ಯುವ ಜನಾಂಗಕ್ಕೆ ಮಾರಕವಾಗಲು ಹೃದಯಘಾತ ಇಲ್ಲಿದೆ ಹಲವು ಕಾರಣ

Social Share

ಬೆಂಗಳೂರು,ನ.12- ಈ ಹಿಂದೆ 60 ವರ್ಷ ದಾಟಿದವರನ್ನು ಮಾತ್ರ ಕಾಡುತ್ತಿದ್ದ ಹೃದಯಘಾತದಂತಹ ಪ್ರಕರಣಗಳು ಇತ್ತಿಚಿನ ದಿನಗಳಲ್ಲಿ ಯುವಕರನ್ನು ಕಾಡುತ್ತಿರುವುದಕ್ಕೆ ಹವಾಮಾನ ವೈಪರಿತ್ಯ, ಮಣ್ಣಿನ ವೈಫಲ್ಯ ಹಾಗೂ ವಾಯು ಮಾಲಿನ್ಯ ಕಾರಣ ಎಂಬುದು ಇದೀಗ ಬಹಿರಂಗಗೊಂಡಿದೆ.

ಹದಿ ಹರಯದ ಯುವಕರು ಹೃದಯಘಾತಕ್ಕೆ ಒಳಗಾಗುತ್ತಿರುವುದಕ್ಕೆ ಮಾಲಿನ್ಯವೇ ಕಾರಣ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಖ್ಯಾತ ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ ಖಚಿತಪಡಿಸಿದ್ದಾರೆ.

ಕಳೆದ 5 ವರ್ಷದಲ್ಲಿ 7 ಸಾವಿರಕ್ಕೂ ಹೆಚ್ಚು ಯುವಕರು ಹೃದಯಘಾತಕ್ಕೆ ಒಳಗಾಗಿರುವ ಮಾಹಿತಿಯನ್ನಾಧರಿಸಿ ಜಯದೇವ ಆಸ್ಪತ್ರೆ ನಡೆಸಿದ ಆಧ್ಯಯನದ ಸಂದರ್ಭದಲ್ಲಿ ಇಂತಹ ದುಸ್ಥಿತಿಗೆ ಹವಾಮಾನ ವೈಪರಿತ್ಯ, ಮಣ್ಣಿನ ವೈಫಲ್ಯ ಹಾಗೂ ಮಾಲಿನ್ಯ ಕಾರಣ ಎನ್ನುವುದು ತಿಳಿದುಬಂದಿದೆ ಎಂದು ಡಾ.ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಹಿಮಾಚಲಪ್ರದೇಶದಲ್ಲಿ ಇಂದು ಮೊದಲ ಹಂತದ ಮತದಾನ

ಹೃದಯಘಾತಕ್ಕೆ ತುತ್ತಾದ 7 ಸಾವಿರಕ್ಕೂ ಹೆಚ್ಚು ಯುವಕರಲ್ಲಿ 15 ಹಾಗೂ 19 ವರ್ಷದವರೇ ಹೆಚ್ಚಾಗಿರುವುದು ಬಹಿರಂಗಗೊಂಡಿದೆ ಎನ್ನುವುದನ್ನು ಅವರು ಉಲ್ಲೇಖಿಸಿದ್ದಾರೆ. ಅದರಲ್ಲೂ ಇತ್ತಿಚೆಗೆ ಮಹಿಳೆಯರಲ್ಲೂ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗುತ್ತಿದೆ ಎಂಬ ಆಘಾತಕಾರಿ ಅಂಶವನ್ನು ಅವರು ಖಚಿತಪಡಿಸಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮನುಷ್ಯರ ಜೀನ್ಸ್ ಮೇಲೆ ಪರಿಣಾಮ ಬೀರುತ್ತಿರುವುದೇ ಹೃದಯಘಾತ ಹೆಚ್ಚಾಗಲು ಕಾರಣ ಎನ್ನುವುದನ್ನು ನಾವು ಕಂಡುಕೊಂಡಿರುವುದಾಗಿ ಮಂಜುನಾಥ್ ತಿಳಿಸಿದ್ದಾರೆ.

