ದುಬಾರಿ ವಾಚ್ ಮಾರಲು ಹೋಗಿ 1.63 ಕೋಟಿ ಕಳೆದುಕೊಂಡ ರಿಷಭ್ ಪಂತ್..!
ನವದೆಹಲಿ, ಮೇ 24- ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅವರು ತಮ್ಮಲ್ಲಿದ್ದ ದುಬಾರಿ ಬೆಲೆಯ ವಾಚುಗಳು ಹಾಗೂ ಚಿನ್ನಾಭರಣಗಳನ್ನು ಮಾರಲು ಹೋಗಿ 1.63 ಕೋಟಿ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ರಿಷಭ್ ಪಂತ್ ಅವರಿಗೆ ವಾಚ್ಗಳ ಮೋಹವಿದ್ದು ದುಬಾರಿ ಬೆಲೆಯ ವಾಚುಗಳನ್ನು ಕೊಂಡುಕೊಳ್ಳಲು ಸದಾ ಮುಂದಿರುತ್ತಾರೆ, ಹಲವು ವಾಚ್ ಕಂಪೆನಿಗಳ ರಾಯಭಾರಿ ಯಾಗಿಯೂ ರಿಷಭ್ ಪಂತ್ ಗುರುತಿಸಿಕೊಂಡಿದ್ದಾರೆ.
ತಮ್ಮಲ್ಲಿರುವ ಹಳೆಯ ದುಬಾರಿ ವಾಚುಗಳನ್ನು ಮಾರಲು ಹೋದ ರಿಷಭ್ ಪಂತ್ಗೆ ಹರಿಯಾಣ ಕ್ರಿಕೆಟರ್ ಮೃಣಾಂಕ್ ಸಿಂಗ್ ಮೋಸ ಮಾಡಿ ಪರಾರಿಯಾಗಿದ್ದು ಈತನ ವಿರುದ್ಧ ರಿಷಭ್ ಪಂತ್ನ ಮ್ಯಾನೇಜರ್ ಪುನೀತ್ ಸೋಲಂಕಿ ಅವರು ದೂರು ನೀಡಿದ್ದರು. ಕಳೆದ 2021ರ ಜನವರಿ ಯಲ್ಲಿ ಮೃಣಾಂಕ್ ಸಿಂಗ್ ನಾನು ಒಬ್ಬ ಖ್ಯಾತ ಕ್ರಿಕೆಟಿಗನಾಗಿದ್ದು, ಐಷಾರಾಮಿ ವಾಚುಗಳು, ಬ್ಯಾಗ್ಗಳು, ಆಭರಣಗಳನ್ನು ಖರೀದಿಸುವ ಹಾಗೂ ಮಾರಾಟ ಮಾಡುವ ವೃತ್ತಿಯನ್ನೂ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ.
ಅಷ್ಟೇ ಅಲ್ಲದೆ ಮೃಣಾಂಕ್ ರಿಷಭ್ ಪಂತ್ ಬಳಿ ಇದ್ದ 36.25 ಲಕ್ಷ ಬೆಲೆ ಬಾಳುವ ಫ್ರಾಂಕ್ ಮರ್ಲರ್ ಹಾಗೂ 62.60 ಲಕ್ಷ ಮೌಲ್ಯದ ರಿಚರ್ಡ್ ಮಿಲ್ಲೆ ಎಂಬ ವಾಚುಗಳು ಹಾಗೂ ಕೆಲವು ಚಿನ್ನಾಭರಣಗಳನ್ನು ಒಳ್ಳೆಯ ಬೆಲೆಗೆ ಮಾರಿಕೊಡುವುದಾಗಿ ಹೇಳಿ ಚೆಕ್ ನೀಡಿ ಖರೀದಿಸಿ ದ್ದರು. ಆದರೆ ಮೃಣಾಂಕ್ ನೀಡಿದ ಚೆಕ್ ಬೌನ್ಸ್ ಆದಾಗ ರಿಷಭ್ ಪಂತ್ ಹಾಗೂ ಮ್ಯಾನೇಜರ್ ಪುನೀತ್ ಸೋಲಂಕಿ ಅವರು ತಾವು ಮೋಸ ಹೋಗಿರು ವುದಾಗಿ ತಿಳಿದು ಜುಹು ಪೊಲೀಸರಿಗೆ ದೂರು ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ದಂತೆ ಕಳೆದ ವಾರ ನ್ಯಾಯಾಲಯ ಮೃಣಾಂಕ್ ಸಿಂಗ್ ಹಾಜರಾಗಿದ್ದು ಆತನನ್ನು ಬಂಧಿಸಿದ ಪೊಲೀಸರು 6 ಲಕ್ಷ ಹಣ ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ಮೃಣಾಂಕ್, ಪಂತ್ಗಲ್ಲದೆ ಹಲವರು ಕ್ರಿಕೆಟಿಗರಿಗೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.