ಬೆಂಗಳೂರು, ಫೆ.18- ಇಬ್ಬರು ದರೋಡೆಕೋರರನ್ನು ಬಂಧಿಸಿರುವ ಬಾಗಲೂರು ಠಾಣೆ ಪೊಲೀಸರು 2,500 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಸೈಯದ್ ಇಮ್ರಾನ್(28) ಮತ್ತು ಅಪ್ಸರ್ ಬೇಗ್(19) ಬಂಧಿತ ದರೋಡೆಕೋರರು.
ಫೆ.7ರಂದು ಕಣ್ಣೂರು- ಬೆಳ್ಳಹಳ್ಳಿ ರಸ್ತೆಯ ಪುನರ್‍ವಿ ಕಾಂಡಿಮೇಟ್ಸ್ ಸಮೀಪ ಸತೀಶ್ ಎಂಬುವರು ನಿಂತಿದ್ದಾಗ ಸ್ಕೂಟಿಯಲ್ಲಿ ಬಂದ ಇಬ್ಬರು ದರೋಡೆಕೋರರು ಚಾಕು ತೋರಿಸಿ, ಬೆದರಿಸಿ ಅವರ ಬಳಿ ಇದ್ದ ಹಣ ಬ್ಯಾಗ್ ಕಿತ್ತುಕೊಳ್ಳಲು ಮುಂದಾಗಿದ್ದಾರೆ.
ತಕ್ಷಣ ಸತೀಶ್ ಅವರು ಪ್ರತಿರೋಸಿದಾಗ ಚಾಕುವಿನಿಂದ ಹಲ್ಲೆ ಮಾಡಿ ಬ್ಯಾಗ್‍ನ್ನು ಕಿತ್ತುಕೊಂಡು ಓಡುತ್ತಿದ್ದಾಗ ಹಿಡಿಯಲು ಹೋದವರನ್ನು ತಳ್ಳಿಕೊಂಡು ಪರಾರಿಯಾದರು. ಈ ಬಗ್ಗೆ ಸತೀಶ್ ಅವರು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಸಿದ್ದಾರೆ.
ಆರೋಪಿ ಸೈಯದ್ ಇಮ್ರಾನ್ ವಿರುದ್ಧ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯಲ್ಲಿ 4 ಪ್ರಕರಣ, ಕೆಜಿ ಹಳ್ಳಿ ಠಾಣೆಯಲ್ಲಿ 2 ಪ್ರಕರಣಗಳು, ಯಲಹಂಕ, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಸೇರಿ ಒಟ್ಟು 8 ಪ್ರಕರಣಗಳು ದಾಖಲಾಗಿವೆ.
ಸಂಪಿಗೆಹಳ್ಳಿ ಉಪವಿಭಾಗದ ಎಸಿಪಿ ರಂಗಪ್ಪ ಅವರ ಮಾರ್ಗದರ್ಶನದಲ್ಲಿ ಬಾಗಲೂರು ಠಾಣೆ ಇನ್ಸ್‍ಪೆಕ್ಟರ್ ಪ್ರಶಾಂತ್ ಆರ್.ವರ್ಣ ಮತ್ತು ಸಿಬ್ಬಂದಿ ನೇತೃತ್ವದ ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
