ಶಿಮ್ಲಾ, ಜು.27 -ಹಿಮಾಚಲ ಪ್ರದೇಶದ ಕುಲು ಜಿಲ್ಲಾಯಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಮನಾಲಿ ತಹಸಿಲನ್ ನೆಹರು ಕುಂಡ್ ಬಳಿ ಮಂಗಳವಾರ ರಾತ್ರಿ ಭೂಕುಸಿತ ಸಂಭವಿಸಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.
ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ರಸ್ತೆಯಿಂದ ಬಂಡೆಗಳನ್ನು ತೆರವುಗೊಳಿಸುವವರೆಗೆ ಪಲ್ಚನ್ ಮೂಲಕ ಸಂಚಾರವನ್ನು ಬದಲಾಯಿಸಲಾಗಿದೆ. ಕುಲು ಜಿಲ್ಲಾಡಳಿತವು ರಸ್ತೆಯನ್ನು ತೆರವುಗೊಳಿಸಲು ಗಡಿ ರಸ್ತೆಗಳ ಅಭಿವೃದ್ದಿ ಸಂಸ್ಥೆ ಮಾಹಿತಿ ತಿಳಿಸಿದೆ.
ಕಲ್ಲು-ಮಣ್ಣು ಬಿದ್ದ ಜಾಗದಲ್ಲಿ ಇಂದು ಬೆಳಿಗ್ಗೆ ತೆರವುಗೊಳಿಸಲಾಗುತ್ತಿದೆ ಶೀಘ್ರ ವಾಹನ ಸಂಚಾರ ಆರಂಭವಾಗಲಿದೆ ಎಂದು ಅಧಿಕಾರಿಗಲು ತಿಳಿಸಿದ್ದಾರೆ,