ಸೆ.29ರಂದು ಸಿಇಟಿ ಪರಿಷ್ಕೃತ ರಾಂಕಿಂಗ್ ಪ್ರಕಟ, ಅ.3ರಿಂದ ಕೌನ್ಸೆಲಿಂಗ್

Social Share

ಬೆಂಗಳೂರು: ವೃತಿಪರ ಕೋರ್ಸ್ ಗಳ ಸಿಇಟಿ ರಾಂಕಿಂಗ್ ಗೆ ಸಂಬಂಧಿಸಿದಂತೆ ಉಂಟಾಗಿದ್ದ ಬಿಕ್ಕಟ್ಟನ್ನು ಬಗೆಹರಿಸಲು ರಾಜ್ಯ ಸರಕಾರ ನೇಮಿಸಿದ್ದ ಸಮಿತಿಯ ವರದಿಯನ್ನು ಹೈಕೋರ್ಟ್ ಒಪ್ಪಿಕೊಂಡಿದೆ. ಇದು ಸ್ವಾಗತಾರ್ಹವಾಗಿದ್ದು, ಪರಿಷ್ಕೃತ ಸಿಇಟಿ ರಾಂಕಿಂಗ್ ಪಟ್ಟಿಯನ್ನು ಇದೇ 29ರಂದು ಬಿಡುಗಡೆ ಮಾಡಲಾಗುವುದು.

ಜತೆಗೆ ಅಕ್ಟೋಬರ್‌ 3ರಿಂದ ಪ್ರವೇಶಾತಿ ಮೊದಲ ಸುತ್ತಿನ ಕೌನ್ಸೆಲಿಂಗ್ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಶುಕ್ರವಾರ ಈ ಬಗ್ಗೆ ಮಾತನಾಡಿರುವ ಅವರು, ಸಮಸ್ಯೆಯನ್ನು ಬಗೆಹರಿಸಲು ಒಂದು ಸಮನ್ವಯ ಸೂತ್ರ ರೂಪಿಸುವಂತೆ ಸೂಚಿಸಿತ್ತು.

ಅದರಂತೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಐವರ ಸಮಿತಿ ರಚಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದೆವು. ನ್ಯಾಯಾಲಯವು ಸಮಿತಿ ಕೊಟ್ಟ ವರದಿಯನ್ನು ಪುರಸ್ಕರಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.

Articles You Might Like

Share This Article