BIG NEWS : ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಕಾಂತಾರ ಚಿತ್ರ

Social Share

ಬೆಂಗಳೂರು,ಜ.10- ಭಾರತೀಯ ಚಿತ್ರೋದ್ಯಮದಲ್ಲಿ ಸಂಚಲನ ಮೂಡಿಸಿದ್ದ ಕಾಂತಾರ ಕನ್ನಡ ಸಿನಿಮಾ ಚಿತ್ರರಂಗ ಅಂತಾರಾಷ್ಟ್ರೀಯ ಅತ್ಯುನ್ನತ ಪ್ರಶಸ್ತಿ ಆಸ್ಕರ್‍ಗೆ ಮೊದಲ ಹಂತದಲ್ಲಿ ನಾಮನಿರ್ದೇಶನಗೊಂಡಿದೆ. ಉತ್ತಮ ಚಿತ್ರ ಹಾಗೂ ಉತ್ತಮ ನಟ ಎಂಬ ಎರಡು ವಿಭಾಗದಲ್ಲಿ ಕಾಂತಾರ ನಾಮನಿರ್ದೇಶನಗೊಂಡಿದೆ ಎಂದು ಚಿತ್ರ ನಿರ್ಮಿಸಿದ ಸಂಸ್ಥೆ ಹೊಂಬಾಳೆ ತಿಳಿಸಿದೆ.

ಕಾಂತಾರ ಎರಡು ಅರ್ಹತೆಗಳನ್ನು ಪಡೆದುಕೊಂಡಿದೆ. ನಮ್ಮನ್ನು ಬೆಂಬಲಿಸಿದ್ದ ಎಲ್ಲರಿಗೂ ಹೃದಯ ತುಂಬಿದ ಧನ್ಯವಾದ ಎಂದು ಸಂಸ್ಥೆ ಹೇಳಿದ್ದು, ನಿಮ್ಮ ಬೆಂಬಲದೊಂದಿಗೆ ಈ ಪ್ರಯಾಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ಆಸ್ಕರ್‍ನಲ್ಲಿ ಕಾಂತಾರ, ರಿಷಬ್‍ಶೆಟ್ಟಿ ಅವರು ಹೊಳೆಯುವುದನ್ನು ನೋಡಲು ಕಾಯಲಾಗುತ್ತಿಲ್ಲ ಎಂದಿದೆ. ಇದೇ ಟ್ವೀಟ್ ಅನ್ನು ರಿಷಬ್ ಶೆಟ್ಟಿ ಹಂಚಿಕೊಂಡಿದ್ದಾರೆ.

ಕಾಂತಾರ 2022ರಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಭಾರೀ ಸದ್ದು ಮಾಡಿದೆ. ಕಡಿಮೆ ಬಜೆಟ್‍ನಲ್ಲಿ ನಿರ್ಮಾಣಗೊಂಡು 500 ಕೋಟಿ ರೂಪಾಯಿಗೆ ಹೆಚ್ಚು ಗಳಿಕೆ ಮಾಡಿದ್ದಲ್ಲದೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡಿದೆ.

ಭಾರತೀಯ ಭಾಷೆಗಳಾದ ಹಿಂದಿ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳಿಗೆ ಡಬ್‍ಗೊಂಡಿದೆ. ದಕ್ಷಿಣ ಕನ್ನಡ ಭಾಗದಲ್ಲಿನ ದೈವ, ಭೂತಕೋಲಾ ಸಂಸ್ಕøತಿ, ಭೂಮಾಲೀಕರು ಮತ್ತು ಗೇಣಿದಾರರ ನಡುವಿನ ಸಂಘರ್ಷವನ್ನು ಕಾಂತಾರ ಕತೆ ಪ್ರತಿಧ್ವನಿಸುತ್ತದೆ.

ಕಾಂತಾರದ ಜೊತೆಗೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರಿ ಫೈಲ್ಸ್ , ರಾಜಮೌಳಿ ನಿರ್ದೇಶನದ ಆರ್‍ಆರ್‍ಆರ್ ಸೇರಿ ಐದು ಭಾರತೀಯ ಚಿತ್ರಗಳು ಆಸ್ಕರ್ ಅಂಗಳದಲ್ಲಿವೆ.

ಅಮೆರಿಕದಲ್ಲಿ ಜೂ.ಎನ್‌ಟಿಆರ್‌ಗೆ ಅದ್ಭುತ ಸ್ವಾಗತ

ಆಸ್ಕರ್ 95ನೇ ಆವೃತ್ತಿಯ ಪ್ರಶಸ್ತಿಗಳಿಗೆ ವಿಶ್ವಾದ್ಯಂತ 301 ಚಿತ್ರಗಳು ನಾಮನಿರ್ದೇಶನಗೊಂಡಿವೆ. ಜನವರಿ 12ರಿಂದ 17ರ ನಡುವೆ 9579 ಅಕಾಡೆಮಿಯ ಸದಸ್ಯರು ಆಸ್ಕರ್ ಆಯ್ಕೆಗೆ ಮತದಾನ ಮಾಡಲಿದ್ದಾರೆ. ಮಾರ್ಚ್ 12ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ತಿಳಿಸಲಾಗಿದೆ.

Rishab Shetty, Kantara, qualifies, Oscars, contention list,

Articles You Might Like

Share This Article