BIG NEWS : ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಸಂಜಾತ ರಿಶಿ ಸುನಕ್ ಆಯ್ಕೆ

Social Share

ಲಂಡನ್‌: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ಮೂಲದ ಸಂಜಾತ ರಿಶಿ ಸುನಕ್ ಅವರನ್ನು ಬ್ರಿಟನ್ ಪ್ರಧಾನಿಯಾಗಿ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಸೋಮವಾರ ಆಯ್ಕೆ ಮಾಡಲಾಗಿದೆ.
ಸುನಕ್‌ಈ ಹುದ್ದೆಗೇರಿದ ಭಾರತ ಮೂಲದ ಮೊದಲ ವ್ಯಕ್ತಿಯಾಗಿದ್ದಾರೆ.ಅಲ್ಲದೆ, ಮೊದಲ ಬಿಳಿಯರಲ್ಲದ, ಭಾರತೀಯ ಮೂಲದವರೊಬ್ಬರು ಪ್ರಧಾನಿಯಾದರೆಂಬ ಇತಿಹಾಸ ಕೂಡ ಸೃಷ್ಟಿಯಾಗಿದೆ.

ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರು 100 ಸಂಸದರ ಬೆಂಬಲವನ್ನು ಗಳಿಸಲು ವಿಫಲರಾಗಿದ ಕಾರಣ, 190 ಕ್ಕೂ ಹೆಚ್ಚು ಸಂಸದರಿಂದ ಚುನಾಯಿತರಾಗಿದ್ದಾರೆ.ಇದೇ ಶುಕ್ರವಾರ (ಅ.28) ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎನ್ನಲಾಗಿದೆ.

ಸುನಕ್ ಬ್ರಿಟನ್ ದೇಶದ 57 ನೇ ಪ್ರಧಾನ ಮಂತ್ರಿ ಮತ್ತು ದೇಶವನ್ನು ಮುನ್ನಡೆಸಲಿದ್ದು, ಅವರು ಮೊದಲ ಹಿಂದೂ ಪ್ರಧಾನ ಮಂತ್ರಿಯೂ ಹೌದು.ಕನ್ಸರ್ವೇಟಿವ್‌ ಪಕ್ಷದ ಅಧ್ಯಕ್ಷ ಸ್ಥಾನ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಬೋರಿಸ್‌ ಜಾನ್ಸನ್‌ ಭಾನುವಾರ ಘೋಷಿಸಿದ್ದರಿಂದ ರಿಷಿ ಸುನಾಕ್‌ ಬ್ರಿಟನ್‌ನ ಮುಂದಿನ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿತ್ತು.

ಹೀಗಾಗಿ ಪ್ರತಿಸ್ಪರ್ಧಿ ಮೊರ್ಡಂಟ್‌ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂದು ಪಕ್ಷದ ಸದಸ್ಯರಿಂದ ಒತ್ತಡ ಕೇಳಿಬಂದಿತ್ತು. ಪೆನ್ನಿ ಮೊರ್ಡೌಂಟ್ ಟ್ವೀಟ್ ನಲ್ಲಿ ತಾನು ರೇಸ್ ನಿಂದ ಹೊರಗುಳಿಯುತ್ತಿದ್ದೇನೆ ಮತ್ತು ಯುಕೆ ಪ್ರಧಾನಿಯಾಗಿ ಸುನಕ್ ಅವರನ್ನು ಬೆಂಬಲಿಸುತ್ತಿದ್ದೇನೆ ಎಂದು ಘೋಷಿಸಿದರು.

