ಗ್ರಾ. ಪಂ. ಅಧ್ಯಕ್ಷನ ಮನೆಗೆ ನುಗ್ಗಿ 23 ಲಕ್ಷ ಹಣ, ಚಿನ್ನ ದರೋಡೆ

Social Share

ಬೆಳಗಾವಿ,ಅ.25-ಗ್ರಾಮ ಪಂಚಾಯಿತಿ ಅಧ್ಯಕ್ಷನ ಮನೆಯಲ್ಲಿ ನುಗ್ಗಿದ ಡಕಾಯಿತರ ಗುಂಪು 23 ಲಕ್ಷ ಹಣ, 120 ಗ್ರಾಂ ಚಿನ್ನ ದರೋಡೆ ಮಾಡಿರುವಂತಹ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಬನ್ನೂರ ತಾಂಡಾದಲ್ಲಿ ನಡೆದಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್ ರಜಪೂತ ಅವರ ಮನೆಗೆ ಈ ಡಕಾಯಿತಿ ನಡೆದಿದೆ.ಮಧ್ಯರಾತ್ರಿ ಬಂದ ಸುಮಾರು 7 ಜನರ ದುಷ್ಕರ್ಮಿಗಳ ತಂಡ ಬಾಗಿಲು ಬಡೆದು ಒಳ ನುಗ್ಗಿ ಚಂದ್ರಶೇಖರ್ ಮತ್ತು ಪತ್ನಿ, ಸೊಸೆಯನ್ನ ಬೆಡ್ ರೂಮïನಲ್ಲಿ ಕೂಡಿಹಾಕಿ ನಂತರ ದರೋಡೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಪಿಡಿಓ ಆಗಿದ್ದ ಮಗ ಅಕಾಲಿಕ ಮರಣ ಹೊಂದಿದ್ದು, ಮಗನ ಸಾವು ಹಿನ್ನೆಲೆ ವಿಮೆ ಹಣವನ್ನು ಚಂದ್ರಶೇಖರ್ ಮನೆಯಲ್ಲಿಟ್ಟಿದ್ದರು. ಸ್ಥಳಕ್ಕೆ ಎಎಸ್‍ಪಿ ಮಹಾನಿಂಗ ನಂದಗಾವಿ ಬೇಟಿನೀಡಿ ಪರಿಶೀಲಿಸಿದ್ದಾರೆ. ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಶಾಸಕ ಮಹಾದೇವಪ್ಪ ಯಾದವಾಡ ಅವರು ಚಂದ್ರಶೇಖರ್ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಂತ್ವಾನ ಹೇಳಿದ್ದಾರೆ.

Articles You Might Like

Share This Article