ಯುವ ಕ್ರಿಕೆಟಿಗರು ಚಾಲಕರನ್ನು ನೇಮಿಸಿಕೊಳ್ಳಿ : ಕಪಿಲ್‍ದೇವ್

Social Share

ನವದೆಹಲಿ, ಜ.2- ಭಾರತ ತಂಡದ ಯುವ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ರಿಷಭ್ ಪಂತ್ ಅವರು ಚೇತರಿಸಿಕೊಳ್ಳುತ್ತಿರುವುದು ತುಂಬಾ ಸಂತಸಕರ ವಿಷಯವಾಗಿದೆ. ಆದರೆ ಯುವ ಕ್ರಿಕೆಟಿಗರು ಇನ್ನಾದರೂ ಇಂತಹ ಅವಘಡಗಳಿಗೆ ಒಳಗಾಗಬೇಡಿ ಎಂದು ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರು ಸಲಹೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕಪಿಲ್‍ದೇವ್, ಯುವ ಕ್ರಿಕೆಟಿಗರು ತುಂಬಾ ವೇಗದ ಕಾರುಗಳನ್ನು ಹೊಂದಿದ್ದೀರಿ, ಹಾಗೂ ಮಿಂಚಿನ ವೇಗದಲ್ಲಿ ಕಾರುಗಳನ್ನು ಚಲಿಸುತ್ತೀರಿ, ಆದರೆ ನಿಮ್ಮ ಕ್ರಿಕೆಟ್ ಜೀವನದ ದೃಷ್ಟಿಯಿಂದಾಗಿ ನೀವು ಇನ್ನು ಮುಂದೆ ನೀವೇ ಕಾರುಗಳನ್ನು ಚಲಾಯಿಸುವ ಬದಲು, ಚಾಲಕರನ್ನು ನೇಮಿಸಿಕೊಳ್ಳುವುದು ಸೂಕ್ತ ಎಂದು ದೇವ್ ಕಿವಿಮಾತು ಹೇಳಿದರು.

ನಿಮ್ಮ ವಯಸ್ಸಿನಲ್ಲಿ ಕಾರುಗಳನ್ನು ವೇಗವಾಗಿ ಚಲಾಯಿಸುವುದು ಸಹಜ ಪ್ರಕ್ರಿಯೆ, ಆದರೆ ನಿಮ್ಮ ಜೀವದ ಸುರಕ್ಷತೆಯನ್ನು ನೀವೇ ಕೈಗೊಳ್ಳಬೇಕಾಗಿರುವುದರಿಂದ ಇನ್ನೂ ಮುಂದಾದರೂ ವಾಹನಗಳನ್ನು ವೇಗವಾಗಿ ಚಲಾಯಿಸದೆ ಸುರಕ್ಷತೆಗೆ ಗಮನ ಹರಿಸಿ ಎಂದು ವಿಶ್ವಕಪ್ ನಾಯಕ ಕಪಿಲ್ ದೇವ್ ಹೇಳಿದ್ದಾರೆ.

ಕ್ರಿಮಿನಲ್ಸ್ ಕೇರ್ ಟೇಕರ್ ಮುಖ್ಯಮಂತ್ರಿ ಬೊಮ್ಮಾಯಿ : ಕಾಂಗ್ರೆಸ್ ಆಕ್ರೋಶ

ನಾನು ಕೂಡ ನಿಮ್ಮ ವಯಸ್ಸಿನಲ್ಲಿ ಬೈಕ್ ಅನ್ನು ಅತಿ ವೇಗವಾಗಿ ಚಲಾಯಿಸುತ್ತಿದ್ದೆ, ಆದರೆ ಆ ವೇಗವೇ ನನಗೆ ಅಪಾಯ ತಂದೊಡ್ಡಿತ್ತು. ಅಪಘಾತವಾದ ನಂತರ ಮತ್ತೆ ನಾನು ಬೈಕ್ ಬಳಸದಂತೆ ನನ್ನ ಸಹೋದರ ಎಚ್ಚರಿಕೆ ವಹಿಸಿದ್ದರು ಎಂದು ಕಪಿಲ್‍ದೇವ್ ಸ್ಮರಿಸಿಕೊಂಡರು.

ರಿಷಭ್ ಪಂತ್ ಅವರ ಆರೋಗ್ಯದ ಕುರಿತು ಪ್ರಸ್ತಾಪಿಸಿದ ಕಪಿಲ್ ದೇವ್, ಪಂತ್‍ರವರ ಜೀವವನ್ನು ಕಾಪಾಡಿದ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ರಿಷಭ್ ಪಂತ್ ಅವರು ಶೀಘ್ರ ಗುಣಮುಖರಾಗಿ ಕ್ರಿಕೆಟ್ ಮೈದಾನಕ್ಕೆ ಮರಳುವಂತಾಗಲಿ ಎಂದು ಕಪಿಲ್ ದೇವ್ ಅವರು ಹಾರೈಸಿದ್ದಾರೆ.

ತುನೀಶಾ ಶರ್ಮಾ ಆತ್ಮಹತ್ಯೆ ಹಿಂದೆ ಲವ್ ಜಿಹಾದ್ಇಲ್ಲ : ಶೇಜಾನ್ ಖಾನ್ ಕುಟುಂಬ

ಫೆಬ್ರರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 4 ಪಂದ್ಯಗಳ ಟೆಸ್ಟ್ ಹಾಗೂ ಐಪಿಎಲ್ ಟೂರ್ನಿಯಲ್ಲಿ ಪಂತ್ ಪಾಲ್ಗೊಳ್ಳುವಿಕೆ ಬಗ್ಗೆ ಇನ್ನು ಸ್ಪಷ್ಟವಿಲ್ಲ.

Rishabh Pant, Kapil Dev, car accident,

Articles You Might Like

Share This Article