ನಾವು ನಡೆಸಿದ ಆಧ್ಯಯನದಲ್ಲಿ ಧೂಮಪಾನ ಮಾಡುವ ಶೇ.51, ಬಿಪಿ, ಸುಗರ್ ನಂತರ ರೋಗದಿಂದ ಬಳಲುತ್ತಿರುವ ಶೇ.15 ರಷ್ಟು ಮಂದಿಯಲ್ಲಿ ಹೃದಯ ಸಂಬಂಧಿ ಕಾಯಿಲೆ ಇರುವುದು ಬಹಿರಂಗಗೊಂಡಿದೆ.ಇನ್ನು ಶೇ.15 ರಷ್ಟು ಮಂದಿಗೆ ಅನುವಂಶಿಕವಾಗಿ ಹೃದಯಘಾತ ಬಂದಿರುವುದು ಗೊತ್ತಾಗಿದೆಯಂತೆ.

50 ವರ್ಷದೊಳಗಿನ ವ್ಯಕ್ತಿ ಹೃದಯಘಾತಕ್ಕೆ ತುತ್ತಾಗಿದ್ದರೆ, ಅವರ ಮಕ್ಕಳಿಗೆ ಅನುವಂಶಿಕವಾಗಿ ಹೃದಯಘಾತವಾಗುವ ಪ್ರಮಾಣ ಶೇ. 3 ರಿಂದ 5 ರಷ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದ ವಾಯು ಮಾಲಿನ್ಯ ಹೆಚ್ಚಳವಾಗುತ್ತಿದೆ. ಇದೇ ರೀತಿ ವಾಹನ ದಟ್ಟಣೆ ಮುಂದುವರೆದರೆ ಭವಿಷ್ಯದಲ್ಲಿ ಬೆಂಗಳೂರು ದೆಹಲಿಯಂತೆ ಮಾಲಿನ್ಯ ನಗರವಾಗಿ ಹೊರ ಹೊಮ್ಮುವುದು ಗ್ಯಾರಂಟಿ. ಹೀಗಾಗಿ ಸರ್ಕಾರ ಹಾಗೂ ಬಿಬಿಎಂಪಿಯವರು ಹೆಚ್ಚುತ್ತಿರುವ ಮಾಲಿನ್ಯಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳದಿದ್ದರೆ ಮುಂದೊಂದು ದಿನ ಬೆಂಗಳೂರು ಹೃದಯಘಾತಗಳ ನಗರಿಯಾಗಿ ಮಾರ್ಪಟ್ಟರೂ ಆಚ್ಚರಿಪಡುವಂತಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕಾಲಮಿತಿಯೊಳಗೆ ಕಡತ ವಿಲೇವಾರಿ ಮಾಡುವಂತೆ ಸಿಎಂ ಎಚ್ಚರಿಕೆ

ಎಚ್ಚರವಹಿಸುವುದು ಸೂಕ್ತ: ಹವಾಮಾನ ವೈಫರಿತ್ಯ, ಮಣ್ಣಿನ ವೈಫಲ್ಯ ಹಾಗೂ ಮಾಲಿನ್ಯ ಮನುಷ್ಯರ ಜೀನ್ಸ್ ಮೇಲೆ ಪರಿಣಾಮ ಬೀರುತ್ತಿರುವುದನ್ನು ಜನರು ಗಂಭೀರವಾಗಿ ಪರಿಗಣಿಸಿ ಹೃದಯಘಾತ ಬರದಂತೆ ಎಚ್ಚರವಹಿಸುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಹೃದಯಘಾತದಂತಹ ಲಕ್ಷಣ ಕಂಡು ಬಂದ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಸಲಹೆ ಸೂಚನೆ ಪಡೆದುಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಇದರ ಜತೆಗೆ ಹೃದಯಘಾತವಾಗದಂತೆ ವಾಕಿಂಗ್, ಯೋಗ, ಮುದ್ರೆ ಸೇರಿದಂತೆ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಸೂಕ್ತವಾಗಿದೆ.

Articles You Might Like

Share This Article