19 ಸಾವಿರ ಕೋಟಿ ರೂ. ಏನಾಯ್ತು..? ಏನಾಯ್ತು..?

Social Share

ಬೆಂಗಳೂರು,ಅ.27- ರಸ್ತೆ ಅಭಿವೃದ್ಧಿಗೆ ಮಾಡಿರುವ ಸಾವಿರಾರು ಕೋಟಿ ಕೋಟಿ ಅನುದಾನದ ಹಣ ಹೊಳೆಯಲ್ಲಿ ಹುಣಸೆ ಹಣ್ಣು ಹಿಂಡಿದಂತಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಯಾಕೆ ಅಂತೀರಾ.. ಈ ಸುದ್ದಿ ನೋಡಿ

ಕಳೆದ ಆರು ವರ್ಷಗಳಿಂದ ರಸ್ತೆ ಅಭಿವೃದ್ಧಿಗೆಂದು 19 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡಿದ್ದರೂ, ನಗರದ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು ವಾಹನಗಳ ಸಂಚಾರಕ್ಕೆ ಯೋಗ್ಯವಲ್ಲದಂತಿರುವುದೇ ಸಾಕ್ಷಿ.
ಹಾಗಾದರೆ, ಇಷ್ಟು ವರ್ಷ ಖರ್ಚು ಮಾಡಿದ್ದ ಸಾವಿರಾರು ಕೋಟಿ ರೂ.ಗಳು ಏನಾಯಿತು ಎಂದು ಪ್ರಜ್ಞಾವಂತ ನಾಗರೀಕರು ಪ್ರಶ್ನಿಸುವಂತಾಗಿದೆ.

ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಚಾಲನೆ

ಹಾಗಾದರೆ, ಇದುವರೆಗೂ ರಸ್ತೆ ಅಭಿವೃದ್ಧಿಗೆ ಎಷ್ಟು ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ನೀವೆ ನೋಡಿ..
2015-16 ರಿಂದ 2020-21 ರವರೆಗಿನ 06 ವರ್ಷಗಳ ಅವಯಲ್ಲಿ ಈ ಕೆಳಕಂಡ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಕಾರ್ಯ ಗಳಿಗೆಂದು ಬಿಡುಗಡೆಯಾಗಿರುವ ಎಲ್ಲ ವಿಧದ ಅನುದಾನಗಳ ವಿವರ ಇಂತಿದೆ.

ಒಟ್ಟಾರೆ, ಕಳೆದ ಆರು ವರ್ಷಗಳಲ್ಲಿ ರಸ್ತೆ ಅಭಿವೃದ್ಧಿಗೆಂದೇ 19 ಸಾವಿರ ಕೋಟಿ ರೂ.ಗಳಿಗೂ
ಹೆಚ್ಚು ಹಣ ಖರ್ಚು ಮಾಡಿದ್ದರು ನಗರದ ರಸ್ತೆಗಳಲ್ಲಿ ಇಂದಿಗೂ ವಾಹನಗಳು ಓಡಾಡದಂತಹ ಪರಿಸ್ಥಿತಿ ಇದೆ ಎಂದರೆ ಹೊಳೆಯಲ್ಲಿ ಹುಣಸೆ ಹುಳಿ ಹಿಂಡಿದಂತೆ ಸಾವಿರಾರು ಕೋಟಿ ರೂ.ಗಳನ್ನು ದುಂದು ವೆಚ್ಚ ಮಾಡಿದಂತಾಗಲಿಲ್ಲವೇ?

ಆನ್‍ಲೈನ್‍ನಲ್ಲಿ ಭೂ ಪರಿವರ್ತನೆ ಪೋಡಿ ಸೌಲಭ್ಯ

1) ಬೊಮ್ಮನಹಳ್ಳಿ 1,673,68,54,382/-
2) ಬೆಂಗಳೂರು ದಕ್ಷಿಣ 2,337,54,38,933/-
3) ಮಲ್ಲೇಶ್ವರಂ 1,089,77,54,550/-
4) ಪದ್ಮನಾಭನಗರ 1,217,59,73,975/-
5) ರಾಜರಾಜೇಶ್ವರಿನಗರ 2,334,30,04,600/-
6) ಯಶವಂತಪುರ 2,346,52,34,761/-
7) ಕೆ. ಆರ್. ಪುರ 2,268,95,93,772/-
8) ಮಹಾಲಕ್ಷ್ಮಿ ಬಡಾವಣೆ 1,997,63,18,176/-
9) ಮಹದೇವಪುರ 1,186,76,81,668/-
10) ಸಿವಿರಾಮನ್ ನಗರ 1,089,97,09,211/-
11) ಚಿಕ್ಕಪೇಟೆ 9,189,72,02,509/-
12) ಯಲಹಂಕ 1,251,81,72,540/-

Articles You Might Like

Share This Article