ಬಸ್‍ಗಳಲ್ಲಿ ಪ್ರಯಾಣಿಕರ ವಸ್ತುಗಳ ದೋಚುತ್ತಿದ್ದ ಖತರ್ನಾಕ್ ಕಳ್ಳನ ಸೆರೆ

Social Share

ಬೆಂಗಳೂರು,ಜ.11- ಬಸ್‍ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಖತರ್ನಾಕ್ ಕಳ್ಳನನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಸಿ 16 ಲಕ್ಷ ರೂ. ಬೆಲೆಯ 306 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಮನಗರ ಪಟ್ಟಣದ ನಿವಾಸಿ ಆನಂದ್‍ಗಿರಿ ಬಂತ ಕಳ್ಳ. ಈತನ ಬಂಧನದಿಂದ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ಕನ್ನ ಕಳವು ಹಾಗು ಎರಡು ಸಾಮಾನ್ಯ ಕಳವು ಹಾಗೂ ರಾಮನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಒಂದು ಕಳವು ಪ್ರಕರಣ ಪತ್ತೆಯಾಗಿವೆ.
ಆರೋಪಿ ಆನಂದಗಿರಿ ಬಸ್‍ಗಳಲ್ಲಿ ಪ್ರಯಾಣಿಕನಂತೆ ಸಂಚರಿಸಿ ಪ್ರಯಾಣಿಕರು ಇಳಿಯುವಾಗ ನೂಕುನುಗ್ಗಲಿನಲ್ಲಿ ಅವರ ಗಮನ ಬೇರೆಡೆ ಸೆಳೆದು ಆಭರಣಗಳನ್ನು ಕಳ್ಳತನ ಮಾಡಿ ಯಾರಿಗೂ ಸಿಗದೆ ಓಡಿಹೋಗುತ್ತಿದ್ದನು.
ಜ.5ರಂದು ಪಿರ್ಯಾದುದಾರರು ಚಾಮರಾಜನಗರದಿಂದ ಬೆಂಗಳೂರಿಗೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಬಂದು ಬಸ್ ಇಳಿಯುವಾಗ ಪ್ರಯಾಣಿಕರ ನೂಕುನುಗ್ಗಲಿನಲ್ಲಿ ಅವರ ಬ್ಯಾಗ್‍ನಲ್ಲಿದ್ದ ಚಿನ್ನದ ಒಡವೆಗಳನ್ನು ಕಳವ ಮಾಡಿದ್ದರು. ಈ ಬಗ್ಗೆ ಬ್ಯಾಟರಾಯನಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶೋಧ ಕೈಗೊಂಡಿದ್ದರು. ಇನ್‍ಸ್ಪೆಕ್ಟರ್ ಶಂಕರ್ ನಾಯಕ್ ಹಾಗೂ ಸಿಬ್ಬಂದಿ ತನಿಖೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ಬಂಸಿ ವಿಚಾರಣೆಗೊಳಪಡಿಸಿ ಹಲವು ಕಳ್ಳತನ ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ.
ಆರೋಪಿ ಆನಂದಗಿರಿ ಓಡುವುದರಲ್ಲಿ ನಿಸ್ಸೀಮನಾಗಿದ್ದಾನೆ. ಬಸ್‍ಗಳಲ್ಲಿ ಪ್ರಯಾಣಿಕರ ಗಮನ ಸೆಳೆದು ಆಭರಣ ಎಗರಿಸಿ ಕ್ಷಣಾರ್ಧದಲ್ಲಿ ಮಾಯವಾಗುತ್ತಿದ್ದನು. ಅಲ್ಲದೆ ಮನೆಯ ತೆರೆದಿದ್ದ ಬಾಗಿಲು ಮೂಲಕ ಒಳನುಗ್ಗಿ ದೇವರ ಆಭರಣಗಳನ್ನು ಕದ್ದು ಅಲ್ಲಿಂದ ಓಡಿ ಹೋಗುತ್ತಿದ್ದನು. ಸಾರ್ವಜನಿಕರು ನೋಡಿ ಒಂದು ವೇಳೆ ಹಿಡಿಯಲು ಹೋದರೆ ಅವರ ಕೈಗೆ ಸಿಗದೇ ಜೋರಾಗಿ ಓಡಿ ತಪ್ಪಿಸಿಕೊಳ್ಳುತ್ತಿದ್ದರು.
ಆರೋಪಿಯಿಂದ ಸುಮಾರು 16 ಲಕ್ಷ ರೂ. ಬೆಲೆ ಬಾಳುವ 306ಗ ಗ್ರಾಂ ತೂಕದ ಚಿನ್ನದ ಆಭರಣಗಳು, ಒಂದು ಕೆಜಿ ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಳ್ಳುವಲ್ಲಿ ಬ್ಯಾಟರಾಯನಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Articles You Might Like

Share This Article