ಬೆಂಗಳೂರು, ಜ.8- ಕಳೆದ ಎರಡು-ಮೂರು ವರ್ಷಗಳಿಂದ ನಟ-ನಟಿಯರು ತಮ್ಮ ಹುಟ್ಟು ಹಬ್ಬವನ್ನು ಕೊರೊನಾ ಕಾರಣದಿಂದಾಗಿ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವುದನ್ನು ಬಿಟ್ಟಿದ್ದಾರೆ. ಅದರಂತೆ ನಟ ಯಶ್ ಕೂಡ ಎರಡು ವರ್ಷಗಳಿಂದ ಬರ್ತಡೇ ಸೆಲೆಬ್ರೇಷನ್ಗೆ ಬ್ರೇಕ್ ಹಾಕಿದ್ದರು. ಕೆಜಿಎಫ್-2 ಚಿತ್ರ ಪ್ರಪಂಚಾದ್ಯಂತ ದೊಡ್ಡ ಯಶಸ್ಸು ಕಂಡ ನಂತರ ದೇಶದ ಮೂಲೆ ಮೂಲೆಗಳಲ್ಲಿ ಅಭಿಮಾನಿಗಳು ಹುಟ್ಟಿಕೊಂಡು ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ.
ಈ ವರ್ಷವಾದರೂ ತಮ್ಮ ನೆಚ್ಚಿನ ನಟನ 37ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ಲಕ್ಷಾಂತರ ಅಭಿಮಾನಿಗಳು ಅನೇಕ ಯೋಜನೆಗಳನ್ನು ರೂಪಿಸಿಕೊಂಡಿದ್ದರು. ಹಾಗೆಯೇ ಹೊಸ ಸಿನಿಮಾಗಳ ಅನೌ ಆಗಬಹುದು ಎಂದು ಕಾತರದಿಂದ ಕಾಯುತ್ತಿದ್ದರು. ಆದರೆ, ಕೊರೊನಾ ಪ್ರಕರಣಗಳು ಮತ್ತೆ ಪ್ರಪಂಚಾದ್ಯಂತ ಹೆಚ್ಚುತ್ತಿರುವುದರಿಂದ ಯಶ್ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದು ಬೇಡ ಎಂದಿದ್ದರು. ಇದಕ್ಕಾಗಿ ಅಭಿಮಾನಿಗಳಿಗೆ ಪತ್ರ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ನನಗೆ ಗೊತ್ತು ನೀವೆಲ್ಲರೂ ಕಾಯುತ್ತಿದ್ದೀರಾ. ಹುಟ್ಟಿದ ದಿನ ವಿಶೇಷ ಅಂತ ನನಗನಿಸೋಕೆ ಶುರುವಾಗಿಲ್ಲೇ ಇತ್ತೀಚಿನ ವರ್ಷಗಳಲ್ಲಿ. ನಾನು ಕೂಡ ಹುಟ್ಟುಹಬ್ಬದಂದು ನಿಮ್ಮ ಜೊತೆ ಸಮಯ ಕಳೆಯಬೇಕು ಅಂತ ಅಂದುಕೊಂಡಿದ್ದೆ. ಆದರೆ, ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನು ಸ್ವಲ್ಪವೇ ಸಮಯ ಕೊಡಿ. ವಿಭಿನ್ನವಾಗಿರುವುದೇನನ್ನೋ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ.
ಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಉಡುಗೊರೆ. ಈ ವರ್ಷದ ಹುಟ್ಟುಹಬ್ಬದಂದು ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ನಿಮಗೆ ಸಿಗುತ್ತೇನೆ. ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ ಎಂದು ಭರವಸೆ ನೀಡಿz್ದÁರೆ.
ಕೆಜಿಎಫ್ ಚಾಪ್ಟರ್-2 ನಂತರ ಯಶ್ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಯಾವ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡ್ತಾರೆ ಎನ್ನುವ ಕುತೂಹಲ ಭಾರತೀಯ ಸಿನಿರಸಿಕರಲ್ಲಿದೆ. ಹಾಲಿವುಡ್ ರೇಂಜ್ನಲ್ಲಿ ಮುಂದಿನ ಸಿನಿಮಾ ಮಾಡುವುದಾಗಿ ಯಶ್ ಸುಳಿವು ಕೊಟ್ಟಿz್ದÁರೆ. ನನ್ನ ಸಿನಿಮಾ ಬಗ್ಗೆ ನಾನೇ ಹೇಳುವವರೆಗೂ ಊಹಾಪೆÇೀಹಗಳನ್ನು ನಂಬಬೇಡಿ ಎಂದು ಕೂಡ ಹೇಳಿz್ದÁರೆ.
