ಬೆಂಗಳೂರು,ಜ.20- ದ್ವಿಚಕ್ರ ವಾಹನ ಸವಾರರನ್ನು ಅಡ್ಡಗಟ್ಟಿ ಚಿನ್ನದ ವ್ಯಾಪಾರಿಯ 85 ಲಕ್ಷ ರೂ. ಸುಲಿಗೆ ಮಾಡಿ ಪರಾರಿಯಾಗಿದ್ದ ಮೂವರು ದರೋಡೆಕೋರರನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿ 62 ಲಕ್ಷ ನಗದು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕಲಾಸಿಪಾಳ್ಯದ ಬಡಾಮಕಾನ್ ಎಚ್.ಸಿದ್ದಯ್ಯರಸ್ತೆ ನಿವಾಸಿ ಮೊಹಮ್ಮದ್ ಜಿಲಾನ್(27), ಶಿವಾಜಿನಗರದ ಅಬ್ದುಲ್ ವಹಾಬ್ ಅಲಿಯಾಸ್ ಕಮರ್(35) ಮತ್ತು ಮಹಾಲಿಂಗೇಶ್ವರ ಬಡಾವಣೆಯ ಪೃಥ್ವಿಕ್(20) ಬಂಧಿತ ಆರೋಪಿಗಳು.
ಆರೋಪಿ ಮೊಹಮ್ಮದ್ನಿಂದ 31 ಲಕ್ಷ ನಗದು, ಅಬ್ದುಲ್ ವಹಾಬ್ನಿಂದ 27 ಲಕ್ಷ ರೂ. ಹಾಗೂ ಪೃಥ್ವೀಕ್ನಿಂದ 4 ಲಕ್ಷ ರೂ. ಸೇರಿದಂತೆ ಒಟ್ಟು 62 ಲಕ್ಷ ರೂ. ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಮತ್ತೊಬ್ಬ ಆರೋಪಿ ಹುಸೇನ್ ತಲೆಮರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ಮುಂದುವರೆದಿದ್ದು , ಈತನಿಂದ ಉಳಿದ ಹಣವನ್ನು ವಶಪಡಿಸಿಕೊಳ್ಳಬೇಕಿದೆ.
ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಬಿಜೆಪಿಯ ಪ್ರಭಾವಿ ಶಾಸಕರು
ಜ.10ರಂದು ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಚಿನ್ನದ ವ್ಯಾಪಾರಿ ವರುಣ್ಸಿಂಗ್ ಪನ್ವಾರ್ ಮತ್ತು ಕೃಷ್ಣಪ್ಪ ಎಂಬುವರು ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನಾಲಾ ರಸ್ತೆಯಲ್ಲಿ ಗೋಲ್ಡ್ ಖರೀದಿದಾರರಿಂದ ಹಣವನ್ನು ಪಡೆದುಕೊಂಡು ತಮ್ಮ ದ್ವಿಚಕ್ರ ವಾಹನದ ಮುಂಭಾಗ ಇಟ್ಟುಕೊಂಡು ಬರುತ್ತಿದ್ದರು.
ಆ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದರೋಡೆಕೋರರು ಇವರ ಬೈಕ್ನ್ನು ಅಡ್ಡಗಟ್ಟಿ ಬೆದರಿಸಿ 85 ಲಕ್ಷ ರೂ.ಗಳಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ಪಿರ್ಯಾದುದಾರರು 10 ಲಕ್ಷ ಹಣ ದರೋಡೆಯಾಗಿದೆ ಎಂದು ದೂರು ನೀಡಿದ್ದರು. ಪ್ರಕರಣದ ತನಿಖೆ ಹಾಗೂ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ದರೋಡೆಕೋರರ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ ಮೂವರನ್ನು ಬಂಧಿಸಿ 62 ಲಕ್ಷ ರೂ. ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಹಳೇ ಪಿಂಚಣಿ ಯೋಜನೆ ಜಾರಿ
ಈ ಪ್ರಕರಣದಲ್ಲಿ ಆರೋಪಿಗಳು ಹೆಚ್ಚಿನ ಹಣ ದರೋಡೆ ಮಾಡಿಕೊಂಡು ಹೋಗಿದ್ದರೂ ಸಹ ದೂರುದಾರರು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಲೆಕ್ಕ ನೀಡಲು ಹೆದರಿ ಕೇವಲ 10 ಲಕ್ಷ ರೂ. ದರೋಡೆಯಾಗಿದೆ ಎಂದು ದೂರು ನೀಡಿದ್ದರು.
ಇದೀಗ ಪ್ರಕರಣದಲ್ಲಿ ಮೂವರನ್ನು ಬಂಧಿಸಿ ಪರಾರಿಯಾಗಿರುವ ಮತ್ತೊಬ್ಬನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
robbers, Arrest, 62 lakhs, seized,