ಕಿಂಗ್ ಚಾರ್ಲ್ಸ್ ಭೇಟಿ ಮಾಡಲಿದ್ದಾರೆ ರಿಷಿ ಸುನಕ್

Social Share

ಲಂಡನ್,ಅ.25- ಇಂದು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ ಅವರನ್ನು ಕನ್ಸರ್ವೇಟಿವ್ ಪಕ್ಷದ ನಾಯಕ ರಿಷಿ ಸುನಕ್ ಭೇಟಿಯಾಗಲಿದ್ದಾರೆ.

ಇಂದು ಔಪಚಾರಿಕವಾಗಿ ರಿಷಿ ಅವರನ್ನು ಕಿಂಗ್ ಚಾಲ್ಸರ್ï ಅವರು ಹೊಸ ಪ್ರಧಾನಿಯಾಗಿ ಘೋಷಿಸಲಿದ್ದಾರೆ.ನಂತರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು ನಿರ್ಗಮಿತ ಪ್ರಧಾನಿ ಲಿಜ್ ಟ್ರಸ್ ಅವರು ಇಂದು ಬೆಳಿಗ್ಗೆ 10 ಡೌನಿಂಗ್ ಸ್ಟ್ರೀಟ್‍ನಲ್ಲಿ ತಮ್ಮ ಅಂತಿಮ ಕ್ಯಾಬಿನೆಟ್ ಸಭೆಯನ್ನು ನಡೆಸಲಿದ್ದಾರೆ. ನಂತರ ಬಕಿಂಗ್ಹ್ಯಾಮ್ ಅರಮನೆಗೆ ಹೋಗಿ ತನ್ನ ರಾಜೀನಾಮೆಯನ್ನು ಕಿಂಗ್ ಚಾರ್ಲ್ಸ್ ಅವರಿಗೆ ಸಲ್ಲಿಸುತ್ತಾರೆ.

ಬ್ರಿಟನ್ ಒಂದು ದೊಡ್ಡ ದೇಶ, ಆದರೆ ನಾವು ಗಂಭೀರವಾದ ಆರ್ಥಿಕ ಸವಾಲನ್ನು ಎದುರಿಸುತ್ತಿದ್ದೇವೆ ಎಂಬುದರಲ್ಲಿ ಸಂದೇಹವಿಲ್ಲ. ನಮಗೆ ಈಗ ಸ್ಥಿರತೆ ಮತ್ತು ಏಕತೆಯ ಅಗತ್ಯವಿದೆ ಎಂದು ಸುನಕ್ ಹೇಳಿದ್ದಾರೆ.

ರಿಷಿ ಸುನಕ್‍ಗೆ ಪ್ರಧಾನಿ ಮೋದಿ ಅಭಿನಂದನೆ

ನಾನು ನಿಮಗಾಗಿ ಸೇವೆ ಸಲ್ಲಿಸುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ ಪ್ರಾಮಾಣಿಕತೆ ಮತ್ತು ನಮ್ರತೆಯಿಂದ ಮತ್ತು ಬ್ರಿಟಿಷ್ ಜನರಿಗಾಗಿ ಕೆಲಸ ಮಾಡಲು ಹಗಲು ರಾತ್ರಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ
ಇಂದೇ ಸುನಿಕ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದು ಅವರ ಪತ್ನಿ ಅಕ್ಷತಾ ಮೂರ್ತಿ ಮತ್ತು ಪುತ್ರಿಯರಾದ ಕೃಷ್ಣ ಮತ್ತು ಅನುಷ್ಕಾ ಭಾಗವಹಿಸುವ ನಿರೀಕ್ಷೆಯಿದೆ.

Articles You Might Like

Share This Article