ಬೆಂಗಳೂರಲ್ಲಿ 500ಕ್ಕೂ ಹೆಚ್ಚು ಹಂಪ್ಸ್ ಹಾಕಲು ಬಿಬಿಎಂಪಿಗೆ ಪೊಲೀಸರ ಪ್ರಸ್ತಾವನೆ

Social Share

ಬೆಂಗಳೂರು,ಅ.17- ಹೆಚ್ಚುತ್ತಿರುವ ಅಪಘಾತಗಳ ತಡೆಗೆ ಹಾಗೂ ಸುಗಮ ಸಂಚಾರದ ಉದ್ದೇಶದಿಂದ ನಗರದ ವಿವಿಧ ಪ್ರದೇಶಗಳ ರಸ್ತೆಗಳಲ್ಲಿ 500ಕ್ಕೂ ಹೆಚ್ಚು ಹಂಪ್ಸ್ ಹಾಕುವಂತೆ ಸಂಚಾರಿ ಪೊಲೀಸರು ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಜನದಟ್ಟಣೆ ಹಾಗೂ ವಾಹನ ದಟ್ಟಣೆ ಹೆಚ್ಚಿರುವ ವೈಟ್‍ಫೀಲ್ಡ, ಕೆಂಗೇರಿ, ಜಯನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ಅತಿ ಹೆಚ್ಚು ರಸ್ತೆ ಉಬ್ಬು ನಿರ್ಮಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಬಿಬಿಎಂಪಿಯವರು ಸಂಚಾರಿ ಪೊಲೀಸರ ಮನವಿ ಮೇರೆಗೆ ಹಾಲಿ ಇರುವ ರಸ್ತೆ ಉಬ್ಬುಗಳ ಜೊತೆಗೆ ಹೊಸದಾಗಿ 500 ಕ್ಕೂ ಅಧಿಕ ರೋಡ್ ಹಂಪ್ಸ್ ನಿರ್ಮಿಸಲು ಮುಂದಾಗಿದ್ದಾರೆ.

ನಗರದ 39 ಸಂಚಾರಿ ಪೊಲೀಸ್ ಠಾಣೆಗಳಿಂದ ಪ್ರತ್ಯೇಕವಾಗಿ ಸಲ್ಲಿಕೆಯಾಗಿ ರುವ ಪ್ರಸ್ತಾವನೆಗಳ ಆಧಾರದ ಮೇಲೆ ಅಪಘಾತ ಸಂಭವಿಸುವ 524 ರಸ್ತೆಗಳಲ್ಲಿ ಹೊಸದಾಗಿ ರೋಡ್ ಹಂಪ್ ಅಳವಡಿಸಲು ಬಿಬಿಎಂಪಿ ನಿರ್ಧರಿಸಿದೆ.
ವೈಟ್ ಫೀಲ್ಡ – 49
ಜಯನಗರ – 47
ಕೆಂಗೇರಿ – 44
ಹುಳಿಮಾವು – 33
ಆರ್.ಟಿ.ನಗರ – 32
ಬಾನಸವಾಡಿ – 21
ಹೂಡಿ – 22
ಮಹದೇವರ ಹಾಗೂ
ಜೆಪಿನಗರ ತಲಾ – 19
ಹಲಸೂರು ಗೇಟ, ಜಾಲಹಳ್ಳಿ – 17
ರಾಜಾಜಿನಗರ – 16
ಮಲ್ಲೇಶ್ವರ – 14
ವಿವಿಪುರ – 12
ದೇವನಹಳ್ಳಿ – 11
ಯಶವಂತಪುರ – 10
ವಾರ್ಡ್ ರಸ್ತೆಗಳಲ್ಲಿ – 9
ಚಿಕ್ಕಪೇಟೆ – 8
ಯಲಹಂಕ – 6.
ಹಲಸೂರು, ಮೈಕೋ ಲೇಔಟ, ಪುಲಕೇಶಿನಗರ, ವಿಜಯ ನಗರ ಹಾಗೂ ಹೆಚ್‍ಎಸ್‍ಆರ್ ಲೇಔಟ್ – 4
ಪಶ್ಚಿಮ ಸಂಚಾರಿ ಪೊಲೀಸರು – 3
ಚಿಕ್ಕಜಾಲ, ಎಚ್‍ಎಎಲï, ಹೆಬ್ಬಾಳ, ಉಪ್ಪಾರಪೇಟೆ ಹಾಗೂ ವಿಲ್ಸನ್ ಗಾರ್ಡನ್ ತಲಾ – 2
ಶಿವಾಜಿ ನಗರ, ಪೀಣ್ಯ, ಹೈಗೌಂಡ್ಸï, ಕೆಆರ್‍ಪುರ ಹಾಗೂ ಹೂಡಿಯಲ್ಲಿ ತಲಾ ಒಂದೊಂದು ರಸ್ತೆ ಉಬ್ಬುಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ.

Articles You Might Like

Share This Article