ಮ್ಯಾಕ್ಸ್ ಆಸ್ಪತ್ರೆಯ ಖಾಸಗಿ ವಾರ್ಡ್‍ಗೆ ಕ್ರಿಕೆಟಿಗ ರಿಷಭ್ ಪಂತ್ ಶಿಫ್ಟ್

Social Share

ನವದೆಹಲಿ, ಜ. 2- ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಭಾರತದ ವಿಕೆಟ್ ಕೀಪರ್ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದ್ದು, ಅವರನ್ನು ಮ್ಯಾಕ್ಸ್ ಆಸ್ಪತ್ರೆಯ ಸುಸಜ್ಜಿತ ಖಾಸಗಿ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ.

ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ಅವರು ರಿಷಭ್ ಪಂತ್‍ರ ಆರೋಗ್ಯದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, `ಡಿಸೆಂಬರ್ 30ರಂದು ಕಾರಿನ ಅಪಘಾತದಲ್ಲಿ ತೀವ್ರ ತರವಾದ ಗಾಯಕ್ಕೆ ಒಳಗಾಗಿದ್ದ ಖ್ಯಾತ ಕ್ರಿಕೆಟಿಗ ರಿಷಭ್ ಪಂತ್ ಅವರು ಈಗ ಚೇತರಿಕೆಯ ಹಾದಿಯಲ್ಲಿದ್ದು ಅವರನ್ನು ನಿನ್ನೆ ಸಂಜೆ ಮ್ಯಾಕ್ಸ್ ಆಸ್ಪತ್ರೆಯ ಖಾಸಗಿ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ ‘ ಎಂದು ಮಾಹಿತಿ ನೀಡಿದರು.

ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್‍ಗೆ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಅವರಿಗೆ ನಂಜು (ಇನ್ಸ್‍ಪೆಕ್ಷನ್) ಆಗದಿರಲಿ ಎಂಬ ದೃಷ್ಟಿಯಿಂದ ಅವರನ್ನು ಖಾಸಗಿ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ.

ಕ್ರಿಮಿನಲ್ಸ್ ಕೇರ್ ಟೇಕರ್ ಮುಖ್ಯಮಂತ್ರಿ ಬೊಮ್ಮಾಯಿ : ಕಾಂಗ್ರೆಸ್ ಆಕ್ರೋಶ

ರಿಷಭ್ ಪಂತ್ ಅವರ ಆರೋಗ್ಯದ ಕುರಿತು ಬಿಸಿಸಿಐ ಕೂಡ ಮಾಹಿತಿ ಕಲೆ ಹಾಕುತ್ತಿದ್ದು, ಪಂತ್‍ರ ಚಿಕಿತ್ಸೆಯ ಹೊಣೆ ಹೊತ್ತಿದೆ. ರಿಷಭ್ ಪಂತ್ ಅವರ ಬೆನ್ನಿನ ಚರ್ಮವು ಸಾಕಷ್ಟು ಸುಟ್ಟು ಹೋಗಿದ್ದು, ಅವರಿಗೆ ಪ್ಲಾಸ್ಟಿಕ್ ಸರ್ಜರಿಯ ಅವಶ್ಯಕತೆ ಇದೆ.

ರಿಷಭ್ ಪಂತ್ ಅವರಿಗೆ ಡೆಹ್ರಾ ಡೂನ್ ಮ್ಯಾಕ್ಸ್ ಆಸ್ಪತ್ರೆಯಲ್ಲೇ ಪ್ಲಾಸ್ಟಿಕ್ ಸರ್ಜರಿ ಮಾಡಬೇಕೋ, ನವದೆಹಲಿಯ ಆಸ್ಪತ್ರೆಗೆ ಅವರನ್ನು ಏರ್‍ಲಿಫ್ಟ್ ಮಾಡಬೇಕೋ ಎಂಬುದರ ಬಗ್ಗೆ ಬಿಸಿಸಿಐ ಅಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಶ್ಯಾಮ್ ಶರ್ಮಾ ತಿಳಿಸಿದ್ದಾರೆ.

ಲಿಂಬಾವಳಿ ವಿರುದ್ಧ ಕಾನೂನು ಪ್ರಕಾರ ತನಿಖೆ : ಸಿಎಂ ಬೊಮ್ಮಾಯಿ

ಡಿಸೆಂಬರ್ 30 ರಂದು ರಿಷಭ್ ಪಂತ್ ಪ್ರಯಾಣಿಸುತ್ತಿದ್ದ ಐಷಾರಾಮಿ ಕಾರು ಡೆಹ್ರಾಡೂನ್‍ನ ರೊರ್ಕಿ ಬಳಿ ಡಿವೈಡರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಗಾಳಿಯಲ್ಲಿ ಸುರುಳಿ ಸುತ್ತಿ ನೆಲಕ್ಕೆ ಅಪ್ಪಳಿಸಿದೆ, ಆ ಸಮಯದಲ್ಲಿ ಕಾರು ಸಂಪೂರ್ಣ ಬೆಂಕಿ ಹೊತ್ತಿಕೊಂಡ ಪರಿಣಾಮ, ಪಂತ್ ಅವರ ಹಣೆಯ ಮೇಲೆ ಎರಡು ಗಾಯಗಳು, ಅವರ ಬಲ ಮೊಣಕಾಲಿನ ಅಸ್ಥಿರಜ್ಜು ಹರಿದುಹೋಗಿದೆ ಮತ್ತು ಅವರ ಬಲ ಮಣಿಕಟ್ಟು, ಪಾದದ ಮತ್ತು ಕಾಲ್ಬೆರಳುಗಳಿಗೆ ಗಾಯವಾಗಿದೆ ಮತ್ತು ಅವರ ಬೆನ್ನಿನ ಮೇಲೆ ಸವೆತದ ಗಾಯಗಳಾಗಿದ್ದವು.

Rishabh Pant, shifted, private ward, hospital,

Articles You Might Like

Share This Article