ತರ್ನ್‍ತರಣ್, ಡಿ.10- ಪಂಜಾಬ್‍ನ ಮತ್ತೊಂದು ಪೊಲೀಸ್ ಠಾಣೆಯ ಮೇಲೆ ರಾಕೇಟ್ ಚಾಲಿತ್ ಗ್ರೇನೆಡ್ (ಆರ್‍ಪಿಜಿ) ದಾಳಿ ನಡೆದಿದೆ. ಪಂಜಾಬ್‍ನ ಉತ್ತರ ವಲಯದ ಮಝ ಪ್ರದೇಶದಲ್ಲಿನ ತರ್ನ್‍ತರಣ್ ನಗರದ ಸರ್ಹಾಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆದಿದೆ. ತಕ್ಷಣದ ವರದಿಯ ಪ್ರಕಾರ ಯಾವುದೇ ಆಸ್ತಿ ಮತ್ತು ಪ್ರಾಣ ಹಾನಿ ಸಂಭವಿಸಿಲ್ಲ.
ಶನಿವಾರ ಮಧ್ಯರಾತ್ರಿ 1ಗಂಟೆ ಸುಮಾರಿಗೆ ಹಾರಿಸಲಾದ ಗ್ರೇನೆಡ್ ಠಾಣೆಯ ಹೊರಗಿನ ಪಿಲ್ಲರ್‍ಗೆ ಬಡಿದು ನೆಲಕ್ಕೆ ಅಪ್ಪಳಿಸಿದೆ. ಆದರೆ ಗ್ರೇನೆಡ್ ಸ್ಪೋಟಗೊಂಡಿಲ್ಲ. ಇದು ಪ್ರಬಲಶಾಲಿಯಾಗಿತ್ತು ಒಂದು ವೇಳೆ ಸ್ಪೋಟಗೊಂಡಿದ್ದರೆ ಠಾಣೆ ಸಂಪೂರ್ಣವಾಗಿ ಧ್ವಂಸವಾಗುತ್ತಿತ್ತು. ಅದರಲ್ಲಿದ್ದ ಎಂಟು ಮಂದಿ ಪೊಲೀಸರ ಪ್ರಾಣಪಾಯವಾಗು ಸಾಧ್ಯತೆ ಇತ್ತು ಎಂದು ಹೇಳಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮಾಂಡೌಸ್ ಚಂಡಮಾರುತಕ್ಕೆ ತಮಿಳುನಾಡು ತತ್ತರ
ಕುಖ್ಯಾತ ಗ್ಯಾಂಗ್‍ಸ್ಟರ್ ಆಗಿ ಕ್ರಮೇಣ ಖಲಿಸ್ತಾನದ ಉಗ್ರನಾಗಿ ಪರಿವರ್ತನೆಯಾಗಿದ್ದ ಹವೀಂದರ್ ಸಿಂಗ್ ಅಲಿಯಾಸ್ ರಿಂದ ಎಂಬಾತನ ಹುಟ್ಟೂರಾಗಿರುವ ಸರ್ಹಾಲಿಯಲ್ಲಿ ನಡೆದಿರುವ ಈ ದಾಳಿ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಹರವಿಂದರ್‍ಸಿಂಗ್ ಪಾಕಿಸ್ತಾನದಲ್ಲಿದ್ದಾಗ ದೇವಿಂದರ್ ಬಂಬಿಹ ಗ್ಯಾಂಗ್‍ನ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ಹೇಳಲಾಗಿದೆ. ದೇವಿಂದರ್ ಗ್ಯಾಂಗ್ ಹರವಿಂದರ್ ಹತ್ಯೆಯ ಹೊಣೆ ಹೊತ್ತುಕೊಂಡಿತ್ತು.
ಆದರೆ ಪೊಲಿಸರು ಇದನ್ನು ತಳ್ಳಿ ಹಾಕಿದ್ದರು. ಹರವಿಂದರ್ ಕಿಡ್ನಿ ವೈಪಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದರು. ಹವಿಂದರ್‍ಸಿಂಗ್ ಪಾಕಿಸ್ತಾನದ ಗುಪ್ತಚರ ಐಎಸ್‍ಐ ಕೃಪಾ ಪೋಷಿತ ಖಲಿಸ್ತಾನ್ ಉಗ್ರ ಸಂಘಟನೆಯ ನೇತೃತ್ವ ವಹಿಸಿದ್ದ.
