BIG NEWS: ವಿಶ್ವಕಪ್‍ ಸೆಮಿಫೈನಲ್‌ನಿಂದ ರೋಹಿತ್ ಶರ್ಮಾ ಔಟ್?

Social Share

ಅಡಿಲೇಡ್, ನ.8- ನೆಟ್ ಸೆಷನ್‍ನಲ್ಲಿ ಬ್ಯಾಟಿಂಗ್ ಅಭ್ಯಾಸದ ವೇಳೆ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಮುಂಗೈಗೆ ಗಂಭೀರ ಗಾಯವಾಗಿದೆ. ಗುರುವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್‍ನ ಸೆಮಿಫೈನಲ್‍ಗೆ ಮುನ್ನ ರೋಹಿತ್ ಗಾಯಗೊಂಡಿರುವುದು ಭಾರತ ತಂಡಕ್ಕೆ ಆತಂಕ ಶುರುವಾಗಿದೆ.

ತಂಡದ ತರಬೇತುದಾರ ಎಸ್ ರಘು ಅವರಿಂದ ಒಂದು ಶಾರ್ಟ್ ಬಾಲ್ ಅವರ ಬಲ ಮುಂದೋಳಿಗೆ ಬಡಿಯಿತು ತಕ್ಷಣವೇ ತೀವ್ರ ನೋವು ಅನುಭವಿಸಿ ಅಭ್ಯಾಸ ಮೊಟಕುಗೊಳಿಸಿ ಚಿಕಿತ್ಸೆಗೆ ತೆರಳಿದರು. ನಂತರ ಅವರ ಬಲಗೈಗೆ ದೊಡ್ಡ ಐಸ್ ಪ್ಯಾಕ್ ಕಟ್ಟಲಾಗಿತ್ತು ಐಸ್ ಪೆಟ್ಟಿಗೆಯ ಮೇಲೆ ಕುಳಿತು ತರಬೇತಿಯನ್ನು ದೂರದಿಂದ ತಂಡದ ಸದಸ್ಯರನ್ನು ನೋಡುತ್ತಿದ್ದರು ತರಬೇತುದಾರ ಪ್ಯಾಡಿ ಅಪ್ಟನ್ ಅವರೊಂದಿಗೆ ಸಾಕಷ್ಟು ಸಮಯದವರೆಗೆ ಮಾತನಾಡುತ್ತಿರುವುದು ಕಂಡುಬಂದಿದೆ.

ಶೇ.10ರಷ್ಟು ಮೀಸಲಾತಿ : ಪ್ರಧಾನಿ ಮೋದಿ ಸಾಮಾಜಿಕ ನ್ಯಾಯದ ಕಾರ್ಯಕ್ಕೆ ಸಂದ ಜಯ

ಆಟಕ್ಕೆ 48 ಗಂಟೆಗಳಿರುವಾಗ, ಭಾರತೀಯ ವೈದ್ಯಕೀಯ ತಂಡವು ಚಿಕಿತ್ಸೆ ನೀಡುತ್ತಿದೆ, ಸುಮಾರು 150 ಕಿ.ಮೀ ವೇಗದಲ್ಲಿ ಚೆಂಡು ಬಡಿದಿದ್ದು ಮೂಳೆ ಮುರಿತವಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಿದ್ದು, ಇಂದು ಸಂಜೆ ವೇಳೆಗೆ ರೋಹಿತ್ ಸೆಮಿಫೈನಲ್‍ನಲ್ಲಿ ಆಡುತ್ತಾರ ಇಲ್ಲವೆ ಎಂಬುದು ಖಚಿತವಾಗಲಿದೆ

ಮೀಸಲಾತಿಗೆ ಆರ್ಥಿಕತೆ ಮಾನದಂಡವಲ್ಲ : ಸಿದ್ದರಾಮಯ್ಯ

Articles You Might Like

Share This Article