ತಮಿಳುನಾಡು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟು ವಿವಾದ ಸೃಷ್ಟಿಸಿದ ಮಾಜಿ ಯೋಧ

Social Share

ಚೆನ್ನೈ,ಫೆ.24- ದೇಶ ಕಾಯುವ ಯೋಧರ ಜೀವದೊಂದಿಗೆ ಚೆಲ್ಲಾಟವಾಡಿದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಮಾಜಿ ಸೈನಿಕರೊಬ್ಬರು ತಮಿಳುನಾಡು ಸರ್ಕಾರಕ್ಕೆ ಎಚ್ಚರಿಕೆ ನೀಡುವ ವಿವಾದ ಸೃಷ್ಟಿಸಿದ್ದಾರೆ.

ಡಿಎಂಕೆ ಕೌನ್ಸಿಲರ್ ಮತ್ತಿತರರಿಂದ ಹಲ್ಲೆಗೊಳಗಾದ ಸೈನಿಕನೊಬ್ಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಪ್ರಕರಣ ಖಂಡಿಸಿ ಚೆನ್ನೈನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸೈನಿಕ ಕರ್ನಲ್ ಬಿಬಿ ಪಾಂಡಿಯನ್ ಅವರ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಮಾಜಿ ಸೈನಿಕ ಕರ್ನಲ್ ಬಿಬಿ ಪಾಂಡಿಯನ್ ವಿರುದ್ಧ ಚೆನ್ನೈ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಮಿಳುನಾಡಿನಲ್ಲಿ ಬಿಜೆಪಿ ಮಾಜಿ ಸೈನಿಕರ ವಿಭಾಗದ ಪದಾಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಕರ್ನಲ್ ಬಿ ಪಾಂಡಿಯನ್ ಅವರು ಮುಷ್ಕರದ ಸಮಯದಲ್ಲಿ, ನಾನು ತಮಿಳುನಾಡು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇನೆ. ಭಾರತೀಯ ಸೇನೆಯು ವಿಶ್ವದ ಎರಡನೇ ಅತಿದೊಡ್ಡ ಸೈನ್ಯವಾಗಿದೆ. ಮತ್ತು ಅತ್ಯಂತ ಶಿಸ್ತುಬದ್ಧ ಸೇನೆಯಾಗಿದೆ.

ನೀವು ಸೇನಾ ಯೋಧರನ್ನು ಪ್ರಚೋದಿಸಿದರೆ ಅದು ರಾಜ್ಯಕ್ಕಾಗಲೀ ಅಥವಾ ಸರಕಾರಕ್ಕಾಗಲೀ ಒಳ್ಳೆಯದಲ್ಲ ಆಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದು ಪಾಂಡಿಯನ್ ಎಚ್ಚರಿಸಿದ್ದರು.

ಮಾಜಿ ಸೈನಿಕರು ಬಾಂಬ್‍ಗಳು ಮತ್ತು ಗನ್‍ಗಳನ್ನು ಬಳಸುವುದರಲ್ಲಿ ಸುಶಿಕ್ಷಿತರು. ನಮಗೆ ಎಲ್ಲಾ ವಿಷಯಗಳು ತಿಳಿದಿವೆ ಆದರೆ ನಾವು ಅದನ್ನು ಮಾಡಲು ಬಯಸುವುದಿಲ್ಲ. ಈ ಕೆಲಸಗಳನ್ನು ಮಾಡಬೇಡಿ ಎಂದು ನಾನು ರಾಜ್ಯ ಸರ್ಕಾರವನ್ನು ವಿನಂತಿಸುತ್ತೇನೆ ಎಂದಿದ್ದರು.

ಡಿಎಂಕೆ ಕೌನ್ಸಿಲರ್‍ನಿಂದ ಕೃಷ್ಣಗಿರಿ ಜಿಲ್ಲೆ ಯಲ್ಲಿ ಸೇನಾ ಜವಾನನ ಹತ್ಯೆಗೆ ಸಂಬಂಸಿದಂತೆ ಬಿಜೆಪಿಯ ರಾಜ್ಯ ಘಟಕವು ಚೆನ್ನೈನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾಜಿ ಸೈನಿಕ ಈ ಎಚ್ಚರಿಕೆ ನೀಡಿದ್ದಾರೆ.

Retired Lt Col booked for ‘provocative’ speech threatening Tamil Nadu govt during stir

Articles You Might Like

Share This Article