ಬಹಳ ದಿನಗಳಿಂದ ಕೆವಿಎನ್ ಪೆÇ್ರಡಕ್ಷನ್ ಬ್ಯಾನರ್ನಲ್ಲಿ ಯಶ್ ಸಿನಿಮಾ ಮಾಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಮಫ್ತಿ ನರ್ತನ್ ಕಥೆ ಬರೀತಿz್ದÁರೆ ಎಂಬ ಮಾಹಿತಿ ಕೂಡ ಇತ್ತು. ಆದರೆ, ತಮಿಳು ನಿರ್ದೇಶಕರೊಬ್ಬರು ಯಶ್ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಮಾತುಗಳು ಈಗ ಕೇಳಿಬರುತ್ತಿವೆ.
ಕೆವಿಎನ್ ಸಂಸ್ಥೆ ಬರೋಬ್ಬರಿ 400 ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಿದೆ ಎನ್ನಲಾಗುತ್ತಿದೆ. ಸಿನಿಮಾಗಳ ಸಕ್ಸಸ್ ನಂತರ ಯಶ್ ಮುಂದಿನ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ. ಅದೇ ಕಾರಣಕ್ಕೆ ಯಶ್ ಕಥೆ ಆಯ್ಕೆಯಲ್ಲಿ ಒತ್ತಡಕ್ಕೆ ಸಿಲುಕಿದಂತೆ ಕಾಣುತ್ತಿದೆ.
ಅಳೆದು ತೂಗಿ ಮತ್ತೆ ಪ್ಯಾನ್ ಇಂಡಿಯಾ ಲೆವೆಲ್ಗೆ ಹೊಂದಿಕೆಯಾಗುವಂತಹ ಸಿನಿಮಾ ಮಾಡಲು ಮುಂದಾಗಿz್ದÁರೆ. ಮಧ್ಯರಾತ್ರಿಯಲ್ಲಿ ಕೆಜಿಎಫ್ ಹಿನ್ನೆಲೆಯ ಕೇಕ್ ಕತ್ತರಿಸಿ ಕುಟುಂಬಸ್ಥರು ಯಶ್ ಹುಟ್ಟುಹಬ್ಬ ಆಚರಿಸಿಕೊಂಡಿz್ದÁರೆ. ಈ ವಿಡಿಯೋವನ್ನು ಪತ್ನಿ ರಾಕಾ ಪಂಡಿತ್ ಇನ್ಸ್ಟ್ರಾಗ್ರಾಮ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿz್ದÁರೆ.
ತಮ್ಮ ಪ್ರೀತಿಯ ಅಪ್ಪನ ಹುಟ್ಟುಹಬ್ಬಕ್ಕಾಗಿ ಮಕ್ಕಳಾದ ಯರ್ಥವ್, ಆಯ್ರಾ ವಿಶೇಷ ಹುಡುಗರೆ ಕೊಟ್ಟಿz್ದÁರೆ. ಹ್ಯಾಪಿ ಬರ್ತ್ ಡೇ ಡಾಡಾ ಎಂದು ಬರೆದಿರುವ ಗ್ರೀಟಿಂಗ್ ಮೇಲೆ, ಇಬ್ಬರು ಮಕ್ಕಳ ಕೈ ಅಚ್ಚು ಇದೆ. ನೀಲಿ ಮತ್ತು ಹಸಿರು ಬಣ್ಣದಲ್ಲಿ ಕೈ ಅಚ್ಚು ಒತ್ತಾಗಿದೆ. ಇದನ್ನು ಕೂಡ ನಟಿ ರಾಕಾ ಪಂಡಿತ್ ತಮ್ಮ ಇನ್ಸ್ಟ್ರಾಗ್ರಾಂನಲ್ಲಿ ಹಂಚಿಕೊಂಡಿz್ದÁರೆ.