ವಿವಾದಕ್ಕೆ ಎಡೆ ಮಾಡಿಕೊಟ್ಟ ಪವನ್ ಕಲ್ಯಾಣ್ ಪ್ರಚಾರ ರಥದ ಬಣ್ಣ
ಆತನ ಸಾವಿನ ಬಳಿಕವೂ ಪಂಜಾಬ್ ಭಾಗದಲ್ಲಿ ಖಲಿಸ್ತಾನ ಪ್ರೇರಿತ ಉಗ್ರ ಚಟುವಟಿಕೆಗಳು ಮುಂದುವರೆಯಲಿವೆ ಎಂಬ ಎಚ್ಚರಿಕೆ ನೀಡಲು ಈ ದಾಳಿ ನಡೆದಿರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಘಟನೆಯ ಬಳಿಕ ರಾಜ್ಯಾದ್ಯಂತ ಹೈಲರ್ಟ್ ಘೋಷಣೆ ಮಾಡಲಾಗಿದೆ.
ಕಳೆದ ಮೇನಲ್ಲಿ ಪಂಜಾಬ್‍ನ ಮೋಹಾಲಿಯ ಪೊಲೀಸ್ ಠಾಣೆ ಗುಪ್ತಚರ ಕಚೇರಿಯ ಮೇಲೆ ರಾಕೇಟ್ ಚಾಲಿತ್ ಗ್ರೇನೆಡ್ ದಾಳಿ ನಡೆದಿತ್ತು. ಹವಿಂದರ್ ಸಿಂಗ್ ಆ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ಇತ್ತೀಚೆಗೆ ನಡೆದ ಕಾಂಗ್ರೆಸ್ ನಾಯಕ ಹಾಗೂ ಗಾಯಕ ಸಿದ್ದು ಮೋಸೆವಾಲ ಹತ್ಯೆ ಪ್ರಕರಣದಲ್ಲೂ ಹವಿಂದರ್ ಸಿಂಗ್ ಹೆಸರು ಕೇಳಿ ಬಂದಿತ್ತು. ಆತ ನಿಷೇಧಿತ ಖಲಿಸ್ತಾನ ಅಂತರಾಷ್ಟ್ರೀಯ ಉಗ್ರ ಸಂಘಟನೆ ಬಬ್ಬರ್ ಖಲ್ಸಾದ ಸದಸ್ಯನಾಗಿದ್ದ ಎಂಬ ವಿವರಗಳು ಹೊರ ಬಂದಿವೆ.
ಘಟನೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ, ಅಮ್‍ಆದ್ಮಿ ಪಕ್ಷ ಪಂಜಾಬ್‍ನಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಸಿನಿಮೀಯ ರೀತಿಯಲ್ಲಿ ಯುವತಿ ಅಪಹರಿಸಿದ ನೂರಕ್ಕೂ ಹೆಚ್ಚು ಯುವಕರು
ಗಾಂಧಿ ಕುಟುಂಬದಂತೆ ಕೇಜ್ರಿವಾಲ್ ಕೂಡ ಪಂಜಾಬ್‍ನಲ್ಲಿ ಅರಾಜಕತೆ ಸೃಷ್ಟಿಸಿ, ದೇಶದ ಅಧಿಕಾರವನ್ನು ಕಸಿದುಕೊಳ್ಳುವ ಸಂಚು ರೂಪಿಸಿದ್ದಾರೆ. ತರ್ನ್‍ತರಣ್ ಪೊಲೀಸ್ ಠಾಣೆಯ ಮೇಲಿನ ದಾಳಿ ಸರ್ಕಾರದ ಭದ್ರತಾ ವ್ಯವಸ್ಥೆಗೆ ಹಿಡಿದ ಕನ್ನಡಿ. ಮುಖ್ಯಮಂತ್ರಿಭಗವಂತ್ ಮಾನ್ ಅರವಿಂದ್ ಕೇಜ್ರಿವಾಲ್ ಅವರ ಕೈಗೊಂಬೆಯಾಗಿದ್ದಾರೆ. ಈ ಮೂಲಕ ಇಡೀ ದೇಶದ ಭದ್ರತೆಯನ್ನೇ ಅಪಾಯಕ್ಕೆ ಸಿಲುಕಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
Rocket propelled, grenade, attack, police station, Punjab,