ಲಾಡ್ಜ್ ಗ್ರಾಹಕರನ್ನು ದೋಚುತ್ತಿದ್ದ ಆರೋಪಿಗಳ ಸೆರೆ

Social Share

ಮೈಸೂರು, ಜು.3- ಲಾಡ್ಜ್‍ನಲ್ಲಿ ಬರುವಂತಹ ಗ್ರಾಹಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ, ನಗದು ದೋಚುತ್ತಿದ್ದ ಇಬ್ಬರು ಆರೋಪಿಗಳನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳೆದ ಜು.19ರಂದು ನಗರದ ಲಕ್ಷ್ಮೀವಿಲಾಸ ರಸ್ತೆಯಲ್ಲಿರುವ ರಾಜ್ ಮಹಲ್ ಡಿಲೆಕ್ಸ್ ಲಾಡ್ಜ್ ನಲ್ಲಿ ಚಿನ್ನ, ಬೆಳ್ಳಿ, ಆಭರಣಗಳು ಹಾಗೂ ನಗದು ಹಣ ಕಳವಾಗಿರುವ ಬಗ್ಗೆ ದೂರು ದಾಖಲಾಗಿತ್ತು.

ಅದರಂತೆ ಕಳೆದ ಜು. 26ರಂದು ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದು, ಅವರಿಂದ 30 ಲಕ್ಷ ರೂ. ಮೌಲ್ಯದ 621 ಗ್ರಾಂ ಚಿನ್ನಾಭರಣ, 350 ಗ್ರಾಂ ಬೆಳ್ಳಿ, 40000 ನಗದು ಆ ಕೃತ್ಯಕ್ಕೆ ಬಳಸಿದ ಒಂದು ಕಾರು, 2 ಮೊಬೈಲ್‍ನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

Articles You Might Like

Share This Article