ಮಾಂಗಲ್ಯ ಸರ ದೋಚಿದ್ದ ಇಬ್ಬರ ಬಂಧನ

Social Share

ಬೆಂಗಳೂರು,ಜ.20- ಮಹಿಳೆಗೆ ಬೆದರಿಕೆ ಹಾಕಿ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದ ಹಾಗೂ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಇಬ್ಬರು ದರೋಡೆಕೋರರನ್ನು ಹನುಮಂತ ನಗರ ಠಾಣೆ ಪೊಲೀಸರು 500ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸಿ ಬಂಧಿಸಿ 27 ಗ್ರಾಂ ಚಿನ್ನದ ಸರ ಹಾಗೂ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಪಂತರಪಾಳ್ಯ, ಅಂಬೇಡ್ಕರ್‍ನಗರದ ನಿವಾಸಿ ಸುನೀಲ್‍ಕುಮಾರ್(37), ವಿನಾಯಕ ಲೇಔಟ್‍ನ ಶ್ರೀನಿವಾಸ (25) ಬಂಧಿತ ಆರೋಪಿಗಳು. ಹನುಮಂತನಗರದ 2ನೇ ಬ್ಲಾಕ್, 1ನೇ ಹಂತದ 5ನೇ ಕ್ರಾಸ್ ನಿವಾಸಿ ಜಯಶ್ರೀ(56) ಎಂಬುವರು ಅಶೋಕನಗರದಲ್ಲಿರುವ ಜಿ.ಟಿ.ಎಲ್‍ಪಿಎಸ್ ಸರ್ಕಾರಿ ಶಾಲೆಯ ಉದ್ಯೋಗಿಯಾಗಿದ್ದು ಅನಾರೋಗ್ಯದ ಕಾರಣ ಜ.4ರಂದು ಅನುಮತಿ ಪಡೆದು ಅಂದು ಮಧ್ಯಾಹ್ನ 3.30ರ ಸುಮಾರಿಗೆ ನಡೆದುಕೊಂಡು ಮನೆಗೆ ಹೋಗುತ್ತಿದ್ದರು.

ಆ ವೇಳೆ ಹನುಮಂತನಗರದ 4ನೇ ಕ್ರಾಸ್‍ನಲ್ಲಿ ದ್ವಿಚಕ್ರವಾಹನದಲ್ಲಿ ಎದುರುಗಡೆಯಿಂದ ಬಂದ ಇಬ್ಬರು ಜಯಶ್ರೀ ಅವರನ್ನು ಅಡ್ಡಗಟ್ಟಿ ಚಾಕು ತೋರಿಸಿ ಚುಚ್ಚುವುದಾಗಿ ಬೆದರಿಸಿ ಅವರ ಕುತ್ತಿಗೆಯಲ್ಲಿದ್ದ 70 ಗ್ರಾಂ ತೂಕದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಕಾಂಗ್ರೆಸ್‍ನಲ್ಲಿ 2 ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಇಲ್ಲ: ಡಿಕೆಶಿ

ಈ ಬಗ್ಗೆ ಜಯಶ್ರೀ ಅವರು ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸರಗಳ್ಳತನ ನಡೆದ ಸ್ಥಳದ ಸುತ್ತಮುತ್ತಲು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲನೆ ಮಾಡಿ ಅದರಲ್ಲಿನ ದೃಶ್ಯಾವಳಿ ಸಾಕ್ಷಿಗಳ ಆಧಾರದಲ್ಲಿ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ 27 ಗ್ರಾಂ ಚಿನ್ನದ ಸರ, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಹಾಗೂ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಈ ಇಬ್ಬರು ಆರೋಪಿಗಳು ಕೆಂಗೇರಿ, ಹನುಮಂತನಗರ, ಸಿ.ಕೆ.ಅಚ್ಚುಕಟ್ಟು, ಕೆ.ಜಿ.ನಗರ, ಗಿರಿನಗರ, ಬನಶಂಕರಿ, ಹಲಸೂರುಗೇಟ್ ಮುಂತಾದ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡಿದ್ದ 12 ದ್ವಿಚಕ್ರ ವಾಹನಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.

ಮೆಟ್ರೋ ಎಂಡಿ ಅಂಜುಮ್ ಪರ್ವೇಜ್‍ಗೆ ಪೊಲೀಸ್ ನೋಟಿಸ್

ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತ ಕೃಷ್ಣಕಾಂತ್ ಅವರ ಮಾರ್ಗದರ್ಶನದಲ್ಲಿ ವಿವಿಪುರಂ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಾಗರಾಜ್ ಅವರ ನೇತೃತ್ವದಲ್ಲಿ ಹನುಮಂತನಗರ ಠಾಣೆ ಇನ್‍ಸ್ಪೆಕ್ಟರ್ ಸಂದೀಪ್‍ಕುಮಾರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಗಳನ್ನು ಪತ್ತೆ ಮಾಡಿ ಕಳವು ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

robbed, gold, chain, two Arrest, 12 two, wheelers seized,

Articles You Might Like

Share This Article