ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದ ಅನೇಕ ನಿವೃತ್ತ ಅಧಿಕಾರಿಗಳು

Social Share

ಬೆಂಗಳೂರು, ಫೆ.15- ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಹುಡುಕಾಟದಲ್ಲಿದ್ದಾರೆ. ಈ ವೇಳೆ ಅನೇಕ ನಿವೃತ್ತ ಅಧಿಕಾರಿಗಳು ಚುನಾವಣೆಯಲ್ಲಿ ತಮ್ಮ ರಾಜಕೀಯ ಭವಿಷ್ಯ ಪರೀಕ್ಷಿಸಲು ಮುಂದಾಗಿದ್ದಾರೆ.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಹಲವು ಮಾಜಿ ಸರ್ಕಾರಿ ಅಧಿಕಾರಿಗಳು ರಾಜಕೀಯ ಬಣ್ಣ ಹಚ್ಚಿದ್ದಾರೆ ಅಥವಾ ಹಚ್ಚಲಿದ್ದಾರೆ. ಕೆಲವರು ವಿವಿಧ ಪಕ್ಷಗಳ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.

ಮಾಜಿ ಐಎಎಸ್ ಅಧಿಕಾರಿ ಎಸ್ ಜೈಶಂಕರ್ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೈ ಎನಿಸಿದ್ದಾರೆ. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಕೆ ಅಣ್ಣಾಮಲೈ ಈಗ ತಮಿಳುನಾಡಿನಲ್ಲಿ ಬಿಜೆಪಿಯ ಸ್ಟಾರ್ ಮ್ಯಾನ್ ಆಗಿದ್ದಾರೆ. ಮಾಜಿ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಆಮ್ ಆದ್ಮಿ ಪಥಕ್ಕೆ ಹೊರಳಿದ್ದಾರೆ.

ಈ ಬಾರಿಯೂ ಹಲವಾರು ನಿವೃತ್ತ ಅಧಿಕಾರಿಗಳು ಮತ್ತು ಅಧಿಕಾರಿಗಳು ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳಿಂದ ಟಿಕೆಟ್‍ಗಾಗಿ ಲಾಬಿ ನಡೆಸುತ್ತಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಗೊಳ್ಳುವ ಮೂಲಕ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಖಾಕಿ ಕಳಚಿ, ಖಾದಿ ಅಪ್ಪಿಕೊಂಡರು. ಬಸವನಗುಡಿ ಕ್ಷೇತ್ರದಿಂದ ಸ್ರ್ಪಸುವ ಸಾಧ್ಯತೆ ಇದೆ.

ಅದೇ ರೀತಿ, ಮಾಜಿ ಮಾಹಿತಿ ಆಯುಕ್ತ ಮತ್ತು ಐಆರ್‍ಎಸ್ ಅಧಿಕಾರಿ ಸುಧಾಮ್ ದಾಸ್ ಕೂಡ ರಾಜೀನಾಮೆ ನೀಡಿದ್ದು, ನೆಲಮಂಗಲ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‍ನಲ್ಲಿ ಸ್ರ್ಪಸಲು ಆಕಾಂಕ್ಷಿಯಾಗಿದ್ದಾರೆ. ಅವರ ಹಿಂದಿನ ಅಧಿಕಾರಿಯಾಗಿದ್ದ ಎಲ್. ಕೃಷ್ಣಮೂರ್ತಿ ಕೂಡ ಇದೇ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿ ಎಚ್.ಟಿ.ಅನಿಲ್ ಕುಮಾರ್ ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿಯಿಂದ ರಾಜಕೀಯ ಜೀವನ ಆರಂಭಿಸುವ ಸಾಧ್ಯತೆಯಿದೆ. ಅದೇ ರೀತಿ ನಿವೃತ್ತ ಪೌರಕಾರ್ಮಿಕ ಲಕ್ಷ್ಮೀನಾರಾಯಣ ಅವರು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಿಂದ ಟಿಕೆಟ್ ಬಯಸಿದ್ದಾರೆ.

