ಬೆಂಗಳೂರು,ಮಾ.8- ರೈಸ್ ಪುಲ್ಲಿಂಗ್ ಮಿಷನ್ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ಹಣ ಪಡೆದು ವಂಚಿಸಿದ್ದ ಎಂಟು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ರೈಸ್ ಪುಲ್ಲಿಂಗ್ ಮಿಷನ್ ಹಾಗೂ 35.30 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ರಾಜೇಶ್(36), ಮೊಹಮ್ಮದ್ ಗೌಸ್ ಪಾಷ(52), ಸ್ಟೀಪನ್ ಅಲಿಯಾಸ್ ನಯೀಮ್(38), ಸಾಹಿಲ್(37), ಶ್ರೀನಿವಾಸ್(35), ವಿಕಾಸ್(27), ಕುಮಾರ್(29) ಮತ್ತು ಸ್ರೀವಲ್ಸ್‍ನ್(42) ಬಂಧಿತ ವಂಚಕರು. ತಮ್ಮ ಬಳಿ ತುಂಬಾ ಬೆಲೆ ಬಾಳುವ ರೈಸ್ ಪುಲ್ಲಿಂಗ್ ಮಿಷನ್ ಇದೆ. ಅದು ಕೋಟ್ಯಂತರ ರೂ. ಬೆಲೆ ಬಾಳುತ್ತದೆ ಎಂದು ಸಾರ್ವಜನಿಕರನ್ನು ನಂಬಿಸಿದ್ದ ಈ ವಂಚಕರು, ಈ ಮಿಷನ್ ಖರೀದಿಸಿದರೆ ನೀವು ಶ್ರೀಮಂತರಾಗುತ್ತೀರಿ ಎಂದು ಮರಳು ಮಾಡಿದ್ದಾರೆ.
ಈ ವಂಚಕರ ಮಾತನ್ನು ನಂಬಿದ ಸಾರ್ವಜನಿಕರು ರೈಸ್ ಪುಲ್ಲಿಂಗ್ ಮಿಷನ್ ಖರೀದಿಸಲು ಲಕ್ಷಾಂತರ ರೂ. ಹಣ ಕೊಟ್ಟಿದ್ದಾರೆ. ಹಣ ಪಡೆದುಕೊಂಡ ವಂಚಕರು ಸಾರ್ವಜನಿಕರಿಗೆ ಸಿಗದೆ ನಾಪತ್ತೆಯಾಗಿದ್ದರು.
ಬಿರುಸುಗೊಂಡ ಪಕ್ಷಾಂತರ ಪರ್ವ : ನೆಲೆ ಕಂಡುಕೊಳ್ಳಲು ಆಕಾಂಕ್ಷಿಗಳ ಪರದಾಟ
ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಎಂಟು ಮಂದಿಯನ್ನು ಬಂಧಿಸಿ ರೈಸ್ ಪುಲ್ಲಿಂಗ್ ಯಂತ್ರ ಹಾಗೂ ಸಾರ್ವಜನಿಕರಿಂದ ವಸೂಲಿ ಮಾಡಿದ್ದ 35.30 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಹಿನ್ನಲೆ:
ಆರೋಪಿಗಳು ಹಲಸೂರಿನ ಎಂ.ಜಿ.ರಸ್ತೆಯಲ್ಲಿರುವ ಓಬೇರಾಯ್ ಹೋಟೆಲ್‍ನ ಬಿಜಿನೆಸ್ ಬೋರ್ಡ್‍ನಲ್ಲಿ ಗಿರಾಕಿಗಳನ್ನು ಬರಮಾಡಿಕೊಂಡು ತಮ್ಮ ಬಳಿ ಬೆಲೆ ಬಾಳುವ ರೈಸ್ ಪುಲ್ಲಿಂಗ್ ಮಿಷನ್ ಇದ್ದು ಅದು ಕೋಟ್ಯಂತರ ರೂ. ಬೆಲೆ ಬಾಳುವುದಾಗಿದೆ ಎಂದು ನಂಬಿಸಿದ್ದಾರೆ.
ರೈಸ್ ಪುಲ್ಲಿಂಗ್ ಮಿಷನ್‍ನನ್ನು ಮಾರಾಟ ಮಾಡುವ ನೆಪದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಯಾವುದೇ ಯಂತ್ರವನ್ನು ಕೊಡದೆ ಮೋಸ ಮಾಡಿ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.
ಭಾರತದಲ್ಲಿ ಹೋಳಿ ಹಬ್ಬ ಆಚರಿಸಿದ ಅಮೆರಿಕದ ಉನ್ನತಾಧಿಕಾರಿ
ಜಂಟಿ ಪೊಲೀಸ್ ಆಯುಕ್ತ ಡಾ.ಶರಣಪ್ಪ, ಉಪಪೊಲೀಸ್ ಆಯುಕ್ತರಾದ ಯತೀಶ್ ಚಂದ್ರ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಹಾಯಕ ಪೊಲೀಸ್ ಆಯುಕ್ತರಾದ ರೀನಾ ಸುವರ್ಣ, ಇನ್‍ಸ್ಪೆಕ್ಟರ್‍ಗಳಾದ ಚಂದ್ರಕಲಾ, ಚಂದ್ರಪ್ಪ ಬಾರ್ಕಿ, ಹಜರೇಶ್ ಕಕಿಲ್ಲೇದಾರ್ ಮತ್ತು ಸಿಬ್ಬಂದಿ ತಂಡ ಈ ಕಾರ್ಯಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
rice, pulling, Fraud, 8 arrested,