ಟಿ-20 ವಿಶ್ವಕಪ್ : ಆಸ್ಟ್ರೇಲಿಯಾ-ಭಾರತ ಫೈನಲ್ ಫೈಟ್, ಪಾಂಟಿಂಗ್ ಭವಿಷ್ಯ

Social Share

ನವದೆಹಲಿ,ಅ.4- ಐಸಿಸಿ ಟಿ 20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ಮತ್ತು ಭಾರತ ಫೈನಲ್ ತಲುಪಿ ಚಾಂಪಿಯನ್ನ ಪಟ್ಟಕ್ಕೆ ಕಾದಾಟ ನಡೆಸಲಿವೆ ಕ್ರಿಕೆಟ್ ದಿಗ್ಗಜ ಆಸಿಸ್‍ಮಾಜಿ ನಾಯಕ ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.

ಟೀಮ್ ಇಂಡಿಯಾ ಚೊಚ್ಚಲ ಆವೃತ್ತಿಯ (2007) ಚಾಂಪಿಯನ್ಸ್ ಆಗಿದ್ದು ಬಳಿಕ ಟ್ರೋಫಿ ಗೆಲುವಿನ ಬರ ಎದುರಿಸಿದೆ. ಅತ್ತ 2021ರ ಆವೃತ್ತಿಯಲ್ಲಿ ಟ್ರೋಫಿ ಗೆದ್ದು ಮೊದಲ ಯಶಸ್ಸು ಕಂಡ ಆಸ್ಟ್ರೇಲಿಯಾ ತಂಡ ಇದೀಗ ತಾಯ್ನಾಡಿನಲ್ಲೂ ಅದೇ ಯಸಸ್ಸು ಕಂಡು ಬ್ಯಾಕ್ ಟು ಬ್ಯಾಕ್ ಚಾಂಪಿಯನ್ಸ್ ಪಟ್ಟ ಗೆಲ್ಲಲು ಗುರಿಯಿಟ್ಟಿದೆ.

ಟೂರ್ನಿಯ ಸೂಪರ್-12 ಹಂತ ಇನ್ನೇನು ಮುಗಿಯುವ ಹಂತಕ್ಕೆ ತಲುಪಿದ್ದು ಗ್ರೂಪ್ ಎ ಮತ್ತು ಗ್ರೂಪ್ ಬಿ ಗುಂಪುಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದ್ದು ಈವರೆಗೆ ಯಾವ ತಂಡವೂ ಸೆಮಿಫೈನಲ್ಸ್ ಸ್ಥಾನ ಖಾತ್ರಿ ಪಡಿಸಿಕೊಂಡಿಲ್ಲ.

ಗ್ರೂಪ್ ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಭಾರಿ ಪೈಪೋಟಿ ಇದ್ದು, ಗ್ರೂಪ್ ಬಿ ಗುಂಪಿನಲ್ಲಿ ಭಾರತ , ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅಂತಿಮ ನಾಲ್ಕರ ಘಟ್ಟಕ್ಕೆ ತಲುಪಲು ಹೋರಾಟ ನಡೆಸುತ್ತಿವೆ. ಈ ನಡುವೆ ಮಳೆ ಪಂದ್ಯಾವಳಿಗೆ ಭಾರಿ ಕಾಟ ಕೊಟ್ಟಿದೆ.

BREAKING : ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲು ದಾಖಲೆ ಕೇಳುವಂತಿಲ್ಲ

ಸೆಮಿಫೈನಲ್ಸ್‍ಗೆ ತಂಡಗಳು ಅರ್ಹತೆ ಪಡೆಯಲು ಮಳೆ ಬಹುದೊಡ್ಡ ಕಾರಣವಾಗಿದೆ. ಹಲವು ಪಂದ್ಯಗಳು ಟಾಸ್ ಕೂಡ ಕಾಣದೆ ರದ್ದಾಗಿ ಕ್ರಿಕೆಟ್ ಪ್ರಿಯರಿಗೆ ಭಾರಿ ನಿರಾಶೆಯನ್ನೂ ತಂದೊಡ್ಡಿದೆ.ಭಾರತ ಒಳ್ಳೆ ಫಾರ್ಮ್ ನಲ್ಲಿದ್ದು ಯಾವಾಗ ಬೇಕಾದರು ಪುಟಿದೇಳುವ ಆಟಗಾರರು ಇದ್ದಾರೆ ಪೈನಲ್ ಮಂದ್ಯ ಯಾರ ಕಡೆ ಬೇಕಾದರು ಹೋಗಬಹುದು ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

AIOSEO Settings

2022ರ ಟಿ20 ವಿಶ್ವಕಪ್‍ನ ಫೈನಲ್ ಪಂದ್ಯ ಇತಿಹಾಸ ಪ್ರಸಿದ್ಧ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‍ನಲ್ಲಿ ನ.13ರಂದು ನಡೆಯಲಿದೆ. ನಾನು ಆಸ್ಟ್ರೇಲಿಯಾ ತಂಡದ ನಾಯಕನಾಗಿದ್ದಾಗ ಆಡಿದ ಬಹುದೊಡ್ಡ ಪಂದ್ಯಗಳಲ್ಲಿ ಆಟಗಾರರಿಗೆ ಈ ಸಮಯವನ್ನು ಆನಂದಿಸಿ ಎಂದಷ್ಟೇ ಹೇಳುತ್ತಿದ್ದ. ಅವಕಾಶ ಕಳೆದುಕೊಳ್ಳಬೇಡಿ ಇದು ಮತ್ತೊಂದು ಪಂದ್ಯ ಎಂದಷ್ಟೇ ಅಂದುಕೊಂಡು ಶ್ರೇಷ್ಠ ಆಟವಾಡಬೇಕು ಅಷ್ಟೆ ಎನ್ನುತ್ತಿದ್ದೆ ,ಒತ್ತಡ ಕಡಿಮೆಯಾದಷ್ಟೂ ಉತ್ತಮ ಆಟವಾಡಲು ಸಾಧ್ಯ ಎಂದುಅವರು ತಿಳಿಸಿದ್ದಾರೆ.

Articles You Might Like

Share This Article