ಇಂಡಿಯಾದ ನಾಯಕ ರೋಹಿತ್ ಶರ್ಮಾ ಆಸ್ಪತ್ರೆಗೆ ದಾಖಲು

Social Share

ಮಿರ್‍ಪುರ್, ಡಿ.7- ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ 2ನೇ ಏಕದಿನ ಪಂದ್ಯದ ವೇಳೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರ ಕೈ ಬೆರಳಿಗೆ ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಟಾಸ್ ಗೆದ್ದು ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿತು. 2ನೆ ಓವರ್‍ನಲ್ಲಿ ಮೊಹಮ್ಮದ್ ಶಿರಾಜ್ ಬೌಲಿಂಗ್‍ನಲ್ಲಿ ಬಾಂಗ್ಲಾದ ಆರಂಭಿಕ ಆಟಗಾರ ಅನಮುಲ್ ಹಕ್‍ರ ಬ್ಯಾಟ್ ಸ್ಪರ್ಶಿಸಿದ ಚೆಂಡನ್ನು ಹಿಡಿಯುವ ಭರದಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ತಮ್ಮ ಬಲಗೈನ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ.

ನೆಲದ ಮಟ್ಟದಲ್ಲಿ ಚಿಮ್ಮಿದ ಚೆಂಡನ್ನು ಹಿಡಿಯಲು ಹೋದ ರೋಹಿತ್‍ಶರ್ಮಾರ ಹಿಡಿಯಲು ಹೋದಾಗ ಚೆಂಡು ಅವರ ಕೈ ಬೆರಳಿಗೆ ಬಲವಾದ ಬಿದ್ದ ಪರಿಣಾಮ ತಕ್ಷಣ ಅವರ ಬೆರಳಿನಿಂದ ರಕ್ತ ಸುರಿದಿದೆ. ನೋವು ತಡೆಯಲಾಗದೆ ಮೈದಾನದ ತೊರೆದಿದ್ದಾರೆ.

ವೋಟರ್ ಡೇಟಾ ಹಗರಣ : ಇಬ್ಬರು ಐಎಎಸ್ ಅಧಿಕಾರಿಗಳಿಗೆ ಮತ್ತೆ ಡ್ರಿಲ್

ಭಾರತದ ವೈದ್ಯಕೀಯ ಸಿಬ್ಬಂದಿಗಳು ರೋಹಿತ್ ಶರ್ಮಾರನ್ನು ಪರೀಕ್ಷಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ಕೈ ಬೆರಳಿನ ಸ್ಕ್ಯಾನ್ ಮಾಡಿಸಿದ್ದಾರೆ. ರೋಹಿತ್ ಶರ್ಮಾಗೆ ಆಗಿರುವ ಗಾಯ ಗಂಭೀರ ಮಟ್ಟದ್ದಗಾಗಿಲ್ಲದ ಕಾರಣ 3ನೆ ಪಂದ್ಯದಲ್ಲಿ ರೋಹಿತ್ ಶರ್ಮಾ ತಂಡಕ್ಕೆ ಮರಳುವ ಸೂಚನೆಗಳಿವೆ.

ರೋಹಿತ್ ಶರ್ಮಾ ಮೈದಾನ ತೊರೆದಿದ್ದರಿಂದ ಉಪನಾಯಕ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಅವರು ನಾಯಕನ ಜವಾಬ್ದಾರಿಯನ್ನು ನಿಭಾಯಿಸಿದರೆ, ಆರ್‍ಸಿಬಿ ತಂಡದ ಆಟಗಾರ ರಜತ್ ಪಾಟಿದಾರ್ ಬದಲಿ ಆಟಗಾರನ ರೂಪದಲ್ಲಿ ತಂಡವನ್ನು ಕೂಡಿಕೊಂಡರು. ಪಂದ್ಯದ ಆರಂಭಕ್ಕೂ ಮುನ್ನ ಯುವ ವೇಗಿ ಕುಲ್‍ದೀಪ್ ಸೇನ್ ಅವರು ಗಾಯಗೊಂಡಿದ್ದರಿಂದ ಅವರ ಸ್ಥಾನವನ್ನು ಉಮ್ರಾನ್ ಮಲಿಕ್ ತುಂಬಿದರು.

ಸಿದ್ರಾಮುಲ್ಲಾಖಾನ್ ನಾಮಕರಣಕ್ಕೆ ಬೇಸರವಿಲ್ಲ: ಸಿದ್ದರಾಮಯ್ಯ

3 ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡವು ಈಗಾಗಲೇ 1-0 ಯಿಂದ ಹಿನ್ನೆಡೆ ಅನುಭವಿಸಿದ್ದು, ಸರಣಿಯಲ್ಲಿ ಜೀವಂತವಾಗಿರಲು ಇಂದಿನ ಪಂದ್ಯವನ್ನು ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿತ್ತು. ಆದರೆ ನಾಯಕ ರೋಹಿತ್ ಶರ್ಮಾರ ಗಾಯದ ಸಮಸ್ಯೆಯು ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

Rohit Sharma, hospital, left, thumb injury,

Articles You Might Like

Share This Article