾಗುತ್ತದೆ. ಇದು ಸಿಖ್ಖರ ಪವಿತ್ರ ಕ್ಷೇತ್ರ ಹೇಮಕುಂಡ್ ಸಾಹಿಬ್‍ಗೆ ಗೇಟ್‍ವೇ ಆಗಿದೆ.

ಚಳಿಯಲ್ಲೂ ರಾಹುಲ್‍ ಟೀ ಶರ್ಟ್ ಧರಿಸೋದೇಕೆ..? ಇದರ ಹಿಂದಿದೆ ಮನಕಲಕುವ ಕಥೆ

ನ್ಯಾಶನಲ್ ಥರ್ಮಲ್ ಪವರ್ ಕಾಪೆರ್ರೇ ಷನ್ (ಎನ್‍ಟಿಪಿಸಿ) ಯೋಜನೆಯ ಸುರಂಗಗಳಲ್ಲಿ ಸ್ಪೋಟದ ಪರಿಣಾಮದ ಬಗ್ಗೆ ಕಳೆದ ತಿಂಗಳು ಮುಖ್ಯಮಂತ್ರಿಗೆ ಮೂರು ಬಾರಿ ಪತ್ರ ಬರೆದಿದ್ದೇವೆ ಎಂದು ನಿವಾಸಿಗಳು ದೂರು ನೀಡಿದ್ದರು ಯಾವುದೆ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಜೋಶಿಮಠ ಅವನತಿಯ ಹಾದಿ ಹಿಡಿದಿದೆ ಎನ್ನಲಾಗಿದೆ.

Residents, evacuated, Uttarakhand, Joshimath,

Articles You Might Like

Share This Article