ಬ್ರಿಟನ್ ಪ್ರಧಾನಿ ರೇಸ್‍ನಲ್ಲಿ ರಿಷಿ ಸುನಕ್ ಮುನ್ನಡೆ

Social Share

ಲಂಡನ್ ಜುಲೈ 19 – ಬ್ರಿಟನ್ ಪ್ರಧಾನಿ ರೇಸ್‍ನಲ್ಲಿ ರಿಷಿ ಸುನಕ್ ಮುನ್ನಡೆ ಮುಂದುವರೆದಿದ್ದು, ಮೂರನೇ ಸುತ್ತಿನಲ್ಲಿ 115 ಮತಗಳನ್ನು ಗಳಿಸುವ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ. ಕಳೆದ ವಾರದಿಂದ ಆರಂಭವಾಗಿರುವ ಮತದಾನ ಪ್ರಕ್ರಿಯೆಯಲ್ಲಿ 42 ವರ್ಷದ ಸುನಕ್ ಸತತವಾಗಿ ನಂ 1ಸ್ಥಾನದಲ್ಲಿದ್ದಾರೆ ಈಗ ಸ್ಪರ್ಧೆ ಕುತೂಹಲ ಘಟಕ್ಕೆ ಬರಲಿದ್ದು ಈಗ ಕೇವಲ ನಾಲ್ಕು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಇಬ್ಬರು ಅಂತಿಮ ಹೋತಕ್ಕೆ ಬರಲಿದ್ದಾರೆ.

ಮೂರನೇ ಸುತ್ತಿನ ಮತದಾನದಲ್ಲಿ ಸಚಿವ ಪೆನ್ನಿ ಮೊರ್ಡಾಂಟ್ 82 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 71 ಮತಗಳೊಂದಿಗೆ ಮತ್ತು ಮಾಜಿ ಸಚಿವ ಕೆಮಿ ಬಡೆನೋಚ್ 58 ಮತಗಳನ್ನು ಗಳಿಸಿದ್ದಾರೆ.

ಟೋರಿ ಬ್ಯಾಕ್ಬೆಂಚರ್ ಮತ್ತು ಹೌಸ್ ಆಫ್ ಕಾಮನ್ಸ ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ಟಾಮ್ ತುಗೆಂಧತ್ ಅವರು ಕನಿಷ್ಠ ಮತಗಳಿಸಿ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

ನಾಲ್ಕನೇ ಸುತ್ತಿನ ಮತದಾನವು ಇಂದು ನಡೆಯಲಿದ್ದು,ಗುರುವಾರದ ವೇಳೆಗೆ ಕೇವಲ ಇಬ್ಬರು ಅಭ್ಯರ್ಥಿಗಳ ಅಂತಿಮ ಪಟ್ಟಿ ಬಹಿರಂಗಗೊಳ್ಳಲಿದೆ.ಮ್ಯಾಜಿಕ್ ಸಂಖ್ಯೆಯನ್ನು 120 ಈಗಾಗಲೆ ಸನಕ್ ಹತ್ತಿರದಲ್ಲಿದ್ದಾರೆ 2ನೆ ಅಭ್ಯರ್ಥಿಯ ಸ್ಥಾನ ಪೈಪೋಟಿ ನಡೆಯಲಿದೆ.

Articles You Might Like

Share This Article