ಬಾಂಗ್ಲಾ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್

Social Share

ಮಿರ್‍ಪುರ್, ಡಿ.4- ಭಾರತ ತಂಡದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ವೈದ್ಯಕೀಯ ಕಾರಣದಿಂದಾಗಿ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ಹಿಂದೆ ಸರಿದಿದ್ದಾರೆ.

ಬಿಸಿಸಿಐ ತಮ್ಮ ಅಧಿಕೃತ ಟ್ವಿಟ್‍ನಲ್ಲಿ ಈ ವಿಷಯ ತಿಳಿಸಿದ್ದು, ` ರಿಷಭ್ ಪಂತ್ ಅವರು ಆರೋಗ್ಯ ಸಮಸ್ಯೆಯಿಂದಾಗಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯಿಂದ ಅವರನ್ನು ಕೈಬಿಡಲಾಗಿದೆ. ಮೊದಲ ಪಂದ್ಯಕ್ಕೆ ಪಂತ್ ಸ್ಥಾನದಲ್ಲಿ ಯಾವೊಬ್ಬ ಬದಲಿ ಆಟಗಾರನಿಗೂ ಸ್ಥಾನ ಕಲ್ಪಿಸಿಲ್ಲ, ರಿಷಭ್ ಪಂತ್ ಅವರು ಬಾಂಗ್ಲಾದೇಶ ವಿರುದ್ಧ ನಡೆಯಲಿರುವ 2 ಟೆಸ್ಟ್ ಪಂದ್ಯಗಳಿಗೆ ಲಭ್ಯರಾಗಲಿದ್ದಾರೆ’ ಎಂದು ತಿಳಿಸಿದೆ.

ರಿಷಭ್ ಪಂತ್ ಸ್ಥಾನದಲ್ಲಿ ಬದಲಿ ಆಟಗಾರನನ್ನು ಆಯ್ಕೆ ಮಾಡಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದ್ದು, ಮೊದಲ ಏಕದಿನ ಪಂದ್ಯಕ್ಕೆ ಅಕ್ಷರ್‍ಪಟೇಲ್ ಅವರು ಕೂಡ ಲಭ್ಯರಾಗಿಲ್ಲ ಎಂದು ತಿಳಿಸಿದ್ದಾರೆ.

ಹೊಸ ಮತದಾರರ ನೋಂದಣಿಗೆ ಡಿ.8 ರವರೆಗೆ ಅವಕಾಶ

ಕೆ.ಎಲ್.ರಾಹುಲ್‍ಗೆ ವಿಕೆಟ್ ಕೀಪರ್ ಹೊಣೆ:
ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ತಂಡದ ಉಪನಾಯಕನಾಗಿದ್ದ ರಿಷಭ್ ಪಂತ್ ಅವರು ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿರುವುದರಿಂದ ವಿಕೆಟ್ ಕೀಪರ್ ಹೊಣೆಯನ್ನು ಕನ್ನಡಿಗ ಹಾಗೂ ಉಪನಾಯಕ ಕೆ.ಎಲ್.ರಾಹುಲ್ ಅವರಿಗೆ ವಹಿಸಲಾಗಿದೆ.

ಆಲ್‍ರೌಂಡರ್‍ಗಳಿಗೆ ಮಣೆ:
ಟಿ 20 ವಿಶ್ವಕಪ್ ಹಾಗೂ ನ್ಯೂಜಿಲೆಂಡ್ ಸರಣಿಯಲ್ಲಿ ಹೆಚ್ಚುವರಿ ಬೌಲರ್‍ಗಳ ಕೊರತೆ ಅನುಭವಿಸಿದ್ದ ಟೀಂ ಇಂಡಿಯಾ ತಂಡವು, ಬಾಂಗ್ಲಾ ದೇಶದ ಸರಣಿಯಲ್ಲಿ ಆಲ್‍ರೌಂಡರ್‍ಗಳಿಗೆ ಮಣೆ ಹಾಕಿದೆ.

ನ್ಯೂಜಿಲೆಂಡ್ ಸರಣಿಯಲ್ಲಿ ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್‍ನಿಂದ ಗಮನ ಸೆಳೆದಿದ್ದ ವಾಷಿಂಗ್ಟನ್ ಸುಂದರ್‍ರೊಂದಿಗೆ ಶಹಬಾಜ್ ಅಹಮದ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್‍ಗೂ ಸ್ಥಾನ ಕಲ್ಪಿಸಲಾಗಿದೆ.

ಜೆಡಿಎಸ್ ಅಧಿಕಾರಕ್ಕೆ ಬಂದರೆ ಬಯಲುಸೀಮೆಗೆ 1000 ಕೋಟಿ ಅನುದಾನ : ಹೆಚ್‌ಡಿಕೆ

ವೇಗದ ವಿಭಾಗದ ಸಾರಥ್ಯವನ್ನು ಮೊಹಮ್ಮದ್ ಶಿರಾಜ್ ವಹಿಸಿಕೊಂಡಿದ್ದರೆ, ಐಪಿಎಲ್ ಹಾಗೂ ಇತ್ತೀಚೆಗೆ ಮುಕ್ತಾಯಗೊಂಡ ವಿಜಯ್ ಹಜಾರೆ ದೇಶಿ ಟೂರ್ನಿಯಲ್ಲಿ ಗಮನ ಸೆಳೆದಿದ್ದ ವೇಗಿ ಕುಲ್‍ದೀಪ್ ಸೇನ್ ಅವರು ಅಂತರರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ.

Rishabh Pant, released, ODI, squad, Bangladesh,

Articles You Might Like

Share This Article