ಸಕಲೇಶಪುರ ಅಥವಾ ಮುಳಬಾಗಲು ಟಿಕೆಟ್ಗಾಗಿ ಸಿದ್ದಯ್ಯ ಮತ್ತೆ ಲಾಬಿ ನಡೆಸುತ್ತಿದ್ದಾರೆ. ನಿವೃತ್ತ ಉಪಕುಲಪತಿ ಮಹೇಶಪ್ಪ ಅವರು ಹರಿಹರದಿಂದ ಸ್ಪರ್ಧಿಸಲು ಮುಂದಾಗಿದ್ದು, ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ ಅವರು ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಿಂದ ಕಾಂಗ್ರೆಸ್ ಟಿಕೆಟ್‍ಗಾಗಿ ಲಾಬಿ ನಡೆಸುತ್ತಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿಗಳು ಹಾವೇರಿ ಮತ್ತು ಶಿಕಾರಿಪುರದಿಂದಲೂ ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ. ನಿವೃತ್ತ ಕೆಎಎಸ್ ಅಧಿಕಾರಿ ಪುಟ್ಟಸ್ವಾಮಿ ಅರಕಲಗೂಡಿನಿಂದ ರಾಜಕೀಯಕ್ಕೆ ಬರಲು ಬಯಸಿದ್ದು, ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಕಾಂಗ್ರೆಸ್‍ನಿಂದ ನಿವೃತ್ತ ಸೂಪರಿಂಟೆಂಡೆಂಟ್ ಇಂಜಿನಿಯರ್ ಕೂಡ ಕಣಕ್ಕಿಳಿಯಲು ಬಯಸಿದ್ದಾರೆ.

ಆದರೆ, ಮಾಜಿ ಐಪಿಎಸ್ ಅಧಿಕಾರಿಗಳಾದ ಎಚ್.ಟಿ.ಸಾಂಗ್ಲಿಯಾನ ಮತ್ತು ಕೋದಂಡರಾಮಯ್ಯ ಅವರಂತಹ ಕೆಲವರು ಮಾತ್ರ ಲೋಕಸಭೆಗೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಕೆಪಿಟಿಸಿಎಲ್‍ನಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಎಚ್.ನಾಗೇಶ್ ಮುಳಬಾಗಲಿನಿಂದ ಸ್ಪರ್ಧಿಸಿ ಗೆಲುವು ಸಾಸಿದ್ದರು.

ಮತ್ತೊಂದೆಡೆ ಸಕಲೇಶಪುರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‍ನಿಂದ ಸ್ರ್ಪಸಿದ್ದ ಸಿದ್ದಯ್ಯ ಮತ್ತು ಆಂಧ್ರಪ್ರದೇಶದಲ್ಲಿ ಬಿಜೆಪಿ ಟಿಕೆಟ್‍ನಿಂದ ಸ್ರ್ಪಸಿದ್ದ ಮಾಜಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರ ರಾಜಕೀಯ ಇನ್ನಿಗ್ಸ್ ಅವರ ಆಡಳಿತಾತ್ಮಕ ಇನ್ನಿಂಗ್ಸ್‍ನಷ್ಟು ಉತ್ತಮವಾಗಿರಲಿಲ್ಲ.

ಅನೇಕ ಅಧಿಕಾರಿಗಳು ಎಲ್ಲಾ ಮೂರು ರಾಜಕೀಯ ಪಕ್ಷಗಳ ಬಾಗಿಲು ತಟ್ಟುತ್ತಿದ್ದಾರೆ. ಪಕ್ಷದ ಟಿಕೆಟ್ ಖಚಿತವಾದ ನಂತರ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ವೈದ್ಯರೊಬ್ಬರು ಟಿ.ನರಸೀಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿದ್ದು, ಅಬಕಾರಿ ಅಧಿಕಾರಿಯೊಬ್ಬರು ಮಂಡ್ಯ ಜಿಲ್ಲೆಯ ಮಳವಳ್ಳಿ ಎಸ್‍ಸಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.

ಸರ್ಕಾರಿ ಅಧಿಕಾರಿಗಳ ರಾಜಕೀಯ ಹಾದಿ:
ಭಾಸ್ಕರ್ ರಾವ್, ಮಾಜಿ ಐಪಿಎಸ್ ಅಧಿಕಾರಿ: ಎಎಪಿ ಬೆಂಗಳೂರು
ಕೆ.ಮಥಾಯ್ , ಮಾಜಿ ಐಎಎಸ್ ಅಧಿಕಾರಿ: ಎಎಪಿ ಬೆಂಗಳೂರು
ಹೆಚ್.ಟಿ.ಅನಿಲ್ ಕುಮಾರ್, ನಿವೃತ್ತ ಐಎಎಸ್ ಅಧಿಕಾರಿ: ಬಿಜೆಪಿ
ಎಂ ಲಕ್ಷ್ಮೀನಾರಾಯಣನ್, ನಿವೃತ್ತ ಐಎಎಸ್ ಅಧಿಕಾರಿ: ಬಿಜೆಪಿ
ಸುಧಾಮ್ ದಾಸ್, ಐಆರ್‍ಎಸ್ ಅಧಿಕಾರಿ: ಕಾಂಗ್ರೆಸ್
ಸುಭಾಷ್ ಚಂದ್ರ ರಾಥೋಡ್, ಸಿವಿಲ್ ನ್ಯಾಯಾಧೀಶ : ಜೆಡಿಎಸ್

#Retiredofficials #politics,

Articles You Might Like

Share This Article