ರಿಷಿ ಸುನಕ್ ಹಣಕಾಸು ಸಚಿವ ಹುದ್ದೆಯಲ್ಲಿದ್ದು, 2015ರಲ್ಲಿ ರಿಷಿ ಬ್ರಿಟನ್ ಸಂಸತ್ತನ್ನು ಪ್ರವೇಶಿಸಿದ್ದರು. 2020ರಲ್ಲಿ ಬ್ರಿಟನ್ ಸಚಿವ ಸಂಪುಟದ ಪ್ರಮುಖ ಹುದ್ದೆಗಳಲ್ಲಿ ಒಂದಾದ ಹಣಕಾಸು ಸಚಿವರಾಗಿದ್ದರು.
ವಿಶೇಷವೆಂದರೆ, ಕೋವಿಡ್ 19 ಸಾಂಕ್ರಾಮಿಕದಿಂದ ಬ್ರಿಟನ್ ತತ್ತರಿಸುತ್ತಿದ್ದ ವೇಳೆ ಆರ್ಥಿಕತೆಯನ್ನ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದು, ಕೊರೊನಾ ವೇಳೆ ನಷ್ಟದಿಂದ ತತ್ತರಿಸಿದ್ದ ಉದ್ಯಮಗಳಿಗೆ ಅನುಕೂಲಕರವಾದ ಯೋಜನೆಗಳನ್ನ ಜಾರಿಗೆ ತಂದಿದ್ದರು.

ಇನ್ನು ಪ್ರತಿಷ್ಠಿತ ವಿಂಚೆಸ್ಟರ್‌ ಕಾಲೇಜಿನಲ್ಲಿ ಅಧ್ಯಯನ ನಡೆಸಿರುವ ಸುನಕ್‌, ಆಕ್ಸ್‌ಫರ್ಡ್‌ ವಿವಿಯಲ್ಲಿ ರಾಜಕೀಯ, ಫಿಲಾಸಫಿ ಮತ್ತು ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ. ಅಮೆರಿಕಾ ಸ್ಟಾನ್‌ಫರ್ಡ್‌ ವಿವಿಯಿಂದ ಎಂಬಿಎ ಪದವಿಯನ್ನೂ ಪಡೆದುಕೊಂಡಿದ್ದಾರೆ.

ಅತ್ತೆ ಮಗಳ ಮೇಲೆ ಅತ್ಯಾಚಾರ ಆರೋ : ಇನ್‍ಸ್ಪೆಕ್ಟರ್ ಅಮಾನತು

ಸುನಕ್‌ ತಂದೆ ವೈದ್ಯರಾಗಿದ್ದು, ತಾಯಿ ರಾಸಾಯನಿಕ ವಸ್ತುಗಳ ಅಂಗಡಿ ನಡೆಸುತ್ತಿದ್ದರು. ಇನ್ನು ರಿಷಿ ಇನ್ಫೋಸಿಸ್ ನಾರಾಣಮೂರ್ತಿ ಅಳಿಯ ಕೂಡ ಹೌದು.ರಿಷಿ ಸುನಾಕ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ಮಗಳು ಅಕ್ಷತಾರನ್ನ ವಿವಾಹವಾಗಿ ಬ್ರಿಟನ್‌ನಲ್ಲಿ ನೆಲೆಸಿದ್ದಾರೆ.

ಇವರಿಗೆ ಕೃಷ್ಣ ಮತ್ತು ಅನುಷ್ಕಾ ಎಂಬ ಇಬ್ಬರು ಮಕ್ಕಳಿದ್ದಾರೆ.ಸುನಕ್ ಅವರ ತಂದೆ ಯಶವೀರ್ ಸುನಕ್ ಅವರು ರಾಷ್ಟ್ರೀಯ ಆರೋಗ್ಯ ಸೇವೆಯ ಸಾಮಾನ್ಯ ವೈದ್ಯರು ಮತ್ತು ತಾಯಿ ಉಷಾ ಸುನಕ್ ಅವರು ಕೆಮಿಸ್ಟ್ ಅಂಗಡಿಯನ್ನು ನಡೆಸುತ್ತಿದ್ದರು.

ದೀಪಾವಳಿ ನಂತರ ಸಂಪುಟ ವಿಸ್ತರಣೆಗೆ ಅನುಮತಿ..?

