ದರೋಡೆಗೆ ಸಂಚು: 6 ಮಂದಿ ಬಂಧನ

Social Share

ಬೆಂಗಳೂರು,ಜ.12- ಮಾರಕಾಸ್ತ್ರಗಳನ್ನಿಟ್ಟುಕೊಂಡು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರನ್ನು ತಡೆದು ಹಲ್ಲೆ ಮಾಡಿ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಲು ಸಂಚು ರೂಪಿಸುತ್ತಿದ್ದ ಆರು ಮಂದಿಯನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ನಗರದ ಮೊಹಮ್ಮದ್ ಆಲೀಂ(32), ರಿಜ್ವಾನ್ ಖಾನ್(33), ವಾಸೀಮ್ ಅಹ್ಮದ್‍ಶೇಕ್(27), ಶಫೀ ಉಲ್ಲಾ(32), ಮೊಹಮ್ಮದ್ ಫರಸ್(32) ಮತ್ತು ತಬ್ರೇಜ್(22) ಬಂಧಿತ ದರೋಡೆಕೋರರು.

ಆರೋಪಿಗಳಿಂದ ಎರಡು ಚಾಕು, ದೊಣ್ಣೆ, ಕಬ್ಬಿಣದ ರಾಡು, ನೈಲಾನ್ ಹಗ್ಗ, 50 ಗ್ರಾಂ ಖಾರದ ಪುಡಿ, ಸ್ಯಾಮ್‍ಸಂಗ್ ಕಂಪೆನಿ 4 ಮೊಬೈಲ್‍ಗಳು, ಹಾನರ್ ಕಂಪೆನಿ, ಓಪೋ ಕಂಪೆನಿಯ ತಲಾ ಒಂದು ಮೊಬೈಲ್‍ಗಳು, ವಿವೋ ಕಂಪೆನಿಯ ಎರಡು ಮೊಬೈಲ್ ಸೇರಿ 8 ಮೊಬೈಲ್‍ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಪೋಲೀಸರು ಯಶಸ್ವಿಯಾಗಿದ್ದು ಇವುಗಳ ಒಟ್ಟು ಮೌಲ್ಯ 5.20 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.

ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಜಾಹಿರಾತು ಶುಲ್ಕ ವಸೂಲಿ ಮಾಡಲಾಗುವುದೇ ?: ಸಿಸೋಡಿಯಾ

ಸಿಗೇಬೆಲೆಯ ಮಟನ್ ಮಾರ್ಕೆಟ್ ರಸ್ತೆ ಸಮೀಪ ಐದಾರು ಮಂದಿ ಗುಂಪುಗೂಡಿಕೊಂಡು ಮಾರಕಾಸ್ತ್ರ ಗಳನ್ನಿಟ್ಟುಕೊಂಡು ಚಿಕ್ಕಪೇಟೆ ಮತ್ತು ಸಿಟಿ ಮಾರ್ಕೆಟ್ ಕಡೆಯಿಂದ ಬರುವ ವ್ಯಾಪಾರಸ್ಥರು ಮತ್ತು ಸಾರ್ವಜನಿಕರನ್ನು ತಡೆದು ದರೋಡೆ ಮಾಡಲು ಸಂಚು ರೂಪಿಸುತ್ತಿರುವ ಬಗ್ಗೆ ಸಿಟಿ ಮಾರ್ಕೆಟ್ ಠಾಣೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಆರು ಮಂದಿಯನ್ನು ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಹಾಗೂ ಎರಡನೇ ಆರೋಪಿ ರಿಜ್ವಾನ್ ಖಾನ್ ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸಿಟಿ ಮಾರ್ಕೆಟ್, ಗಿರಿನಗರ, ಕಾಟನ್‍ಪೇಟೆ ಹಾಗೂ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ನಾಲ್ಕು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಪ್ರಕರಣಗಳ ಮಾಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮನೀಶ್‍ಪಾಂಡೆ ಭರ್ಜರಿ ಶತಕ, ಕರ್ನಾಟಕ 445ಕ್ಕೆ ಸರ್ವಪತನ..

ಈ ಯಶಸ್ವಿ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತ ಲಕ್ಷ್ಮಣ್ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ಚಿಕ್ಕಪೇಟೆ ಉಪವಿಭಾಗದ ಎಸಿಪಿ ಗಿರಿ ಹಾಗೂ ಸಿಟಿ ಮಾರ್ಕೆಟ್ ಠಾಣೆ ಇನ್ಸ್‍ಪೆಕ್ಟರ್ ಶಿವಕುಮಾರ್ ಅವರನ್ನೊಳಗೊಂಡ ಸಿಬ್ಬಂದಿ ತಂಡವು ಕೈಗೊಂಡಿತ್ತು.

Robbery, 6 arrested, Bengaluru, Police,

Articles You Might Like

Share This Article