ಗಡಾಯಿಕಲ್ಲು ಗುಡ್ಡ ಏರಿ ಕನ್ನಡದ ಬಾವುಟ ಹಾರಿಸಿ ಸಂಭ್ರಮಿಸಿದ ಜ್ಯೋತಿರಾಜ್

Social Share

ಬೆಳ್ತಂಗಡಿ, ಫೆ.13- ತಾಲೂಕಿನ ನಡ ಗ್ರಾಮದಲ್ಲಿರುವ ಐತಿಹಾಸಿಕ ಕೋಟೆಯಾದ ಗಡಾಯಿ ಕಲ್ಲು ಅಥವಾ ನರಸಿಂಹ ಘಢವನ್ನು ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆ ಏರಿ ತಮ್ಮ ಸಾಹಸ ಮೆರೆದಿದ್ದಾರೆ.

ತನ್ನ ತಂಡದೊಂದಿಗೆ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅರ್ಚಕ ಗಣೇಶ್ ಭಟ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ಹೊರಟ ಜ್ಯೋತಿರಾಜ್ ಇಲ್ಲಿಂದ ಸುಮಾರು ಎರಡು ಕಿಮೀ ದೂರವನ್ನು ಕಾಡುದಾರಿ ಮೂಲಕ ಕ್ರಮಿಸಿ ಗಂಟೆ 9.50ರ ಸುಮಾರಿಗೆ ಬರಿಗೈ ಮೂಲಕ ಗಡಾಯಿಕಲ್ಲನ್ನು ಏರತೊಡಗಿದರು.

ಅಮೆರಿಕದ ಆಕಾಶದಲ್ಲಿ ಕಾಣಿಸಿಕೊಂಡಿದ್ದು ಏಲಿಯನ್ಸ್ ಇರಬಹುದೇ.. ?

ಸಮುದ್ರ ಮಟ್ಟಕ್ಕಿಂತ 1700 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲಿನ ತುತ್ತ ತುದಿಯನ್ನು 11.50ಕ್ಕೆ ತಲುಪಿ ಅಲ್ಲಿ ತನ್ನ ತಂಡದೊಂದಿಗೆ ಕನ್ನಡ ಧ್ವಜ ಹಾರಿಸಿ ತಮ್ಮ ಬಹುದಿನದ ಆಸೆ ಪೂರೈಸಿಕೊಂಡರು. ಇವರ ಈ ಸಾಹಸದ ಹಿಂದೆ ತಂಡದ ಸದಸ್ಯರಾದ ಬಸವರಾಜï, ರಾಜಶೇಖರ್, ಪವನ್ ಜೋಸ್, ನಿಂಗರಾಜು, ಮದನ್, ನವೀನ್, ಅಭಿ, ಪವನ್ ಕುಮಾರ್, ಲಾಯಿಲ ಗ್ರಾಪಂ ಸದಸ್ಯರಾದ ಪ್ರಸಾದ್ ಶೆಟ್ಟಿ ಏಣಿಂಜೆ, ಪ್ರತೀಕ್ ಕೋಟ್ಯಾನ್, ನಿತಿನ್ ಕುಮಾರ್, ಶೌರ್ಯ ವಿಪತ್ತು ತಂಡದ ಸದಸ್ಯರು ಅಗತ್ಯ ಸಹಕಾರ ನೀಡಿದರು. ವನ್ಯಜೀವಿ ವಿಭಾಗದ ಡಿಆರ್‍ಎಫ್‍ಒ ಕಿರಣ್ ಪಾಟೀಲ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಈ ಸಾಹಸ ನಡೆಸಲು ಇಲ್ಲಿಗೆ ಆಗಮಿಸಿದ ಜ್ಯೋತಿರಾಜ್ ತಂಡ ಅಗತ್ಯ ಪೂರ್ವಭಾವಿ ತಯಾರಿಗಳನ್ನು ಕೈಗೊಂಡಿತ್ತು.ಅರಣ್ಯ ಇಲಾಖೆ ಸೂಚನೆಯಂತೆ ಸೊಂಟಕ್ಕೆ ಕಟ್ಟಿದ ಬೆಲ್ಟï ಹಾಗೂ ಪಕ್ಕದಲ್ಲಿದ್ದ ರೋಪ್‍ಗೆ ಹುಕ್ ಮೂಲಕ ಸಂಪರ್ಕ ಕಲ್ಪಿಸಿ ಸುರಕ್ಷತೆ ದೃಷ್ಟಿಯಿಂದ ಮೇಲೆರಲು ಅವಕಾಶ ನೀಡಲಾಗಿತ್ತು.

ಗಡಾಯಿ ಕಲ್ಲು ಹತ್ತಲು ಎರಡು ತಾಸು ಪಡೆದುಕೊಂಡ ಜ್ಯೋತಿರಾಜ್ ಈ ಮಧ್ಯೆ 20 ನಿಮಿಷಗಳ ವಿಶ್ರಾಂತಿ ಪಡೆದಿರುವುದಾಗಿ ತಿಳಿಸಿದ್ದಾರೆ. ಗಡಾಯಿಕಲ್ಲು ಹತ್ತಿದ ಬಳಿಕ ಅರ್ಧ ತಾಸು ವಿಶ್ರಾಂತಿ ಪಡೆದು ಮಾಮೂಲು ಮೆಟ್ಟಿಲಿನ ಮೂಲಕ ಸಂಗಡಿಗರೊಂದಿಗೆ ಕೆಳಗಿಳಿದು ಬಂದರು.

#RockClimber, #Jyothiraj, #scales, #Gadaikallu,

Articles You Might Like

Share This Article