ಸುನಕ್ ಪೋಷಕರು ಪೂರ್ವ ಆಫ್ರಿಕಾದಿಂದ ಬ್ರಿಟನ್ ಗೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ. ಸುನಕ್ ಪೂರ್ವಿಕರು ಬ್ರಿಟಿಷ್ ಭಾರತದಿಂದ ಬಂದವರು, ಆದರೆ, ಅವರ ಜನ್ಮಸ್ಥಳ ಗುಜ್ರಾನ್ವಾಲಾ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದೆ ಎಂದು ಕೆಲವರು ಹೇಳುತ್ತಿದ್ದಾರೆ.

ತಿಂಗಳುಗಳ ಹಿಂದೆಯಷ್ಟೇ ನಡೆದ ಬ್ರಿಟನ್ ಪ್ರಧಾನಿ ಚುನಾವಣೆಯಲ್ಲಿ ರಿಷಿ ಸುನಕ್, ಲಿಜ್ ಟ್ರಸ್ ವಿರುದ್ಧ ಪರಾಭವಗೊಂಡಿದ್ದರು. ಲಿಜ್ ಟ್ರಸ್ ಪ್ರಧಾನಿ ಹುದ್ದೆಗೇರಿದರೂ ಆರ್ಥಿಕ ಬಿಕ್ಕಟ್ಟು ಮತ್ತು ಸರ್ಕಾರದ ನೀತಿಯಿಂದಾಗಿ ಹಿನ್ನಡೆ ಅನುಭವಿಸಿ ಅಧಿಕಾರಕ್ಕೇರಿದ 45ದಿನಗಳಲ್ಲಿ ರಾಜೀನಾಮೆ ಕೊಟ್ಟು ಹೊರನಡೆದಿದ್ದರು.

ಲಿಜ್ ಟ್ರಸ್ ಹೊರ ನಡೆದ ನಂತರ ನೂತನ ಪ್ರಧಾನಿ ಆಯ್ಕೆಗೆ ಸಿದ್ಧತೆ ನಡೆದಿತ್ತು. ರಿಷಿ ಮತ್ತೊಮ್ಮೆ ಚುನಾವಣಾ ಕಣಕ್ಕಿಳಿಯುವುಗಾಗಿ ಘೋಷಿಸಿದ್ದರು. ಇತ್ತ ಪೆನ್ನಿ ಮೊರ್ಡಾಂಟ್ ಒಬ್ಬರೇ ಸುನಕ್ ಅವರ ಪ್ರತಿಸ್ಪರ್ಧಿಯಾಗಿದ್ದರು.

ಬ್ರಿಟನ್‌ ಆರ್ಥಿಕ ಪರಿಸ್ಥಿತಿ ಕ್ಷೀಣಿಸುತ್ತಿದೆ. ಹೀಗಾಗಿ ನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ಲಿಜ್ ಟ್ರಸ್ ಅಧಿಕಾರಕ್ಕೆ ಬಂದಿದ್ದರು. ಹೀಗಾಗಿ ಪ್ರಧಾನಿ ಪಟ್ಟದ ಜವಾಬ್ದಾರಿ ಇವರಿಗೆ ಸುಲಭದ ಹಾದಿಯಾಗಿರಲಿಲ್ಲ. ಇನ್ನು ಆರ್ಥಿಕ ಸುಧಾರಣೆ ಸಾಧ್ಯವಾಗದ ಕಾರಣ ಲಿಜ್ ಟ್ರಸ್ ರಾಜೀನಾಮೆ ನೀಡಬೇಕಾಯಿತು. ಇದೀಗ ಹೊಸದಾಗಿ ಆಯ್ಕೆಯಾಗಿರುವ ರಿಷಿ ಸುನಕ್ ಮುಂದೆ ಕೂಡ ಬಹುದೊಡ್ಡ ಸವಾಲುಗಳು ಇವೆ.

Articles You Might Like

Share This Article