RCB ಕೊಹ್ಲಿ ಬಿಟ್ಟು ಉಳಿದ ಆಟಗಾರರನ್ನು ಹರಾಜಿಗೆ ಬಿಟ್ಟುಕೊಡಲಿ : ಆರ್.ಪಿ.ಸಿಂಗ್

ನವದೆಹಲಿ, ಸೆ. 29- ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿಯನ್ನು ಬಿಟ್ಟು ಉಳಿದ ಆಟಗಾರರನ್ನು ಹರಾಜಿಗೆ ಬಿಟ್ಟುಕೊಟ್ಟು ರೈಟ್ ಟು ಮ್ಯಾಚ್ ನಿಯಮದಡಿ ಆಟಗಾರರನ್ನು ಖರೀದಿಸಬೇಕೆಂದು ಮಾಜಿ ಕ್ರಿಕೆಟಿಗ ಆರ್.ಪಿ.ಸಿಂಗ್ ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಸಮಿತಿಯು ನಿನ್ನೆ ನಡೆದ ಸಭೆಯಲ್ಲಿ ಮುಂಬರುವ ಮೂರು ಆವೃತ್ತಿಗಳಿಗೆ ಕಠಿಣ ನಿಯಮಗಳನ್ನು ಪ್ರಕಟಿಸಿದ್ದು, ಪ್ರತಿ ಫಾಂಚೈಸಿ ಐದು ಅನುಭವಿ ಆಟಗಾರರು ಹಾಗೂ ಒಂದು ಆರ್ಟಿಎಂ ಮೂಲಕ ಒಟ್ಟು 6 ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು ಎಂದು ಸೂಚಿಸಿದೆ. ಈ ನಡುವೆ ವಿಶ್ವಕಪ್ ವಿಜೇತ ಬೌಲರ್ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ರುದ್ರಪ್ರತಾಪ್ ಸಿಂಗ್ ಅವರು ಬೆಂಗಳೂರು ಫ್ರಾಂಚೈಸಿ ವಿರಾಟ್ ಕೊಹ್ಲಿಯನ್ನು ತಂಡದಲ್ಲಿ ಉಳಿಸಿಕೊಂಡು ಉಳಿದ ಆಟಗಾರರನ್ನು ಮೆಗಾ ಹರಾಜಿಗೆ ಬಿಟ್ಟುಕೊಡಬೇಕೆಂದು ಹೇಳಿದ್ದಾರೆ. `ಐಪಿಎಲ್ ನೂತನ ನಿಯಮಗಳಿಂದ ಆರ್ಸಿಬಿ ತಂಡಕ್ಕೆ ಯಾವುದೇ ತೊಂದರೆ ಆಗುವುದಿಲ್ಲ, ಆ ಫ್ರಾಂಚೈಸಿ ಕೇವಲ ವಿರಾಟ್ಕೊಹ್ಲಿಯನ್ನು ಮಾತ್ರ ತಂಡದಲ್ಲಿ ಉಳಿಸಿಕೊಂಡು ಇತರ ಆಟಗಾರರನ್ನು … Continue reading RCB ಕೊಹ್ಲಿ ಬಿಟ್ಟು ಉಳಿದ ಆಟಗಾರರನ್ನು ಹರಾಜಿಗೆ ಬಿಟ್ಟುಕೊಡಲಿ : ಆರ್.ಪಿ.ಸಿಂಗ್