ಲಂಡನ್.ಜು.14- ತೀವ್ರ ಕುತೂಹಲ ಕೆರಳಿಸಿರುವ ಬ್ರಿಟನ್ ನೂತನ ಪ್ರಧಾನ ಮಂತ್ರಿಸ್ಪರ್ಧೆಯಲ್ಲಿ ರಿಷಿ ಸುನಕ್ ಅವರು ಕನ್ಸರ್ವೇಟಿವ್ ಪಕ್ಷದ ಸಂಸದರ ಮೊದಲ ಸುತ್ತಿನ ಮತದಾನದಲ್ಲಿ 88 ಮತಗಳನ್ನು ಗಳಿಸುವ ಮೂಲಕ ತಮ್ಮ ಮುನ್ನಡೆಯನ್ನು ವಿಸ್ತರಿಸಿದ್ದಾರೆ.
ಪ್ರಸ್ತುತ ಇದು ಮತಪಟ್ಟಿಯಲ್ಲಿ ಎಂಟು ರಿಂದ ಆರು ಅಭ್ಯರ್ಥಿಗಳಿಗೆ ನಿರ್ಗಮಿಸುವ ಹಂತ ಸಮೀಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಭಾರತೀಯ ಮೂಲದ ಮತ್ತೊಬ್ಬ ಅಭ್ಯರ್ಥಿ, ಅಟಾರ್ನಿ ಜನರಲ್ ಸುಯೆಲ್ಲೇ ಬ್ರೆವರ್ಮನ್ ಅವರು 32 ಮತಗಳೊಂದಿಗೆ ಕೊನೆಯ ಸ್ಥಾನದಲ್ಲಿದ್ದಾರೆ, ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ (67 ಮತಗಳು), ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ (50 ಮತಗಳು), ಮಾಜಿ ಸಚಿವ ಕೆಮಿ ಬಡೆನೋಚ್ (40 ಮತಗಳು) ಮತ್ತು ಟಾಮ್ ತುಗೆಂಧತ್ (37 ಮತಗಳು).
ಹೊಸದಾಗಿ ನೇಮಕಗೊಂಡ ಚಾನ್ಸೆಲರ್ ನಮ್ ಜಹಾವಿ ಮತ್ತು ಮಾಜಿ ಕ್ಯಾಬಿನೆಟ್ ಸಚಿವ ಜೆರೆಮಿ ಹಂಟ್ ಅವರು ಕ್ರಮವಾಗಿ 25 ಮತ್ತು 18ಮತಪಡೆದು ಕನಿಷ್ಠ 30 ಸಂಸದರ ಅಗತ್ಯ ಮತಗಳನ್ನು ಸೆಳೆಯಲು ಸಾಧ್ಯವಾಗದ ಕಾರಣ ರೇಸ್‍ನಿಂದ ಹೊರಗುಳಿದಿದ್ದಾರೆ.
42 ವರ್ಷದ ಸುನಕ್ ಅವರು ಕಳೆದ ವಾರ ಪಕ್ಷದ ನಾಯಕತ್ವಕ್ಕೆ ಸ್ರ್ಪಧಿಸುವ ಇಂಗಿತವನ್ನು ಘೋಷಿಸಿದಾಗಿನಿಂದ ಅವರ ಸಂಸದೀಯ ಸಹೋದ್ಯೋಗಿಗಳಲ್ಲಿ ಸ್ಥಿರವಾದ ಮುನ್ನಡೆ ಕಾಯ್ದುಕೊಂಡಿದ್ದರೆ.