ಬ್ರಿಸ್ಬೇನï, ಮಾ 4- ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಸಮೃದ್ಧ ವಿಕೆಟ್ ಕೀಪರ್, ಎಡಗೈ ಬ್ಯಾಟ್ಸಮಾನ್ ರಾಡ್ ಮಾರ್ಷ್(74) ಅವರು ನಿಧನರಾಗಿದ್ದಾರೆ. ಕ್ವೀನ್ಸಾಲ್ಯಾಂಡ್ ರಾಜ್ಯದಲ್ಲಿ ನಿ ಸಂಗ್ರಹಣಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಹೃದಯಾಘಾತದಿಂದ ಅಡಿಲೇಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಆರೋಗ್ಯ ಏರುಪೇರಾಗಿ ಬೆಳಿಗ್ಗೆ ನಿಧನರಾಗಿದ್ದಾರೆ.
1970 ರಿಂದ 1984 ರವರೆಗೆ ಆಸ್ಟ್ರೇಲಿಯಾ ಪರ 96 ಟೆಸ್ಟ್ ಪಂದ್ಯಗಳನ್ನು ಆಡಿದ ಮಾರ್ಷ್ ಅವರು ಕ್ರಿಕೆಟ್ ದಿಗ್ಗಜ ವೇಗಿ ಡೆನ್ನಿಸ್ ಲಿಲ್ಲೀ ಅವರೊಂದಿಗೆ ಸಹ ಆಟಗಾರರಾಗಿ ಉತ್ತಮ ಗೆಳೆಯರಾಗಿದ್ದರು. ಸ್ಪೋರ್ಟ್ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್ ಶುಕ್ರವಾರ ದೃಢಪಡಿಸಿತು. ಟೆಸ್ಟ್ ಕ್ರಿಕೆಟ್‍ನಲ್ಲಿ ಶತಕ ಗಳಿಸಿದ ಮೊದಲ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಎನಿಸಿದ್ದ ಅವರು 92 ಏಕದಿನ ಹಾಗು 100ಕ್ಕೂ ಹೆಚ್ಚು ಟೆಸ್ಟ್‍ನಲ್ಲಿ ವಿಕೆಟ್ ಕೀಪಿಂಗ್ ದಾಖಲೆಯನ್ನು ಮಾರ್ಷ್ ಹೊಂದಿದ್ದರು.
ನಿವೃತ್ತಿ ನಂತರ ಅವರು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‍ನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗಳನ್ನು ಮುನ್ನಡೆಸಿದರು ಮತ್ತು ದುಬೈನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ವಿಶ್ವ ಕೋಚಿಂಗ್ ಅಕಾಡೆಮಿಯ ಉದ್ಘಾಟನಾ ಮುಖ್ಯಸ್ಥರಾಗಿದ್ದರು.
2014 ರಲ್ಲಿ, ಅವರು ಆಸ್ಟ್ರೇಲಿಯಾ ತಂಡದ ಆಟಗಾರರ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಎರಡು ವರ್ಷಸೇವೆ ಸಲ್ಲಿಸಿದ್ದರು. ಮಾರ್ಷ್ ಅವರು ಆಟತಂತ್ರಗಾರ , ಭಯವಿಲ್ಲದೆ ಮಾತನಾಡುತ್ತಿದ್ದರು ಮತ್ತು ಯುವ ಕ್ರಿಕೆಟಿಗರ ಪ್ರತಿಭೆಯನ್ನು ಗುರುತಿಸಿದ್ದರು ಹಾಲ್ ಆಫ್ ಫೇಮ್ನ ಅಧ್ಯಕ್ಷ ಜನ್ ಬಟ್ರ್ರಾಂಡï,ಎಂದು ಹೇಳಿದರು.ಮಾರ್ಷ್ ಕ್ಯಾಚ್ , ಬೌಲ್ಡï ಲಿಲ್ಲಿ ಎಂಬ ಪದವು ಜನಪದವಾಗಿತ್ತು ಇತಿಹಾಸವನ್ನು ಸೃಷ್ಟಿಸಿದರು ಎಂದು ಸ್ಮರಿಸಿದ್ದಾರೆ.
