ಲಂಡನ್ . ಜುಲೈ 11. ಬ್ರಿಟನ್ ನ ನೂತನ ಪ್ರಧಾನಿ ಸ್ಥಾನಕ್ಕೆ ಭಾರತ ಸಂಜಾತ ಹಾಗೂ ಇನ್ಫೋಸಿಸ್ ಕಂಪನಿಯ ಸಂಸ್ಥಾಪಕ ನಾರಾಯಣಮೂರ್ತಿ ಸುಧಾಮೂರ್ತಿಯವರ ಅಳಿಯ ರಿಷಿ ಸುನಕ್ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಸುಮಾರು 250 ವರ್ಷಗಳ ಕಾಲ ಭಾರತವನ್ನು ಆಳಿದ ಬ್ರಿಟಿಷರ ಸಾಮ್ರಾಜ್ಯದಲ್ಲಿ ಈಗ ಭಾರತ ಸಂಜಾತರೊಬ್ಬರು ಪ್ರಧಾನಿಯಾಗುವುದು ಹೊಸ ಇತಿಹಾಸ ಎಂದು ಹೇಳಲಾಗುತ್ತಿದೆ. ಬೋರಿಸ್ ಜಾನ್ಸನ್ ನಿರ್ಗಮನದ ನಂತರ ಪ್ರಧಾನಿ ಸ್ಥಾನದ ಮುಂಚೂಣಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ರಿಷಿ ಅವರಿಗೆ ಈಗ ಹಾದಿ ಸುಗಮವಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ಕೆಲವೇ ಗಂಟೆಗಳಲ್ಲಿ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದ್ದು ಅರಮನೆಯಿಂದ ಅಧಿಕೃತ ಹಸಿರು ನಿಶಾನೆ ದೊರಕುವುದು ಒಂದೇ ಬಾಕಿ ಉಳಿದಿದೆ. ರಿಷಿ ಪ್ರಧಾನಿಯಾಗಿ ಆಯ್ಕೆಯಾದರೆ ಭಾರತಕ್ಕೆ ಅದೊಂದು ದೊಡ್ಡ ಸಂಭ್ರಮ ವಾಗಲಿದೆ ಲಂಡನ್ನಲ್ಲಿ ಪ್ರಮುಖ ರಾಜಕೀಯ ವಿದ್ಯಮಾನಗಳು ನಡೆಯುತ್ತಿರುವ ನಡುವೆಯೇ ಹೊಸ ಹೊಸ ಮಾಹಿತಿಗಳು ಹೊರಬರುತ್ತಿದ್ದ ಋಷಿ ಪರವಾದ ಒಲವು ಹೆಚ್ಚಿನ ಸಂಖ್ಯೆಯಲ್ಲಿ ಕೇಳಿಬರುತ್ತಿದೆ.
ಭೌತಿಕ ಸಂಸದರು ರಿಷಿ ಪರ ನಿಂತಿದ್ದು ಇದು ಭಾರತದ ವ್ಯಾಪಾರ-ವಹಿವಾಟು ನಂದಿಗೆ ಹೊಸ ಅಧ್ಯಾಯ ಶುರುವಾಗಲಿದೆ ಮತ್ತು ಪ್ರಸ್ತುತ ಆರ್ಥಿಕ ಹಿಂಜರಿತ ಬೆಲೆ ಏರಿಕೆಯನ್ನು ತಡೆಯಬಹುದಾಗಿದೆ ಎಂದು ಕೆಲವು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